Asianet Suvarna News Asianet Suvarna News

ಅನಾಥ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರಕ್ಕೆ ಶಿಫಾರಸ್ಸು

ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ ಪ್ರವರ್ಗ-1ರಡಿ ಮೀಸಲಾತಿ ಕಲ್ಪಿಸಿಕೊಡಲು ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ತಂದೆ-ತಾಯಿ ಇಲ್ಲದ ಹಾಗೂ ಜಾತಿ ಗೊತ್ತಿರದ ಅನಾಥ ಮಕ್ಕಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕಲ್ಪಿಸಿಕೊಡುವುದಕ್ಕೆ ವರದಿಯಲ್ಲಿ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. 

Reservation for Orphans in Education and Employment Recommendation by State Backward Classes Commission to Govt gvd
Author
First Published Mar 15, 2023, 11:29 PM IST

ಬೆಂಗಳೂರು (ಮಾ.15): ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ ಪ್ರವರ್ಗ-1ರಡಿ ಮೀಸಲಾತಿ ಕಲ್ಪಿಸಿಕೊಡಲು ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ತಂದೆ-ತಾಯಿ ಇಲ್ಲದ ಹಾಗೂ ಜಾತಿ ಗೊತ್ತಿರದ ಅನಾಥ ಮಕ್ಕಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕಲ್ಪಿಸಿಕೊಡುವುದಕ್ಕೆ ವರದಿಯಲ್ಲಿ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಅನಾಥ ಮಕ್ಕಳಿಗೆ ತೆಲಂಗಾಣ,ಮಹಾರಾಷ್ಟ ರಾಜ್ಯಗಳಲ್ಲಿ ಮೀಸಲಾತಿ ಕಲ್ಪಿಸಲಾಗಿರುವ ಮಾದರಿಯಲ್ಲಿಯೇ ನಮ್ಮ ರಾಜ್ಯದಲ್ಲಿಯೂ ಸಹ ಮೀಸಲಾತಿ ಒದಗಿಸುವ ಅಗತ್ಯವಿದೆ ಅಂತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. 

ಅನಾಥ ಮಕ್ಕಳಿಗೆ ಮೀಸಲಾತಿ ಒದಗಿಸುವ ದೃಷ್ಟಿಯಿಂದ ವಿವಿಧ ಜಿಲ್ಲೆಗಳಲ್ಲಿರುವ ಅನಾಥಾಲಯಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ಈ ಎಲ್ಲಾ ಮಾಹಿತಿಯನ್ನಾದರಿಸಿ, ಜಾತಿ ತಿಳಿದಿರುವ ಮಕ್ಕಳಿಗೆ ಆಯಾ ಜಾತಿಯ ಪ್ರವರ್ಗದಡಿಯಲ್ಲಿ ಮತ್ತು ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ ಪ್ರವರ್ಗ-1 ರಡಿಯಲ್ಲಿ ಮೀಸಲಾತಿ ಕಲ್ಪಿಸಿಕೊಡಬೇಕೆಂದು ಶಿಫಾರಸ್ಸು ಮಾಡಿ ವಿಶೇಷ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾ.16ರಂದು ಮೂಡಿಗೆರೆಯಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ: ಕಾರ್ಯಕ್ರಮದ ಮೇಲೆ ಬಂಡಾಯದ ಕಾರ್ಮೋಡ

ಹಿಂದುಳಿದ ಪ್ರವರ್ಗಗಳ ಮೀಸಲಾತಿ ಕೋರಿ 133 ಮನವಿ ಸಲ್ಲಿಕೆ: ರಾಜ್ಯಾದ್ಯಂತ ಹಲವಾರು ಜಾತಿ ಜನಾಂಗ ಹಾಗೂ ಸಮುದಾಯಗಳಿಂದ, ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ವಿವಿಧ ಪ್ರವರ್ಗಗಳಿಗೆ ಸೇರ್ಪಡೆಗೊಳಿಸುವಂತೆ ಮನವಿಗಳು ಅಯೋಗಕ್ಕೆ ಸಲ್ಲಿಕೆಯಾಗಿದೆ. ಇದುವರೆಗೆ ಸುಮಾರು 133 ಮನಗಳು ಸಲ್ಲಿಕೆಯಾಗಿವೆ. ಇವುಗಳ ಬಹಿರಂಗ ವಿಚಾರಣೆ ನಡೆಸಿ, ಮನವಿ ಮಾಡಿರುವ  ಜನಾಂಗದವರು ವಾಸವಾಗಿರುವ ಸ್ಥಳಗಳಿಗೆ ಪ್ರವಾಸ ಕೈಗೊಂಡು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿ ಆದ್ಯತೆಯ ಮೇರೆಗೆ ಒಟ್ಟು 34 ವರದಿಗಳನ್ನು ತಯಾರಿಸಲಾಗಿದೆ ಎಂದು ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ವಿವರಿಸಿದರು.

