Asianet Suvarna News Asianet Suvarna News

ಪಂಚಾಯಿತಿ ಚುನಾವಣೆ: ಗೆಲುವಿನ ಹಿಂದೆ ರೆಸಾರ್ಟ್ ರಾಜಕಾರಣ..!

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಸೋಮಶೆಟ್ಟಿಹಳ್ಳಿ ಕ್ಷೇತ್ರದ ಸದಸ್ಯ ಜಿ. ಮರಿಸ್ವಾಮಿ ಅವಿರೋಧ ಆಯ್ಕೆಯಾಗಿದ್ದಾರೆ. ಎರಡು ದಿನ ರೆಸಾರ್ಟ್‌ನಲ್ಲಿ ತಂಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯರು ಮರಿಸ್ವಾಮಿ ಅವರನ್ನು ಅವಿರೋಧ ಆಯ್ಕೆ ಮಾಡುವಂತೆ ಮಾಡಲು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಜಿಪಂ ಸದಸ್ಯರನ್ನು ರೆಸಾರ್ಟ್‌ವೊಂದಕ್ಕೆ ಕರೆದೊಯ್ಯಲಾಗಿತ್ತು.

 

Resort politics in Zilla Panchayath election in bangalore
Author
Bangalore, First Published Feb 19, 2020, 10:35 AM IST

ಬೆಂಗಳೂರು(ಫೆ.19): ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಸೋಮಶೆಟ್ಟಿಹಳ್ಳಿ ಕ್ಷೇತ್ರದ ಸದಸ್ಯ ಜಿ. ಮರಿಸ್ವಾಮಿ ಅವಿರೋಧ ಆಯ್ಕೆಯಾದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಮುನಿರಾಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬನಶಂಕರಿಯಲ್ಲಿರುವ ಜಿಪಂ ಕಚೇರಿಯಲ್ಲಿ ಮಂಗಳವಾರ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ವಿ.ಪಿ. ಇಕ್ಕೇರಿ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ಕೇವಲ ಮರಿಸ್ವಾಮಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಮಾಡಲಾಯಿತು.

ಎರಡು ದಿನ ರೆಸಾರ್ಟ್‌ನಲ್ಲಿ ತಂಗಿದ್ದ ಜಿಲ್ಲಾ ಪಂಚಾಯಿತಿ ಸದಸ್ಯರು ಮರಿಸ್ವಾಮಿ ಅವರನ್ನು ಅವಿರೋಧ ಆಯ್ಕೆ ಮಾಡುವಂತೆ ಮಾಡಲು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಜಿಪಂ ಸದಸ್ಯರನ್ನು ರೆಸಾರ್ಟ್‌ವೊಂದಕ್ಕೆ ಕರೆದೊಯ್ಯಲಾಗಿತ್ತು. ಕಳೆದ ಎರಡು ದಿನಗಳ ಕಾಲ ನಗರದ ಹೊರ ವಲಯದ ರೆಸಾರ್ಟ್‌ವೊಂದರಲ್ಲಿ ಉಳಿದುಕೊಂಡಿದ್ದ ಸದಸ್ಯರು ಬೆಳಗ್ಗೆ ನೇರವಾಗಿ ಬೆಳಗ್ಗೆ 11ಕ್ಕೆ ಜಿಪಂ ಕಚೇರಿ ಸಭಾಂಗಣಕ್ಕೆ ಬಂದು ಹಾಜರಾದರು.

ವಿಶೇಷ ಮನವಿ ಹೊತ್ತು ಬಿಎಸ್‌ವೈ ಭೇಟಿಯಾದ ಕನಕಪುರ ಬಂಡೆ

ಸದಸ್ಯರು ಆಗಮಿಸುತ್ತಿದ್ದಂತೆ 11.30ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು. ಈ ನಡುವೆ ಬೆಳಗ್ಗೆ 9ರ ಸುಮಾರಿಗೆ ನಾಮಪತ್ರ ಸಲ್ಲಿಸುವ ವೇಳೆಯೇ ಮರಿಸ್ವಾಮಿ ಅವರಿಗೆ ಹೂಮಾಲೆ ಹಾಕಿದ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದವು. ಇದನ್ನು ಕಂಡು ಗಲಿಬಿಲಿಗೊಂಡ ಸದಸ್ಯರು, ರೆಸಾಟ್ ನಿರ್ಂದ ಬರುವ ವೇಳೆಯೇ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಯ್ಕೆ ಮಾಡಲಾಗಿದೆ. ಇದಕ್ಕೆ ತಮ್ಮ ಸಹಮತವಿಲ್ಲವೆಂದು ಹೇಳಿದ್ದು, ಈ ವೇಳೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು ಎನ್ನಲಾಗಿದೆ.

ನಂತರ ಶಾಸಕ ಎಸ್.ಆರ್.ವಿಶ್ವನಾಥ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಧಾನ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ರೆಸಾರ್ಟ್ ರಾಜಕೀಯ ಕುರಿತು ಮಾತನಾಡಿದ ಅಧ್ಯಕ್ಷ ಮರಿಸ್ವಾಮಿ, ಕೇವಲ 2 ದಿನ ಆರಾಮಾಗಿ ಇರೋಣವೆಂದು ರೆಸಾರ್ಟ್‌ಗೆ ಹೋಗಿದ್ದೆವು ಅಷ್ಟೇ. ಇದರಲ್ಲಿ ಯಾವುದೇ ರಾಜಕೀಯವಿಲ್ಲವೆಂದು ರೆಸಾರ್ಟ್ ರಾಜಕೀಯವನ್ನು ಒಪ್ಪಿಕೊಂಡರು.

ಮರಗಣತಿ: ಪ್ರಾಧಿಕಾರದ ಬೇಜವಾಬ್ದಾರಿಗೆ ಹೈಕೋರ್ಟ್‌ ಹಿಗ್ಗಾಮುಗ್ಗಾ ತರಾಟೆ

ಮಂಗಳವಾರ ಬೆಳಗ್ಗೆ 8.30ರಿಂದ 9.30ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಸ್ಥಾನಕ್ಕೆ ಬಿಜೆಪಿಯಿಂದ ಸೋಮಶೆಟ್ಟಿಹಳ್ಳಿ ಕ್ಷೇತ್ರದ ಮರಿಸ್ವಾಮಿ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ 11.30ಕ್ಕೆ ಆರಂಭಗೊಂಡ ಚುನಾವಣಾ ಪ್ರಕ್ರಿಯೆಯಲ್ಲಿ 50 ಸದಸ್ಯರ ಪೈಕಿ 39 ಮಂದಿ ಹಾಜರಿದ್ದರು.

ಆಯ್ಕೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಮರಿಸ್ವಾಮಿ, ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು. ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಬೆಂ.ದಕ್ಷಿಣ ಶಾಸಕ ಕೃಷ್ಣಪ್ಪ, ಬೆಂ.ನಗರ ಜಿಲ್ಲಾಧಿಕಾರಿ ಕೆ.ಶಿವಮೂರ್ತಿ, ಉಪಸ್ಥಿತರಿದ್ದರು.

Follow Us:
Download App:
  • android
  • ios