Asianet Suvarna News Asianet Suvarna News

ಚಿಕ್ಕಬಳ್ಳಾಪುರದಲ್ಲಿ ಪುಟಿದೇಳುತ್ತಿದೆ ಅಂರ್ತಜಲ ಮಟ್ಟ

  • ಹಲವು ದಶಕಗಳಿಂದ ಮಳೆ-ಬೆಳೆ ಇಲ್ಲದೇ ಬರದಿಂದ ಕಂಗೆಟ್ಟಿದ್ದ ಜಿಲ್ಲೆಯ ಜನತೆ
  • ಎರಡು, ಮೂರು ದಶಕಗಳ ಬಳಿಕ ಕಳೆದ ಎರಡು, ಮೂರು ವಾರಗಳಿಂದ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಅಂರ್ತಜಲ ಮಟ್ಟ ಹೆಚ್ಚಳ
Groundwater Level increased in Chikkaballapura district snr
Author
Bengaluru, First Published Oct 28, 2021, 3:01 PM IST

ವರದಿ :  ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ಅ.28):  ಹಲವು ದಶಕಗಳಿಂದ ಮಳೆ (Rain)-ಬೆಳೆ ಇಲ್ಲದೇ ಬರದಿಂದ ಕಂಗೆಟ್ಟಿದ್ದ ಜಿಲ್ಲೆಯ ಜನತೆಗೆ ಎರಡು, ಮೂರು ದಶಕಗಳ (Decades) ಬಳಿಕ ಕಳೆದ ಎರಡು, ಮೂರು ವಾರಗಳಿಂದ ಬೀಳುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯ ಅಂರ್ತಜಲ ಮಟ್ಟ (Ground water Level) ಪುಟಿದೇಳುತ್ತಿದ್ದು ಜಿಲ್ಲೆಯ ಜನತೆಯಲ್ಲಿ ಹರ್ಷ ತಂದಿದೆ.

ಜಿಲ್ಲೆಯಲ್ಲಿನ ಭೂ ವಿಜ್ಞಾನಿಗಳು  ( Scientists) ನಡೆಸಿರುವ ತಾಲೂಕುವಾರು ಅಧ್ಯನ ಕೊಳವೆ ಬಾವಿಗಳ (Borewell) ಸ್ಥಿತ ಅಂತರ ಮಟ್ಟದ ವಿವರದಲ್ಲಿ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಅಂರ್ತಜಲ ಗಣನೀಯ ಪ್ರಮಾಣದಲ್ಲಿ ಏರಿಕೆಗೊಂಡಿರುವುದು ಅಂಕಿ, ಅಂಶಗಳು ದೃಢಪಡಿಸಿದ್ದು ಒಟ್ಟು 51 ಅಧ್ಯಯನ ಕೊಳವೆ ಬಾವಿಗಳಲ್ಲಿ ನಡೆಸಿರುವ ಸ್ಥಿರ ಅಂರ್ತಜಲ ಮಟ್ಟದ ವಿವರಗಳು  ಲಭ್ಯವಾಗಿವೆ.

ಭಾರೀ ಮಳೆ : ಕೋಡಿ ಹರಿದು ಗುಡಿಬಂಡೆ ಮಾರ್ಗ ಬಂದ್‌

ತಾಲೂಕುವಾರು ಮಾಹಿತಿ: ಚಿಕ್ಕಬಳ್ಳಾಪುರ  (Chikkaballapura) ಜಿಲ್ಲೆಯಲ್ಲಿ ಕಳೆದ ವರ್ಷ ಅಂದರೆ 2020 ರ ಇದೇ ಸಮಯದ ಅಕ್ಟೋಬರ್‌ ತಿಂಗಳಲ್ಲಿ ಬಾಗೇಪಲ್ಲಿ ತಾಲೂಕಿನಲ್ಲಿ 62.56 ಮೀಟರ್‌ನಲ್ಲಿದ್ದ ಅಂರ್ತಜಲ 2021ನೇ ಸಾಲಿನ ಅಕ್ಟೋಬರ್‌ ತಿಂಗಳಲ್ಲಿ 32.73 ಮೀಟರ್‌ನಷ್ಟುಅಂರ್ತಜಲ ಏರಿಕೆ ಕಂಡಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿ ಒಟ್ಟು 29.83 ಮೀಟರ್‌ನಷ್ಟಅಂರ್ತಜಲ ಬಾಗೇಪಲ್ಲಿ (Bagepalli) ತಾಲೂಕಿನಲ್ಲಿ ಏರಿಕೆ ಕಂಡಿದೆ.

ಚಿಂತಾಮಣಿ (Chintamani) ತಾಲೂಕಿನಲ್ಲಿ ಇದೇ ಸಮಯದಲ್ಲಿ ಕಳೆದ ವರ್ಷ 47.36 ರಷ್ಟಿದ್ದು ಈ ವರ್ಷದ ಅಕ್ಟೋಬರ್‌ ತಿಂಗಳಿಗೆ ಒಟ್ಟು 27.16 ರಷ್ಟುಏರಿಕೆ ಕಂಡಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಸರಾಸರಿ ಒಟ್ಟು 20.2 ರಷ್ಟು ಮೀಟರ್‌ ಅಂರ್ತಜಲ ಏರಿಕೆ ಕಂಡಿದೆ.

ಚಿಕ್ಕಬಳ್ಳಾಪುರ : ಜಿಲ್ಲಾ ಕೇಂದ್ರದಲ್ಲಿ ಪ್ರವಾಹ ಸೃಷ್ಟಿಸಿದ ಮಳೆ

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ (Taluk) 2020ರ ಅಕ್ಟೋಬರ್‌ ತಿಂಗಳಲ್ಲಿ 58.65 ರಷ್ಟಿದ್ದ ಅಂರ್ತಜಲ ಮಟ್ಟಈ ವರ್ಷದ ಅಕ್ಟೋಬರ್‌ನಲ್ಲಿ 43.55 ರಷ್ಟುಅಂತರ್ಜಲ ಏರಿಕೆ ಕಂಡಿದ್ದು ಕಳೆದ ವರ್ಷಕ್ಕಿಂತ ಈ ಬಾರಿ 15.1 ರಷ್ಟು ಮೀಟರ್‌ ಏರಿಕೆ ಕಂಡಿದೆ. ಗುಡಿಬಂಡೆ (Gudibande) ತಾಲೂಕಿನಲ್ಲಿ ಕಳೆದ ವರ್ಷ 10.6 ರಷ್ಟಿದ್ದು ಈ ವರ್ಷ 11.66 ರಷ್ಟುಏರಿಕೆ ಕಂಡಿದೆ. ಗೌರಿಬಿದನೂರು (Gouri Bidanuru) ತಾಲೂಕಿನಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 58.54 ರಷ್ಟು ಮೀಟರ್‌ ಇದ್ದ ಅಂರ್ತಜಲ ಈ ವರ್ಷ ಈ ಅವಧಿಯಲ್ಲಿ 35.13 ರಷ್ಟು ಏರಿಕೆ ಕಂಡಿದೆ.

chikkaballapura ಭಾರೀ ಮಳೆಗೆ ಗ್ರಾಮಗಳ ಸಂಪರ್ಕವೇ ಕಡಿತ : ಜನ ಪರದಾಟ

ಕಳೆದ ವರ್ಷಕ್ಕಿಂತ ಈ ಅವಧಿಯಲ್ಲಿ 23.41 ರಷ್ಟು ಹೆಚ್ಚುವರಿಯಾಗಿ ಅಂರ್ತಜಲ ಏರಿಕೆ ಕಂಡಿದೆ. ಇನ್ನೂ ಶಿಡ್ಲಘಟ್ಟ (shidlaghatta) ತಾಲೂಕಿನಲ್ಲಿ 2020ರ ಅವಧಿಯಲ್ಲಿ 55.73 ಮೀಟರ್‌ ಅಂರ್ತಜಲ ಇದ್ದು ಈ ವರ್ಷದ ಈ ಅವಧಿಯಲ್ಲಿ ಮಳೆಗೆ 38.51 ರಷ್ಟುಏರಿಕೆ ಕಂಡಿದೆ. ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದರೆ 17.22 ಮೀಟರ್‌ನಷ್ಟುಅಂರ್ತಜಲ ಏರಿಕೆ ಕಂಡಿದೆ.

 ಜಿಲ್ಲೆಯಲ್ಲಿ ಕಳೆದ 2020ರ ಅಕ್ಟೋಬರ್‌ನಲ್ಲಿ (October Rain) ಬಿದ್ದ ಮಳೆಗೆ ಈ 2021ನೇ ಸಾಲಿನ ಅಕ್ಟೋಬರ್‌ನಲ್ಲಿ ಬಿದ್ದ ಮಳೆಗೆ ಹೋಲಿಸಿದರೆ ಈ ಅಕ್ಟೋಬರ್‌ನಲ್ಲಿ ಬಿದ್ದ ಮಳೆಗೆ ಸಾಕಷ್ಟುಅಂರ್ತಜಲ ಏರಿಕೆಗೊಂಡಿದೆ. ಜಿಲ್ಲೆಯಲ್ಲಿ ಗಟ್ಟಿ ಶಿಲಪದರ ಇರುವುದರಿಂದ ನಿಧಾನಗತಿಯಲ್ಲಿ ಅಂರ್ತಜಲ ವೃದ್ದಿ ಆಗಲಿದೆ. ಈಗ ಬಿದ್ದಿರುವ ಮಳೆ ಇಂಗಲು ಕನಿಷ್ಠ ನಾಲ್ಕೈದು ತಿಂಗಳು ಕಳೆಯಬೇಕು.

-ಎಸ್‌.ಬೋರಪ್ಪ, ಹಿರಿಯ ಪ್ರಭಾರಿ ಭೂ ವಿಜ್ಞಾನಿ.

Follow Us:
Download App:
  • android
  • ios