ಬೆಂಗಳೂರು(ಮೇ 28): ಮುಂದಿನ ಲಾಕ್‌ಡೌನ್‌ ಬಗ್ಗೆ ಹಲವು ಊಹಾಪೋಹ ಕೇಳಿ ಬರುತ್ತಿದ್ದರೂ, ಕೇಂದ್ರದ ಸೂಚನೆಯಂತೆಯೇ ರಾಜ್ಯ ನಡೆಯಬೇಕಾಗುತ್ತದೆ. ಈ ನಡುವೆ ರಾಜ್ಯದಲ್ಲಿ ಅಗತ್ಯವಾಗಿ ಓಪನ್ ಮಾಡಬೇಕು ಎನ್ನುವಂತಹ ಕ್ಷೇತ್ರಗಳ ಬಗ್ಗೆ ಸಿಎಂ ಯಡಿಯೂರಪ್ಪ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ನಾಲ್ಕು ಹಂತದ ಲಾಕ್‌ಡೌನ್‌ನಲ್ಲಿ ಹಲವು ವಿನಾಯತಿ ಕೊಡಲಾಗಿದೆ. 5 ನೇ ಹಂತದ ಲಾಕ್ ಡೌನ್ ನಲ್ಲಿಯೂ ಕೆಲವು ವಿನಾಯಿತಿ ಕೋರಿ ಕೇಂದ್ರಕ್ಕೆ ಸಿಎಂ ಪತ್ರ ಬರೆದಿದ್ದಾರೆ. ಮಾಲ್, ರೆಸ್ಟೋರೆಂಟ್‌ಗಳ ಓಪನ್ ಮಾಡಲು ಮನವಿ ಬಂದಿದೆ ಎಂದು ಡಿಸಿಎಂ ಅಶ್ವತ್ಥ್‌ ನಾರಾಯಣ್ ತಿಳಿಸಿದ್ದಾರೆ.

ಪಕ್ಷಾಂತರ ಕಾಯ್ದೆ ವಿಚಾರ ಡಿಕೆಶಿ ಸಲಹೆ: ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ

ಶಾಲಾ-ಕಾಲೇಜುಗಳನ್ನೂ ತೆರೆಯಲು ಮನವಿ ಬಂದಿದೆ. ಜೂನ್ 1 ರಿಂದ ವಿವಿಧ ಕ್ಷೇತ್ರಗಳಲ್ಲಿ ಸಡಿಲಿಕೆ ಕೊಡಬೇಕು ಎಂಬ ಒತ್ತಾಯ ಬಂದಿದೆ. ಸಿನಿಮಾ , ಮಾಲ್ ಬಿಟ್ಟು ಬಾಕಿ ಕ್ಷೇತ್ರದಲ್ಲಿ ಸಡಿಲಗೊಳಿಸುವ ಒತ್ತಾಯ ಇದೆ. ವೈರಸ್ ನಮ್ಮನ್ನು ಬಿಟ್ಟು ಹೋಗಲ್ಲ. ಹಲವು ವೈರಸ್ ಗಳ ಜೊತೆ ಕರೋನಾ ವೈರಸ್ ಕೂಡಾ ಇರುತ್ತೆ. ಚಿಕಿತ್ಸೆ ಕಂಡು ಹಿಡಿಯುವವರೆಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಯಲಹಂಕ ಸಾವರ್ಕರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕ್ಷುಲ್ಲಕವಾಗಿ ಕಳಂಕ ತರಲು ವಿಪಕ್ಷಗಳು ಈ ರೀತಿ ಮಾಡ್ತಿವೆ. ನಮ್ಮ ರಾಜ್ಯದ ಮಹಾನ್ ವ್ಯಕ್ತಿಗಳ ಹೆಸರು ಈಗಾಗ್ಲೆ ನಾಮಕರಣ ಮಾಡಲಾಗಿದೆ. ಸಾವರ್ಕರ್ ದೇಶಕ್ಕೆ ಹೋರಾಡಿದ ಮಹಾನ್ ವ್ಯಕ್ತಿ. ದೇಶಕ್ಕಾಗಿ ಹಿಂಸೆ ಸಹಿಸಿಕೊಂಡು ಹೋರಾಟ ಮಾಡಿದವರು. ಸಾವರ್ಕರ್ ಯಾರು ಮಾಡದ ಸಾಹಸವನ್ನು ಮಾಡಿದ್ದಾರೆ ಎಂದಿದ್ದಾರೆ.

'ಕಾಂಗ್ರೆಸ್ ಚೆಕ್‌ಗೆ ಸಹಿ ಅಧಿಕಾರ ಡಿಕೆಶಿಗೆ ಇನ್ನೂ ಸಿಕ್ಕಿಲ್ಲ'

ಸಾವರ್ಕರ್ ಹೆಸರು ನಾಮಕರಣ ಇಂದಿನ ಪೀಳಿಗೆಗೆ ಪ್ರಸ್ತುತ. ವಿಪಕ್ಷಗಳು ಇಲಸಲ್ಲದ ಹೇಳಿಕೆ ಕೊಟ್ಟು ಸಾವರ್ಕರ್ ಗೆ ಅಗೌರವ ತೋರಿದ್ದಾರೆ. ಸಾವಿರ ಪರ್ಸೆಂಟ್ ಸಾವರ್ಕರ್ ಹೆಸರು ಇಡ್ತೇವಿ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಡಿಸಿಎಂ ಡಾ.ಅಶ್ವಥನಾರಾಯಣ ಸ್ಪಷ್ಟಪಡಿಸಿದ್ದಾರೆ.