ಒಮಿಕ್ರೋನ್‌ನಲ್ಲಿ ಪ್ರತಿಕಾಯ ಭೇದಿಸುವ ಶಕ್ತಿ ಹೆಚ್ಚು: ಸಾಬೀತು ಆರ್ಥಿಕತೆ ಮೇಲೆ ಒಮಿಕ್ರಾನ್‌  ಪ್ರಭಾವ ಇಲ್ಲ: ವಿತ್ತ ಇಲಾಖೆ ಒಮಿಕ್ರೋನ್‌ ಭೀತಿಯಿಂದ ಮುಂಬೈನಲ್ಲಿ ನಿಷೇಧಾಜ್ಞೆ

ಜೋಹಾನ್ಸ್‌ಬರ್ಗ್‌/ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ವೇಗವಾಗಿ ವ್ಯಾಪಿಸುತ್ತಿರುವ ರೂಪಾಂತರಿ ಒಮಿಕ್ರಾನ್‌ ವೈರಸ್‌ನಲ್ಲಿ ಮನುಷ್ಯನ ಸ್ವಾಭಾವಿಕ ರೋಗ ನಿರೋಧಕ ಶಕ್ತಿಯನ್ನು ಭೇದಿಸುವ ಶಕ್ತಿ ಅಧಿಕವಾಗಿದೆ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಸಾಬೀತಾಗಿದೆ. ವೈರಸ್‌ ಕುರಿತು ದಕ್ಷಿಣ ಆಫ್ರಿಕಾ(South Africa)ದ ಡಿಎಸ್‌ಐ-ಎನ್‌ಆರ್‌ಎಫ್‌ ಕೇಂದ್ರದ ವಿಜ್ಞಾನಿಗಳು ಸಂಶೋ​ಧನೆ ನಡೆಸಿದ್ದಾರೆ. ಈ ಪ್ರಕಾರ, ಒಮ್ಮೆ ಸೋಂಕು ತಗುಲಿದ ವ್ಯಕ್ತಿಯಲ್ಲಿ 3 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳುವುದನ್ನು ಮರು ಸೋಂಕು ಎನ್ನಲಾ​ಗುತ್ತದೆ. ಮರು ಸೋಂಕು ಹಬ್ಬಿಸುವ ಸಾಮರ್ಥ್ಯ ಒಮಿಕ್ರಾನ್‌(Omicron)ನಲ್ಲಿ, ಡೆಲ್ಟಾ(Delta) ಮತ್ತು ಬೀಟಾ(Beta)ಗಿಂತ 3 ಪಟ್ಟು ಹೆಚ್ಚಿದೆ ಎಂದು ಅಧ್ಯಯನದಲ್ಲಿ ಪುರಾವೆ ಲಭ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಆದರೆ ಮರು ಸೋಂಕಿಗೆ ತುತ್ತಾದವರ ಆರೋಗ್ಯದ ಗಂಭೀರತೆ ಕಾರಣ ಆಗುತ್ತದೆಯೇ ಮತ್ತು ಲಸಿಕೆ ಪಡೆದವರಲ್ಲಿ ಈ ಸೋಂಕು ತಟಸ್ಥ​ವಾಗಿರಲಿದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯ​ವಾ​ಗಿಲ್ಲ. ಈ ಹಿನ್ನೆಲೆಯಲ್ಲಿ ಲಸಿಕೆಗೆ ಈ ವೈರಸ್‌ ಬಗ್ಗಲ್ಲ ಎಂದು ಈಗಲೇ ಹೇಳಲಾಗದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಮಿಕ್ರಾನ್ ಭೀತಿ ಜಾಗತಿಕ ಮಟ್ಟದಲ್ಲಿ ತಣ್ಣಗೆ ಆವರಿಸುತ್ತಿದೆ. ಅಷ್ಟೇನೂ ತೀವ್ರವಾದ ಲಕ್ಷಣಗಳನ್ನು ಹೊಂದಿರದ ಈ ವೈರಾಣು ಸೋಂಕು ಲಸಿಕೆ ಪಡೆದು ಮೂರು ನಾಲ್ಕು ತಿಂಗಳಾದರೂ ವ್ಯಕ್ತಿಯನ್ನು ಆವರಿಸುವ ಸಾಮರ್ಥ್ಯ ಹೊಂದಿದೆ ಎಂದು ಈ ಹೊಸ ರೂಪಾಂತರಿಯನ್ನು ಪತ್ತೆ ಮಾಡಿದ ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಘಟನೆಯ ಅಧ್ಯಕ್ಷರಾದ ಡಾ.ಏಂಜೆಲಿಕ್ ಕೊಯೆಟ್ಜಿ(Dr. Angelique Koetzi) ಹೇಳಿದ್ದಾರೆ.

Covid Crisis Karnataka : ಸೋಂಕಿತರ ಆಸ್ಪತ್ರೆ ದಾಖಲಾತಿ ಭಾರೀ ಕಡಿಮೆ!

