Asianet Suvarna News Asianet Suvarna News

Chamarajanagar : ಅರೇಪುರ - ತೊಂಡವಾಡಿ ಗೇಟ್‌ ನಡುವೆ ರಸ್ತೆ ಕುಸಿತ

ತಾಲೂಕಿನ ಅರೇಪುರ-ತೊಂಡವಾಡಿ ಗೇಟ್‌ ನಡುವಿನ (ಮೈಸೂರು-ಊಟಿ ಹೆದ್ದಾರಿ)ಸೇತುವೆ ಬಳಿ ರಸ್ತೆ ಕುಸಿದಿರುವ ಹಿನ್ನೆಲೆ ವಾಹನಗಳು ಹಳ್ಳಕ್ಕೆ ದಿಢೀರ್‌ ಬಿದ್ದು ಮೇಲೆದ್ದುವಾಗ ಪ್ರಯಾಣಿಕರು ಹಾಗೂ ವಾಹನಗಳಿಗೆ ತೊಂದರೆಯಾಗುತ್ತಿದೆ.

Road collapse between Arepura Thondawadi Gate in Chamarajanagar snr
Author
First Published Nov 8, 2022, 5:52 AM IST

  ಗುಂಡ್ಲುಪೇಟೆ (ನ.08):  ತಾಲೂಕಿನ ಅರೇಪುರ-ತೊಂಡವಾಡಿ ಗೇಟ್‌ ನಡುವಿನ (ಮೈಸೂರು-ಊಟಿ ಹೆದ್ದಾರಿ)ಸೇತುವೆ ಬಳಿ ರಸ್ತೆ ಕುಸಿದಿರುವ ಹಿನ್ನೆಲೆ ವಾಹನಗಳು ಹಳ್ಳಕ್ಕೆ ದಿಢೀರ್‌ ಬಿದ್ದು ಮೇಲೆದ್ದುವಾಗ ಪ್ರಯಾಣಿಕರು ಹಾಗೂ ವಾಹನಗಳಿಗೆ ತೊಂದರೆಯಾಗುತ್ತಿದೆ.

ಮೈಸೂರು-ಊಟಿ ಹೆದ್ದಾರಿಯಲ್ಲಿ (Highway)  ದಿನ ನಿತ್ಯ ಸಾವಿರಾರು ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಅಲ್ಲದೆ ರಾಜ್ಯದ ಹಾಗೂ ಕೇರಳ, (Kerala)  ತಮಿಳುನಾಡಿನ ಆಂಬ್ಯುಲೆನ್ಸ್‌ ಸೇತುವೆ ಬಳಿ ಹಳ್ಳ ಗೊತ್ತಿಲ್ಲದೆ ಹೋದಾಗ ಮೇಲೆದ್ದು ಕೆಳಗೆ ಬೀಳುತ್ತಿದ್ದಾರೆ.

ಅಲ್ಲದೆ ಕಾರು, ಬೈಕ್‌ ಸವಾರರಿಗೂ ಈ ಸೇತುವೆ ಹಳ್ಳ ಭಾರಿ ಸಂಕಟ ಕೊಡುತ್ತಿವೆ. ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಗೆ ಈ ಹಳ್ಳ ಕಾಣದ ಕಾರಣ ಎಲ್ಲಾ ವಾಹನಗಳು ಹಳ್ಳಕ್ಕೆ ಬಿದ್ದಾಗ ಮೇಲೆದ್ದು ಕೇಳಗೆ ಬೀಳುತ್ತಿದ್ದಾರೆ ಎಂದು ತಗ್ಗಲೂರು ನಾಗರಾಜು ದೂರಿದ್ದಾರೆ.

