ಹೊನ್ನಾವರ: ಕೃಷಿ ಹೊಂಡದಲ್ಲಿ ಬಿದ್ದಿದ್ದ ನಾಲ್ಕು ಕಾಡುಹಂದಿ ಮರಿಗಳ ರಕ್ಷಣೆ
ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಹೊನ್ನಾವರ ಅರಣ್ಯ ಇಲಾಖೆ ಸಿಬ್ಬಂದಿಯ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿದ ಹಗ್ಗ ಮತ್ತು ಬಲೆಯ ಸಹಾಯದಿಂದ ನಾಲ್ಕು ಕಾಡುಹಂದಿ ಮರಿಗಳನ್ನ ರಕ್ಷಿಸಿದ್ದಾರೆ.
ಉತ್ತರಕನ್ನಡ(ಅ.17): ಕೃಷಿ ಹೊಂಡದಲ್ಲಿ ಆಯತಪ್ಪಿ ಬಿದ್ದಿದ್ದ ನಾಲ್ಕು ಕಾಡುಹಂದಿ ಮರಿಗಳನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮೇಲಿನ ಇಡಗುಂಜಿಯ ಕಂಡಿಮಕ್ಕಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮೇಲಿನ ಇಡಗುಂಜಿಯ ಕಂಡಿಮಕ್ಕಿ ಗ್ರಾಮದ ರಾಘವೇಂದ್ರ ನಾಯ್ಕ ಎಂಬವರಿಗೆ ಸೇರಿದ ಜಾಗದಲ್ಲಿ ಹಂದಿಮರಿಗಳು ಬಿದ್ದಿದ್ದವು. ಸುಮಾರು 25 ಅಡಿ ಆಳದ ಕೃಷಿ ಹೊಂಡದಲ್ಲಿ ಕಾಡುಹಂದಿ ಮರಿಗಳು ಬಿದ್ದಿದ್ದವು. ಹೊಂಡದಲ್ಲಿ ಸುಮಾರು 10 ಅಡಿ ನೀರು ತುಂಬಿದ್ದು, ಮರಿಗಳನ್ನು ಸ್ಥಳೀಯರು ಗಮನಿಸಿದ್ದರು.
ಉತ್ತರಕನ್ನಡ: ಜೊಯಿಡಾ ಜಿಂಕೆ ಬೇಟೆ ಪ್ರಕರಣ, ಇಬ್ಬರು ಆರೋಪಿಗಳ ಬಂಧನ
ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಹೊನ್ನಾವರ ಅರಣ್ಯ ಇಲಾಖೆ ಸಿಬ್ಬಂದಿಯ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿದ ಹಗ್ಗ ಮತ್ತು ಬಲೆಯ ಸಹಾಯದಿಂದ ನಾಲ್ಕು ಕಾಡುಹಂದಿ ಮರಿಗಳನ್ನ ರಕ್ಷಿಸಿದ್ದಾರೆ. ಸುರಕ್ಷಿತವಾಗಿ ರಕ್ಷಣೆ ಮಾಡಿದ ಅಗ್ನಿಶಾಮಕದಳದ ಸಿಬ್ಬಂದಿ ಹಂದಿ ಮರಿಗಳನ್ನ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ನೀಡಿದ್ದಾರೆ.