ಕೊಟ್ಟೂರು(ಮೇ.17): ಅಧಿಕಾರಿಗಳಿಂದ ಲಾಕ್‌ಡೌನ್‌ನ ಅಂತರ್‌ಜಿಲ್ಲಾ ಪ್ರಯಾಣದ ಪರವಾನಗಿ ಪಡೆಯದೆ ಕೊಟ್ಟೂರಿಗೆ ಎರಡು ಕಾರಿನಲ್ಲಿ ಕಾರ್‌ನಲ್ಲಿ ಆಗಮಿಸಿದ್ದ ದಾವಣಗೆರೆ ಮೂಲದ 8 ಜನರನ್ನು ಬಂದೋಬಸ್ತ್‌ನಲ್ಲಿದ್ದ ಪೊಲೀಸರು ತಡೆಯಿಡಿದು ವಿಚಾರಿಸಲು ಮುಂದಾಗುತ್ತಿದ್ದಂತೆ ಕಾರ್‌ನಲ್ಲಿದ್ದವರು ವಾಗ್ವಾದ ನಡೆಸಿ ಮುಖ್ಯ ಪೇದೆಯೊಬ್ಬರ ಸಮವಸ್ತ್ರದ ಕೊರಳುಪಟ್ಟಿ ಹಿಡಿದು ಎಳೆದಾಡಿದ ಘಟನೆ ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಘಟನೆ ಕುರಿತಂತೆ ಮೂವರನ್ನು ಬಂಧಿಸಿದ್ದು, ಉಳಿದ ಐವರು ನಾಪತ್ತೆಯಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಎಂಟು ಜನರ ವಿರುದ್ಧ ಕೊಟ್ಟೂರು ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಕೋವಿಡ್‌ನಿಯಮಾವಳಿ ಉಲ್ಲಂಘಿಸಿ ಪೊಲೀಸರೊಂದಿಗೆ ಅಸಭ್ಯ ವರ್ತನೆ ತೋರಿದ ಪ್ರಕರಣ ದಾಖಲಿಸಲಾಗಿದೆ. ದಾವಣಗೆರೆಯ ಗಂಗಾಧರ್‌(38), ಕೊಟ್ಟೂರಿನ ವಿವೇಕ (34) ಹಾಗೂ ಹರಿಹರದ ನೇತ್ರಾವತಿ (36) ಎಂಬುವರನ್ನು ಬಂಧಿಸಲಾಗಿದೆ.

ಹುಬ್ಬಳ್ಳಿ: ಹಣಕಾಸಿನ ವಿಷಯಕ್ಕೆ ಗಲಾಟೆ, ಚಾಕು ಇರಿದು ಯುವಕನ ಕೊಲೆ

ಪ್ರಕರಣದ ವಿವರ:

ಭಾನುವಾರ ಬೆಳಗ್ಗೆ 10 ಗಂಟೆ ವೇಳೆಗೆ ಕೊಟ್ಟೂರು ಬಸ್‌ನಿಲ್ದಾಣದ ವೃತ್ತದ ಬಳಿ ಎಎಸ್‌ಐಗಳಾದ ಗಂಗಾಧರ, ವಸಂತರಾವ್‌ಸಿಬ್ಬಂದಿಯೊಂದಿಗೆ ರಸ್ತೆ ಬಂದೋಬಸ್ತ್‌ ಕಾರ್ಯ ಕೈಗೊಂಡಿದ್ದರು. ಈ ವೇಳೆ ಕೂಡ್ಲಿಗಿ ಕಡೆಯಿಂದ ಕೆಎ14 ಎನ್‌, ಕೆಎ37ಎಂ3906 ನೋಂದಣಿಯ ಕಾರಗಳು ಬಸವೇಶ್ವರ ದೇವಸ್ಥಾನದ ಮುಂಭಾಗಕ್ಕೆ ಬಂದವು. ಈ ವೇಳೆ ಪೊಲೀಸರು ಪರವಾನಗಿ ಪತ್ರ ಕೇಳಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮಹಿಳೆಯರು ಮತ್ತು ಪುರುಷರು ಪೊಲೀಸರನ್ನೇ ಪ್ರಶ್ನಿಸಿ ವಿವರ ನೀಡಲು ನಿರಾಕರಿಸಿದರು. 

ಸ್ಥಳದಲ್ಲಿದ್ದ ಸಬ್‌ಇನ್‌ಸ್ಪೆಕ್ಟರ್‌ಎಚ್‌. ನಾಗಪ್ಪ 500 ದಂಡ ಕಟ್ಟುವಂತೆ ಸೂಚಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಿನಲ್ಲಿದ್ದವರು ಒಮ್ಮೆಲೆ ಹೊರ ಬಂದು ಮುಖ್ಯಪೇದೆಯೊಬ್ಬರ ಕೊರಳು ಪಟ್ಟಿಹಿಡಿದು ಹಲ್ಲೆಗೆ ಮುಂದಾದರು. ನಾವು ದಂಡ ಕಟ್ಟುವುದಿಲ್ಲ. ಕೇಸ್‌ಹಾಕಿಕೊಳ್ಳಿ ಎಂದಿದ್ದಾರೆ. ಆಗ ಸಬ್‌ಇನ್‌ಸ್ಪೆಕ್ಟರ್‌ಎಚ್‌. ನಾಗಪ್ಪ ಕಾರು ವಶಪಡಿಸಿಕೊಳ್ಳಲು ಮುಂದಾಗುತ್ತಿದ್ದಂತೆ ಐವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಉಳಿದ ಮೂವರನ್ನು ಹಾಗೂ ಎರಡು ಕಾರುಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ಎಎಸ್‌ಐ ಗಂಗಾಧರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.