ಬಸ್‌ ಬ್ರೇಕ್‌ ಹಾಕಲ್ಲ

ಗುಂಡ್ಲುಪೇಟೆ ಹಾಗೂ ನಂಜನಗೂಡು ಕಡೆಯಿಂದ ಬರುವ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಸೇತುವೆ ಬಳಿ ಕುಸಿತ ರಸ್ತೆ ಬಂದಾಗ ಕನಿಷ್ಠ ಬ್ರೇಕ್‌

ಹಾಕುತ್ತಿಲ್ಲ. ಬಂದ ವೇಗದಲ್ಲಿ ಬಸ್‌ ಹೋಗುವಾಗ ತುಂಬಿದ ಬಸ್‌ನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮೇಲೆ ಕೆಳಗೆ ಎದ್ದು ಬೀಳುವಂತಾಗುತ್ತದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಮೈಸೂರು ಕಡೆಯಿಂದ ಹಾಗೂ ಗುಂಡ್ಲುಪೇಟೆ ಕಡೆಯಿಂದ ಬರುವ ವಾಹನಗಳು ಕುಸಿತ ಸೇತುವೆ ಹಳ್ಳಕ್ಕೆ ಬಿಟ್ಟಾಗ ಮಾತ್ರ ಚಾಲಕ ಹಾಗೂ

ಪ್ರಯಾಣಿಕರಿಗೆ ಹಳ್ಳ ಇರುವುದು ಗೊತ್ತಾಗುತ್ತದೆ. ಹಳ್ಳಕ್ಕೆ ಬಿಟ್ಟನೆರೆ ರಾಜ್ಯಗಳ ಸವಾರರು ಹಾಗೂ ಪ್ರಯಾಣಿಕರು ತಾಲೂಕು ಆಡಳಿತ ಬೈದು ಕೊಂಡು ತೆರಳುತ್ತಿದ್ದಾರೆ.

ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಸ್‌. ನಿರಂಜನಕುಮಾರ್‌ ಇದೇ ರಸ್ತೆಯಲ್ಲಿ ವಾರದಲ್ಲಿ ಮೂರ್ನಾಲ್ಕು ದಿನ ಕಾರಲ್ಲಿ ಸಂಚಾರ ಮಾಡುತ್ತಿದ್ದಾರೆ ಅವರ ಕಾರು ಕೂಡ ಹಳ್ಳಕ್ಕೆ ಬೀಳುತ್ತಿದೆ ಆದರೂ ಶಾಸಕರು ಹಳ್ಳ ಮುಚ್ಚಿಸುವಲ್ಲಿ ವಿಫಲರಾಗಿದ್ದಾರೆ.

ಹಳ್ಳಕ್ಕೆ ವಾಹನಗಳು ಬಿಟ್ಟಾಗ ಶಾಕ್‌ ಅಬ್ಸರ್‌, ಆಕ್ಸಲ್‌ ಕಟ್‌ ಆಗುವ ಸಾಧ್ಯತೆ ಹೆಚ್ಚಿದೆ. ಶಾಸಕರು ತುರ್ತಾಗಿ ಸೇತುವೆ ಬಳಿ ರಸ್ತೆ ಕುಸಿತದಿಂದ ಬಿದ್ದ ಹಳ್ಳ ಮುಚ್ಚಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಲಿ ಎಂದು ಸವಾರರು ಮನವಿಯಾಗಿದೆ.

ರಸ್ತೆ ಹಾಳಾಗಲು ಓವರ್‌ ಲೋಡ್‌ ಕಲ್ಲು ಕಾರಣ

ಗುಂಡ್ಲುಪೇಟೆ: ಮೈಸೂರು-ಊಟಿ ಹೆದ್ದಾರಿಯಲ್ಲಿ ಹಳ್ಳ ಹಾಗೂ ರಸ್ತೆಯಲ್ಲಿ ಗುಂಡಿ ಬೀಳಲು ಹೆದ್ದಾರಿಯಲ್ಲಿ ಸಂಚರಿಸುವ ಓವರ್‌ ಲೋಡ್‌ ಟಿಪ್ಪರ್‌ ಕಾರಣ ಎನ್ನಬಹುದು.

