ಹನುಮಸಾಗರ(ಅ.14): ಗ್ರಾಮದಲ್ಲಿ ಸತತ ಮೂರ್ನಾಲ್ಕು ದಿನಗಳಿಂದ ಬೀಳುತ್ತಿರುವ ಮಳೆಗೆ ಅಭಿನವ ವೆಂಕಟೇಶ್ವರ ಗುಡ್ಡದ ಕೆಳಭಾಗದಲ್ಲಿ ಮಣ್ಣು ಸವಕಳಿಯಿಂದಾಗಿ ಗುಡ್ಡದ ದೊಡ್ಡ ಬಂಡೆಗಳು ಉರು​ಳುವ ಹಂತಕ್ಕೆ ಬಂದಿ​ದ್ದು, ಈ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಎಂ. ಸಿದ್ದೇಶ ಗುಡ್ಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಸತತ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶ್ರೀವೆಂಕಟೇಶ್ವರ ಗುಡ್ಡದ ಕಲ್ಲು ಬಂಡೆಗಳ ಕೆಳಭಾಗದಲ್ಲಿ ಇರುವ ಮಣ್ಣಿನ ಸವಕಳಿಯಿಂದಾಗಿ ಗುಡ್ಡದ ದೊಡ್ಡ ದೊಡ್ಡ ಬಂಡೆಗಳು ಕೆಳಗೆ ಉರುಳುವ ಸಾಧ್ಯತೆಯಿದೆ. ಅವು ಉರುಳಿದರೆ ಕೆಳ ಭಾಗದಲ್ಲಿರುವ ಮನೆಗಳಿಗೆ ಹಾನಿಯಾಗುವುದಲ್ಲದೇ ಸಾರ್ವಜನಿಕರ ಜೀವ ಹಾನಿಯಾಗುವ ಸಂಭವ ಇದೆ. ಇದನ್ನು ಅರಿತ ಮುಖಂಡರಾದ ಸೂಚಪ್ಪ ಭೋವಿ, ಆಸೀಫ್‌ ಡಾಲಾಯಿತ, ತಹಸೀಲ್ದಾರ್‌ ಗಮನಕ್ಕೆ ತಂದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

'ಶ್ರೀರಾಮುಲುರನ್ನು ಬಿಜೆಪಿ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ'

ದೊಡ್ಡಗುಂಡಿಯನ್ನು ತೋಡಿ ಬಂಡೆಗಳು ಉರುಳಿದರೆ ನೇರವಾಗಿ ತೆಗ್ಗಿಗೆ ಬೀಳುವಂತೆ ಮಾಡಬೇಕು ಎಂದು ಪಿಡಿಒ ನಿಂಗಪ್ಪ ಮೂಲಿಮನಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಜಿಪಂ ಸದಸ್ಯ ಭೀಮಣ್ಣ ಅಗಸಿಮುಂದಿನ, ಪಿಎಸ್‌ಐ ಅಶೋಕ ಬೇವೂರ, ರಾಮಣ್ಣ, ರಾಘವೇಂದ್ರ ವಡ್ಡರ ಗ್ರಾಪಂ ಸಿಬ್ಬಂದಿ ಮಹಾಂತಯ್ಯ ಕೋಮಾರಿ ಸೇರಿದಂತೆ ಇತರರು ಇದ್ದರು.