ಕರಾವಳಿ ಜಿಲ್ಲೆಯಲ್ಲಿ ಮತ್ತೆ ಮತಾಂತರದ ಆರೋಪ, ಮಾಹಿತಿ ನೀಡದೆ ಚರ್ಚ್ ಕಟ್ಟಡ ನಿರ್ಮಾಣ!
ಕರಾವಳಿ ಜಿಲ್ಲೆಯಲ್ಲಿ ಮತ್ತೆ ಮತಾಂತರ ಆರೋಪ ಕೇಳಿ ಬಂದಿದೆ. ಮನೆ ನಿರ್ಮಾಣದ ಪರವಾನಿಗೆ ಪಡೆದು ಚರ್ಚ್, ಮತಾಂತರ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ.
ಉಡುಪಿ (ಮೇ.27): ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತ್ತೆ ಮತಾಂತರ ಆರೋಪ ಕೇಳಿ ಬಂದಿದೆ. ಮನೆ ನಿರ್ಮಾಣದ ಪರವಾನಿಗೆ ಪಡೆದು ಚರ್ಚ್, ಮತಾಂತರ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಗ್ರಾಮಸ್ಥರು ಹಿಂದೂಪರ ಸಂಘಟನೆಗಳು ಸ್ಥಳದಲ್ಲಿ ಜಮಾಯಿಸಿ ಅಕ್ರಮ ಕಟ್ಟಡ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆತಂಕಕ್ಕೊಳಗಾದ ಉಡುಪಿ ಜಿಲ್ಲೆಯ ಕೊಡಂಕೂರು ನಿವಾಸಿಗಳು, ಉರಿ ಬಿಸಿಲಿನಲ್ಲಿ ಶಾಮಿಯಾನದ ಕೆಳಗೆ ಪ್ರತಿಭಟನಾ ಸಭೆ ನಡೆಸಿದ್ದಾರೆ. ನೂರಾರು ಗ್ರಾಮಸ್ಥರು ಒಗ್ಗೂಡಲು ಕಾರಣ ಅವರ ಏರಿಯಾದಲ್ಲಿ ತಲೆ ಎತ್ತುತ್ತಿರುವ ಈ ಕಟ್ಟಡ!
ಇಲ್ಲಿನ ಪುತ್ತೂರು ಗ್ರಾಮದ ಸರ್ವೆ ನಂಬರ್ 38/1p1 ನಲ್ಲಿರುವ 1.73 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಈಗ ಚರ್ಚೆಯ ಕೇಂದ್ರ ಬಿಂದುವಾಗಿದೆ. ಡಿಸ್ ಕಾಲ್ಸ್ದ್ ಕಾರ್ಮೆಲೈಟ್ಸ್ ಕರ್ನಾಟಕ -ಗೋವಾ ಪ್ರೋವಿನ್ಸ್ ಹೆಸರಲ್ಲಿ ಈ ಜಮೀನು ಕಟ್ಟಡ ನೊಂದಾವಣಿಯಾಗಿದೆ. ಮಂಗಳೂರಿನ ಬಿಕರನ ಕಟ್ಟೆ ಮೂಲದ ಸಂಸ್ಥೆಯಿಂದ ಮೂರು ಮಹಡಿಯ ಕಟ್ಟಡ ನಿರ್ಮಾಣ ಆರಂಭವಾಗಿದೆ.
ಈ ಪ್ರದೇಶದಲ್ಲಿ ಮತಾಂತರ ನಡೆಸುವ ಪ್ರಾರ್ಥನಾ ಮಂದಿರ ಬರುತ್ತದೆ, ಇದೇ ಜಮೀನಿನಲ್ಲಿ ಸ್ಮಶಾನಕ್ಕೆ ಭೂಮಿ ಕಾಯ್ದಿರಿಸಲಾಗಿದೆ. ಗ್ರಾಮದಲ್ಲಿ ಕ್ರಿಶ್ಚಿಯನ್ ಸಮುದಾಯದ ನಾಲ್ಕೇ ಮನೆ ಇದ್ದರೂ ಇಲ್ಲಿ ಈ ಭಾಗದಲ್ಲಿ ಚರ್ಚಿನ ಅವಶ್ಯಕತೆ ಇಲ್ಲ ಇದೊಂದು ಮತಾಂತರ ಕೇಂದ್ರ ತೆರೆಯುವ ಷಡ್ಯಂತ್ರ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಭಾಗದಲ್ಲಿ ಹಿಂದುಳಿದ, ಬುಡಕಟ್ಟು ಮತ್ತು ಅಲೆಮಾರಿ ಜನಾಂಗದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶ. ಮಲ್ಪೆ ಪುತ್ತೂರು ಸಂತೆಕಟ್ಟೆ ಭಾಗದ ಜನರನ್ನು ಸೆಳೆದು ಮತಾಂತರ ಮಾಡುವ ಹುನ್ನಾರವಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ದೇಗುಲ ಧ್ವಂಸ ಮಾಡಲು ಬಂದು ತಾಯಿಯ ಶಕ್ತಿಗೆ ಸೋಲೊಪ್ಪಿ ಶಿರ ಬಾಗಿದ ಔರಂಗಜೇಬ್!
ಅನಧಿಕೃತವಾಗಿ ಪರವಾನಿಗೆ ಪಡೆದುಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವುದಾಗಿ ಗ್ರಾಮಸ್ಥರು ನಗರಸಭೆಗೆ ದೂರು ನೀಡಿದ್ದಾರೆ. ಅನಧಿಕೃತವಾಗಿ ನೀಡಿರುವ ಲೈಸನ್ಸ್ ರದ್ದುಪಡಿಸಬೇಕೆಂದು ಶಾಸಕ ಯಶ್ ಪಾಲ್ ಸುವರ್ಣ ಅವರನ್ನು ಸಂಘಟನೆಗಳು ಒತ್ತಾಯಿಸಿವೆ.
ಗದಗ: ಇಂದಿನಿಂದ ಐತಿಹಾಸಿಕ ಸೋಮನಾಥನ ಮೇಲೆ ಸೂರ್ಯನ ನೇರ ಕಿರಣಗಳು!
ಸ್ಥಳೀಯ ನಗರಸಭಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೆ ಕಟ್ಟಡ ನಿರ್ಮಾಣವಾಗುತ್ತಿದೆ. ಬೇರೆ ಬೇರೆ ಉದ್ದೇಶಕ್ಕೆ ಈ ಜಮೀನನ್ನ ಬಳಸಲು ಯತ್ನ ಮಾಡಲಾಗಿತ್ತು, ಕೊನೆಯದಾಗಿ ಈಗ ಪ್ರಾರ್ಥನಾ ಮಂದಿರ ನಿರ್ಮಾಣವಾಗುತ್ತಿದೆ ಎಂದು ಶಾಸಕರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಹೊಸ ಕಟ್ಟಡದ ಉದ್ದೇಶ ಮತ್ತು ಮಾಲೀಕತ್ವದ ಬಗ್ಗೆ ಯಾವುದೇ ಸಂಸ್ಥೆ ಈವರೆಗೆ ಸ್ಪಷ್ಟ ನೀಡಿಲ್ಲ.