ಗುಂಡ್ಲುಪೇಟೆಯಿಂದ ಹಿರೀಕಾಟಿ ಗಡಿಯ ತನಕ ಇರುವ ಕ್ರಸರ್‌ಗಳಿಗೆ ಕ್ವಾರಿಯ ರಾ ಮೆಟೀರಿಯಲ್‌ ಹಾಗೂ ಕ್ರಸರ್‌ಗಳಿಂದ ಎಂ.ಸ್ಯಾಂಡ್‌, ಜಲ್ಲಿ ಹಾಗೂ ಡಾಂಬಾರು ತುಂಬಿದ ಓವರ್‌ ಲೋಡ್‌ ಸಾಗಾಣಿಕೆಯೇ ಸೇತುವೆ ಬಳಿ ಹೆದ್ದಾರಿ ಕುಸಿಯಲು ಹಾಗೂ ರಸ್ತೆಯಲ್ಲಿ ಗುಂಡಿ ಬೀಳಲು ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.

ಹದಗೆಟ್ಟ ರಸ್ತೆ ವ್ಯಂಗ್ಯ

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ನ. 07): ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸ ತಾಲ್ಲೂಕಿನ ಹದಗೆಟ್ಟ ರಸ್ತೆಯ ದುಸ್ಥಿತಿಯನ್ನು ವ್ಯಂಗ್ಯ ಚಿತ್ರಗಳ (Caricature) ಮೂಲಕ ವಿಡಂಬನೆ ಮಾಡಿರುವ ಪೋಟೋಗಳು ಇಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿವೆ. ರಸ್ತೆ ದುರಸ್ತಿಗೆ ಅಗ್ರಹಿಸಿ ಜನರು ವಿನೂತನವಾಗಿ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿಕೊಂಡು ಅಧಿಕಾರಿಗಳು ಜನಪ್ರತಿನಿಧಿಗಳನ್ನು ಎಚ್ಚರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಸೆಳೆಯುವ ನಿಟ್ಟಿನಲ್ಲಿ ನಾಗರಿಕರು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದು, ರಸ್ತೆ ದೂಳಿನಿಂದಾಗುತ್ತಿರುವ ಸಮಸ್ಯೆಗಳನ್ನು ವ್ಯಂಗ್ಯ ಚಿತ್ರಗಳ ಮೂಲಕ ಬಿಂಬಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಳಸ ಪಟ್ಟಣದ ಮುಖ್ಯ ರಸ್ತೆ ಹಾಗೂ ಹೊರನಾಡು ರಸ್ತೆ ಸಂಪೂರ್ಣವಾಗಿ ಹೊಂಡಗುಂಡಿಗಳಿಂದ ಹದಗೆಟ್ಟಿದ್ದು, ರಸ್ತೆಗಳಲ್ಲಿ ವಾಹನಗಳು ಸಂಚರಿಸುವ ವೇಳೆ ಭಾರೀ ಧೂಳು ಎದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಒಂದು ಕಿಲೋ ಮೀಟರ್  ರಸ್ತೆ  ದುರಸ್ತಿಗೆ ಆಗ್ರಹಿಸಿ ನಾಗರಿಕರು ಜನಪ್ರತಿನಿಧಿಗಳು, ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮನವಿ ಮಾಡಿದರೂ ಪುಯೋಜನವಾಗಿಲ್ಲ ಎನ್ನಲಾಗಿದೆ. 

Chikkamagaluru Kalasa Taluku Dusty Road memes viral on Social Media mnj

ಈ ಹಿನ್ನೆಲೆಯಲ್ಲಿ ನಾಗರಿಕರು ರಸ್ತೆ ದುರಸ್ತಿಗೆ ಆಗ್ರಹಿಸಿ ಅಧಿಕಾರಿಗಳ ಗಮನಸೆಳೆಯಲು ವ್ಯಂಗ್ಯ ಚಿತ್ರಗಳನ್ನು ಸೃಷ್ಟಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಈ ವ್ಯಂಗ್ಯ ಚಿತ್ರಗಳು ರಸ್ತೆ ಅವ್ಯವಸ್ಥೆಯಿಂದ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳನ್ನು ಬಿಂಬಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

Follow Us:
Download App:
  • android
  • ios