ಕಾರವಾರ(ಮೇ.19): ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆ ಕಾರವಾರವನ್ನು ನಿರ್ಬಂಧಿತ ವಲಯವನ್ನಾಗಿ ಘೋಷಣೆ ಮಾಡಿದ್ದು, ಇಲ್ಲಿನ ಗಲ್ಲಿ ಗಲ್ಲಿಗಳಲ್ಲಿಯೂ ಪೊಲೀಸ್ ಚೆಕಿ0ಗ್ ವ್ಯವಸ್ಥೆ ಮಾಡಲಾಗಿದೆ. 

ಕಾರವಾರದ ಪ್ರಮುಖ ರಸ್ತೆ ಹಾಗೂ ಗಲ್ಲಿಗಳಲ್ಲಿ ಪೊಲೀಸ್ ಚೆಕ್‌ ಅಪ್ ಮಾಡಲಾಗುತ್ತಿದೆ. ಬ್ಯಾರಿಕೇಡ್ ಹಾಕಿ ಪ್ರತಿಯೊಬ್ಬರನ್ನೂ ಪೊಲೀಸರು ಪರಿಶೀಲಿಸುತ್ತಿದ್ದು, ಕಠಿಣ ನಿರ್ಬಂಧ ವಿಧಿಸಲಾಗಿದೆ. 

ಅನಗತ್ಯವಾಗಿ ರಸ್ತೆಗಿಳಿದವರ ಮೇಲೆ  ಪೊಲೀಸರು ದಂಡ ಪ್ರಯೋಗ ಮಾಡುತ್ತಿದ್ದು, ವಾಹನಗಳನ್ನು ಅಡ್ಡಹಾಕಿ ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಯಾವುದೇ ರೀತಿಯ ಸಂಚಾರಕ್ಕೂ ಅವಕಾಶ ನೀಡುತ್ತಿಲ್ಲ. 

ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ? .

ಕಠಿಣ ನಿಯಮ ಹಿನ್ನೆಲೆ ಯಾರಿಗೂ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ನಿರ್ಬಂಧದ ನಡುವೆಯೂ ಇಂದು ರಿಕ್ಷಾದಲ್ಲಿ ನೀರಿನ ಕ್ಯಾನ್ ಹಿಡಿದುಕೊಂಡು ಬಂದ ಮಹಿಳೆಯನ್ನು ಪೊಲೀಸರು ತಡೆದು ನಡೆದೇ ಹೋಗುವಂತೆ ಮಾಡಿದರು.

ಮಾಸ್ಕ್ ಕೂಡಾ ಧರಿಸಲ್ಲ ಎಂದು ಪೊಲೀಸರ ಜತೆ ಮಹಿಳೆ ವಾಗ್ವಾದಕ್ಕಿಳಿದಿದ್ದು ಈ ವೇಳೆ ರಿಕ್ಷಾವನ್ನು ಪೊಲೀಸರು ನಿಲ್ಲಿಸಿಕೊಂಡಿದ್ದು,  ಆಕೆ ನೀರಿನ ಕ್ಯಾನ್ ಹೊತ್ತು ನಡೆದೇ ಹೋಗುವಂತಾಯಿತು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona