* ಕೊರೋನಾ 2ನೇ ಅಲೆಯ ಆರ್ಭಟದ ನಡುವೆ ಗುಡ್‌ನ್ಯೂಸ್* ಹೊಸ ಪ್ರಕರಣಗಳನ್ನು ಮೀರಿಸಿದ ಗುಣಮುಖರಾದವರ ಸಂಖ್ಯೆ* ಸಂತಸ ಹಂಚಿಕೊಂಡ ಆರೋಗ್ಯ ಸಚಿವ ಡಾ.ಕೆ. ಸುಧಾಕರ್
ಬೆಂಗಳೂರು, (ಮೇ.18): ಕರ್ನಾಟಕದಲ್ಲಿ ಕೊರೋನಾ 2ನೇ ಅಲೆಯ ಆರ್ಭಟದ ನಡುವೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಒಂದು ಖುಷಿಯ ಸಂಗತಿಯೊಂದು ನೀಡಿದ್ದಾರೆ.
ರಾಜ್ಯದಲ್ಲಿ ಇಂದು (ಮಂಗಳವಾರ) 58,395 ಜನ ಗುಣಮುಖರಾಗಿದ್ದು ಈವರೆಗೂ ಒಂದೇ ದಿನದಲ್ಲಿ ಚೇತರಿಕೆಗೊಂಡ ಅತೀ ಹೆಚ್ಚು ಸಂಖ್ಯೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರ, ದೆಹಲಿಯಲ್ಲಿ ಸೋಂಕು ಇಳಿಕೆ!
ಈ ಬಗ್ಗೆ ಟ್ವೀಟ್ ಮಾಡಿರುವ ಡಾ.ಸುಧಾಕರ್, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 30,309 ಪ್ರಕರಣಗಳು ಪತ್ತೆಯಾಗಿದ್ದು, ಗುಣಮುಖ ಹೊಂದಿದವರ ಸಂಖ್ಯೆ ಹೊಸ ಪ್ರಕರಣಗಳ ಸಂಖ್ಯೆಯನ್ನು ಮೀರಿಸಿದೆ.
ಬೆಂಗಳೂರಿನಲ್ಲಿ 8,676 ಪ್ರಕರಣಗಳು ಪತ್ತೆಯಾಗಿದ್ದು, 31,795 ಜನ ಗುಣಮುಖ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಇದು ಹೊಸ ಆಶಾಭಾವನೆಗೆ ಮೂಡಿಸಿದೆ.
ಇಂದಿನ ಈ ಅಂಕಿ-ಸಂಖ್ಯೆ ನೋಡಿದ್ರೆ ಕೊಂಚ ನೆಮ್ಮದಿ ತಂದಿದೆ. ಹಾಗಂತ ಮತ್ತೆ ಮೈಮರೆಯಬಾರದು. ಸರ್ಕಾರ ಹೊರಡಿಸಿರುವ ಕೊರೋನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಈ ಮೂಲಕ ಕೊರೋನಾ ಮಹಾಮಾರಿಯನ್ನು ಕಟ್ಟಿಹಾಕಬೇಕು.