ಇದಕ್ಕೆ ಚಿಕಿತ್ಸೆಯೆಂದರೆ ಐಬುಪ್ರೊಫೇನ್(Ibuprofen) ಜೊತೆ ಕಾರ್ಟಿಸೋಲ್(Cortisol)ನ್ನು ಸಣ್ಣ ಪ್ರಮಾಣದಲ್ಲಿ ನೀಡುವುದಾಗಿದ್ದು ಇದರಿಂದ ಬೇಗ ಗುಣಮುಖರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದ್ದು, ಸಾಂಕ್ರಾಮಿಕವನ್ನು ಕೊನೆಗಾಣಿಸುವುದಕ್ಕೆ ಬಡ ರಾಷ್ಟ್ರಗಳಿಗೆ ಲಸಿಕೆಗಳನ್ನು ಖರೀದಿಸುವುದು ಕಷ್ಟಸಾಧ್ಯವಾಗಲಿದ್ದು ಫಾರ್ಮಾ ಕಂಪನಿಗಳು ನೆರವಾಗಬೇಕು ಎಂದು ವಿನಂತಿಸಿದ್ದಾರೆ. 


ಇತ್ತ ಕೊರೋನಾ ಬಿಕ್ಕಟ್ಟಿನಿಂದ ಹೊರ ಬಂದು ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಕೆಲವೇ ದೇಶಗಳ ಆರ್ಥಿಕತೆ ಪೈಕಿ ಭಾರತವೂ ಒಂದು ಎಂದು ಕೇಂದ್ರ ವಿತ್ತ ಸಚಿವಾಲಯದ ಮಾಸಿಕ ಪರಿಶೀಲನಾ ವರದಿ ಹೇಳಿದೆ. ಅಲ್ಲದೆ ದೇಶದಲ್ಲಿ ತ್ವರಿತ ಲಸಿಕಾಕರಣದ ಹಿನ್ನೆಲೆಯಲ್ಲಿ ಜಾಗತಿಕ ತಲ್ಲಣಕ್ಕೆ ಕಾರಣವಾದ ಹೊಸ ರೂಪಾಂತರಿ ಒಮಿಕ್ರೋನ್‌ ವೈರಸ್‌ ಭಾರತದ ಆರ್ಥಿಕತೆ ಮೇಲೆ ಅಷ್ಟೇನೂ ಪರಿಣಾಮ ಬೀರದು ಎಂದಿದೆ. 2019-20ರಲ್ಲಿ ಕೊರೋನಾ ಹಾವಳಿಯು ಭಾರತದ ಆರ್ಥಿಕತೆ ಮೇಲೆ ಭಾರೀ ಪ್ರಭಾವ ಬೀರಿತ್ತು. ಆದರೆ ಉತ್ಪಾದನೆ ವಲಯ ಮತ್ತು ಕೃಷಿ ವಲಯದ ಸುಸ್ಥಿರ ಅಭಿವೃದ್ಧಿ ಪರಿಣಾಮ, ಕೊರೋನಾದಿಂದ ತತ್ತರಿಸಿದ್ದ ಭಾರತದ ಜಿಡಿಪಿ ಶೇ.100 ಚೇತರಿಕೆ ಕಂಡಿದೆ. ಅಲ್ಲದೆ 2021-22ರ ಸಾಲಿನ 1 ಮತ್ತು 2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.8.4ರಷ್ಟು ಜಿಗಿತ ಕಂಡಿದೆ. ಜತೆಗೆ ಮುಂದಿನ ತ್ರೈಮಾಸಿಕದಲ್ಲೂ ಭಾರತ ಅಭಿವೃದ್ಧಿಯತ್ತ ಸಾಗಲಿದೆ ಎಂದು ವರದಿ ಹೇಳಿದೆ.

Corona Crisis : ಇನ್ನೂ ಮೂರ್ನಾಲ್ಕು ತಿಂಗಳಷ್ಟೆ ಕೊರೋನಾ ಇರುತ್ತದೆ : ಗುರೂಜಿ ಭವಿಷ್ಯ


ಈ ನಡುವೆ ಭಾರತದಲ್ಲೇ ಅತೀ ಹೆಚ್ಚು ಒಮಿಕ್ರೋನ್‌ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾದ ಹಿನ್ನೆಲೆ, ಶನಿವಾರದಿಂದ ಮುಂಬೈ(Mumbai)ಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಭಾನುವಾರವೂ ನಿಷೇಧಾಜ್ಞೆ ಮುಂದುವರಿಯಲಿದೆ. ಮುಂಬೈಯಲ್ಲಿ ಅಖಿಲ ಭಾರತ ಮಜ್ಲಿಸ್‌-ಎ-ಇತ್ತೆಹಾದುಲ್‌ ಮುಸ್ಲಿಮೀನ್‌ ಪಕ್ಷದ ರಾರ‍ಯಲಿ ಹಾಗೂ ಸಂಜಯ ರಾವತ್‌ ಹೇಳಿಕೆಯ ವಿರುದ್ಧ ಬಿಜೆಪಿ ಕೂಡ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಇಂತಹ ರಾರ‍ಯಲಿಗಳಲ್ಲಿ ಕೋವಿಡ್‌ ಇನ್ನಷ್ಟುಹರಡುವ ಭೀತಿ ಹಿನ್ನೆಲೆ ಶನಿವಾರ ಹಾಗೂ ಭಾನುವಾರ ಸೆಕ್ಷನ್‌ 144 ಜಾರಿಯಲ್ಲಿರಲಿದೆ. ಈ ಸಮಯದಲ್ಲಿ ರಾರ‍ಯಲಿ, ಮೋರ್ಚಾ, ಜನ ಅಥವಾ ವಾಹನಗಳ ಮೆರವಣಿಗೆಯನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.