Asianet Suvarna News Asianet Suvarna News

Bengaluru: ನೈಸ್ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಸ್ತೆ ಅಫಘಾತ: ಹೊಸ ರೂಲ್ಸ್ ಜಾರಿ!

ನಗರದ ನೈಸ್ ರಸ್ತೆಯಲ್ಲಿ ವೇಗದ ಚಾಲನೆಗೆ ಬ್ರೇಕ್ ಹಾಕಿ ಅಪಘಾತದ ಪ್ರಕರಣಗಳ ತಗ್ಗಿಸಲು ವೇಗದ ಮಿತಿ ಅಳವಡಿಕೆ  ಮಾಡುವ ಹೊಸ ರೂಲ್ಸ್ ಜಾರಿಯಾಗ್ತಿದೆ. ಈ ಸಂಬಂಧ ಪೊಲೀಸ್ ಕಮಿಷನರ್ ಹೊರಡಿಸಿರುವ ಆದೇಶದ ಅಂಶಗಳೇನು ಗೊತ್ತಾ?

Road accidents are increasing day by day on bengaluru nice road New rules are enforced gvd
Author
First Published Aug 2, 2024, 9:32 PM IST | Last Updated Aug 5, 2024, 4:59 PM IST

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಆ.02): ನಗರದ ನೈಸ್ ರಸ್ತೆಯಲ್ಲಿ ವೇಗದ ಚಾಲನೆಗೆ ಬ್ರೇಕ್ ಹಾಕಿ ಅಪಘಾತದ ಪ್ರಕರಣಗಳ ತಗ್ಗಿಸಲು ವೇಗದ ಮಿತಿ ಅಳವಡಿಕೆ  ಮಾಡುವ ಹೊಸ ರೂಲ್ಸ್ ಜಾರಿಯಾಗ್ತಿದೆ. ಈ ಸಂಬಂಧ ಪೊಲೀಸ್ ಕಮಿಷನರ್ ಹೊರಡಿಸಿರುವ ಆದೇಶದ ಅಂಶಗಳೇನು ಗೊತ್ತಾ? ಅತಿವೇಗವಾಗಿ ಸಂಚಾರ ಮಾಡಿ ಸಮಯ ಉಳಿಸಲು ನೈಸ್ ರಸ್ತೆ ಸವಾರರ ಸ್ಪೀಡ್ ಗೆ ಬ್ರೇಕ್ ಹಾಕಲು ಪೊಲೀಸರು ಹೊಸ ನಿಯಮ ಜಾರಿಗೆ ತಂದಿದ್ದಾರೆ‌‌. ಇದರ ಜೊತೆಗೆ ರಾತ್ರಿ ವೇಳೆ‌ ದ್ವಿಚಕ್ರ ವಾಹನ ಸಂಚಾರಕ್ಕೂ ನಿಷೇಧ ಹೇರಲಾಗಿದ್ದು ನಾಳೆಯಿಂದ ಕಟ್ಟುನಿಟ್ಟಾಗಿ ಜಾರಿಗೊಳ್ಳಲಿದೆ.

ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಕ್ಕೆ ನಿರ್ಬಂಧ. ಹೌದು! ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರಗೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನಕ್ಕೆ ನಿರ್ಬಂಧ ಹಿಂದಿನಿಂದಲೂ ಇದ್ದು ಇದೇ ನಿಯಮ ಮುಂದುವರೆಯಲಿದೆ. ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರಗೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು. ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರಿಂದ ಆದೇಶ ನೀಡಿದ್ದಾರೆ. ಅಜಾಗರೂಕತೆ ಚಾಲನೆ, ನಿರ್ಲಕ್ಷ್ಯತೆಯಿಂದ ರಸ್ತೆ ಅಫಘಾತ ಹೆಚ್ಚಾದ ಹಿನ್ನಲೆ ನಗರ ಪೊಲೀಸ್ ಆಯುಕ್ತ ಬಿ‌.ದ‌ಯಾನಂದ್ ಆದೇಶ ಹೊರಡಿಸಿದ್ದು‌, ನಿಯಮ ಪಾಲನೆ ಜೊತೆಗೆ ಮಾರ್ಗ ಸೂಚಿಗಳಿದ್ರು ಪಾಲಿಸದ ವಾಹನ ಚಾಲಕರು ವಿರುದ್ದ ಕಾನೂನು ರೀತ್ಯಾ ಆಯಾ ಠಾಣಾ ವ್ಯಾಪ್ತಿಯ ಸಂಚಾರ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. 