ಮನವಿದಾರರು ಆಯೋಗಕ್ಕೆ ಸಲ್ಲಿಸಿದ ಮನವಿ ಮತ್ತು ದಾಖಲೆಗಳು ಹಾಗೂ ಆಯೋಗವು ಪ್ರವಾಸ ಕೈಗೊಂಡು ಸಂಗ್ರಹಿಸಿದ ಮಾಹಿತಿಯನ್ನಾಧರಿಸಿ ಕಾಡುಗೊಲ್ಲ, ಹಟ್ಟಿಗೊಲ್ಲ (ಅಡವಿಗೊಲ್ಲ), ಖಂಜಿರ್ ಭಾಟ್, ಕಂಜರ್, ಖಂಜಾರ್ ಭಾಟ್, ಚಪ್ಪರ್‌ಬಂದ್, ಕುಡುಬಿ, ಮುಖಾರಿ/ಮುವಾರಿ, ನಾಯಿಂದ, ಪೊಮ್ಮಲ, ಚೆನ್ನದಾಸರ,  ಮರುತ್ತುವರ್, ನಾಯರ್, ಪರಿಯಾಳ ರಾಮಕ್ಷತ್ರಿಯ,ಮಡಿಒಕ್ಕಲಿಗ,ಜೋಗಾರ್, ಚೌರಾಸಿಯಾ ಸಮುದಾಯಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

ಗಡಿಬಿಡಿಯಲ್ಲಿ ವರದಿ ನೀಡಲು ಸಾಧ್ಯವಿಲ್ಲ: ಪಂಚಮಸಾಲಿ ಸಮುದಾಯ ಕುರಿತು ಈಗಾಗಲೇ ಮಧ್ಯತರ ವರದಿಯನ್ನು ಸಲ್ಲಿಸಲಾಗಿದ್ದು, ಪೂರ್ಣ ವರದಿ ಇನ್ನೂ ನೀಡಲಾಗಿಲ್ಲ. ಆಯೋಗದ ನಿಯಮಾನುಸಾರ ವಿವಿಧೆಡೆ ಭೇಟಿ ನೀಡಿ ಪ್ರವಾಸ ಸಾಮಾಜಿಕ,ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ,ಪ್ರವಾಸ ಕೈಗೊಂಡು ಸಂಗ್ರಹಿಸಿ ಮಾಹಿತಿ ಹಾಗೂ ನಿಯಮಾನುಸಾರ ಪರಿಶೀಲನೆ ನಂತರ ಸಲ್ಲಿಸಬೇಕಾಗುತ್ತದೆ. ಗಡಿಬಿಡಿಯಲ್ಲಿ ವರದಿ ನೀಡಲು ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಅವರು ಸ್ಪಷ್ಟಪಡಿಸಿದರು. 

ಉದ್ಯೋಗ ಮೀಸಲಾತಿ ಆದಾಯ ಪರಿಗಣಿಸುವಾಗ ಪೋಷಕರ ಆದಾಯ ಮಾತ್ರ ಪರಿಗಣನೆ: ಉದ್ಯೋಗ ಮೀಸಲಾತಿಗಾಗಿ ಆದಾಯವನ್ನು ಪರಿಗಣಿಸುವಾಗ ಕೇವಲ ಪೋಷಕರ ಆದಾಯವನ್ನು ಮಾತ್ರ ಪರಿಗಣಿಸುವ ಮಾದರಿಯನ್ನು ಕರ್ನಾಟಕ ಸರ್ಕಾರವು ಅಳವಡಿಸಿಕೊಂಡು ಜಾರಿಗೆ ತರಲು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ತಿಳಿಸಿದರು.

ಅಲೆಮಾರಿ/ಅರೆ ಅಲೆಮಾರಿ ನಮೂದಿಸಿ ಜಾತಿಪ್ರಮಾಣ ಪತ್ರ ನೀಡಲು ಶಿಫಾರಸ್ಸು ಮಾಡಲು ತೀರ್ಮಾನ: ಈಗಾಗಲೇ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಲ್ಲಿರುವ 46 ಅಲೆಮಾರಿ/ಅರೆಅಲೆಮಾರಿ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ, ಆಯಾ ಜಾತಿಯ ಮುಂದೆ ಅಲೆಮಾರಿ/ಅರೆಅಲೆಮಾರಿ ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರವನ್ನು ನೀಡುವ ಕುರಿತು ಶಿಫಾರಸ್ಸು ಮಾಡಲು ಆಯೋಗವು ತೀರ್ಮಾನಿಸಿದೆ ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ವಿವರಿಸಿದರು.

ಎಚ್‌ಡಿಡಿ, ಎಚ್ಡಿಕೆಗೆ ಮೋಸ ಮಾಡಿದ ಬಾಲಕೃಷ್ಣ: ಶಾಸಕ ಮಂಜುನಾಥ್

ಪರಿಷ್ಕೃತ ಹಿಂದುಳಿದ ಪ್ರವರ್ಗಗಳ ಮೀಸಲಾತಿ ಪಟ್ಟಿ ಮುದ್ರಿಸಿ ಎಲ್ಲ ಗ್ರಾಪಂಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ವಿತರಣೆ:  ಪರಿಷ್ಕೃತ ಹಿಂದುಳಿದ ವರ್ಗಗಳ ಪ್ರವರ್ಗಗಳ ಮೀಸಲಾತಿ ಪಟ್ಟಿಯನ್ನು ಮುದ್ರಿಸಿ ಆಯೋಗದಿಂದಲೇ ರಾಜ್ಯದ ಎಲ್ಲ ಗ್ರಾಪಂಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಹೆಗ್ಡೆ ಅವರು ತಿಳಿಸಿದರು.

Follow Us:
Download App:
  • android
  • ios