ಸಿದ್ದರಾಮಯ್ಯ ಇಳಿಸುವ ಸಂಚು ಮಾಡಿರದಿದ್ದರೆ ಪ್ರಮಾಣ ಮಾಡಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ನೈಸ್ ರಸ್ತೆಯ ಸುತ್ತಾಮುತ್ತಾ ಇರುವ ಎಂಟು ಸಂಚಾರಿ ಠಾಣೆಯ ಠಾಣಾಧಿಕಾರಿಗಳ ವರದಿ ಅನ್ವಯಿಸಿ ಆದೇಶ ನೀಡಲಾಗಿದೆ.ವರದಿ ನೀಡಿರುವ ಕಾಮಾಕ್ಷಿ ಪಾಳ್ಯ,ಬ್ಯಾಟರಾಯನಪುರ, ಕೆಂಗೇರಿ,ಹುಳಿಮಾವು, ತಲಘಟ್ಟಪುರ,ಎಲೆಕ್ಟ್ರಾನಿಕ್ ಸಿಟಿ , ಜ್ನಾನಭಾರತಿ, ಕೆ.ಎಸ್ ಠಾಣೆಯ ಠಾಣಾಧಿಕಾರಿಗಳು ವಿಸ್ತ್ರತ ವರದಿ ನೀಡಿದ್ರು‌‌‌.ಈ ಹಿನ್ನಲೆ‌ ಆದೇಶ ಹೊರಡಿಸಿ ನಿಯಮ ಉಲ್ಲಂಘಿಸುವವರ ಮೇಲೆ ಕ್ರಮಕ್ಕೆ ಸೂಚನೆ ನೀಡಲಾಗಿದೆ‌.

ನೈಸ್ ರಸ್ತೆ ಕಳೆದ ಮೂರು ವರ್ಷದ ಹೆಚ್ಚಾಗಿರುವ ಅಫಘಾತಗಳ ಸಂಖ್ಯೆ ನೈಸ್ ರಸ್ತೆ ಅಫಘಾತಗಳಾದ ಸಂಖ್ಯೆ ಹಾಗೂ ವರ್ಷ:
2022

ಮಾರಣಾಂತಿಕ ಅಫಘಾತಗಳ ಸಂಖ್ಯೆ: 42
ಮಾರಣಾಂತಿಕವಲ್ಲದ ಅಫಘಾತಗಳ: 69

2023
ಮಾರಣಾಂತಿಕ ಅಫಘಾತಗಳ ಸಂಖ್ಯೆ: 37
ಮಾರಣಾಂತಿಕವಲ್ಲದ ಅಫಘಾತಗಳ: 83

2024 ಜೂನ್ ವರಗೆ
ಮಾರಣಾಂತಿಕ ಅಫಘಾತಗಳ ಸಂಖ್ಯೆ:13
ಮಾರಣಾಂತಿಕವಲ್ಲದ ಅಪಘಾತ :52

ನೆರೆ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ, ಸಂತ್ರಸ್ತರ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ: ಅರವಿಂದ ಬೆಲ್ಲದ

ಈ ಎಲ್ಲಾ ಅಂಕಿ ಸಂಖ್ಯೆಗಳನ್ನು ಸಂಚಾರಿ ಪೊಲೀಸರು ದಾಖಲಿಸಿದ್ದು,ಒಟ್ಟಾರೆ ಮೃತ್ಯು‌ಕೂಪವಾಕ್ತಿರುವ ನೈಸ್ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ನಿಯಂತ್ರಿಸಲು ಪರಣಾಮಕಾರಿಯಾಗಿ ನಿಯಮ ಜಾರಿಗೆ ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಇನ್ನಾದ್ರೂ ನೈಸ್ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ನಿಯಂತ್ರಣವಾಗಲಿದೆಯಾ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios