Asianet Suvarna News Asianet Suvarna News

ಗದಗ: ಇಂದಿನಿಂದ ಐತಿಹಾಸಿಕ ಸೋಮನಾಥನ ಮೇಲೆ ಸೂರ್ಯನ ನೇರ ಕಿರಣಗಳು!

ಪಟ್ಟಣದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ವೈಶಾಖ ಕೃಷ್ಣ ಪಕ್ಷ ಶುಭ ದಿನದಂದು ಸೂರ್ಯೋದಯದ ಪ್ರಥಮ ಸೂರ್ಯನ ಕಿರಣಗಳು ನೇರವಾಗಿ ಪೂರ್ವಾಭಿಮುಖವಾಗಿರುವ ಸೋಮನಾಥ ದೇವರ ಮೇಲೆ ಬೀಳುವುದು ವಿಶೇಷವಾಗಿದೆ. ಈ ವಿಸ್ಮಯ ಮೇ 25ರಂದು ಸಂಭವಿಸಲಿದೆ.

Direct sun rays on Somnath temple from today in lakshmeshwar at gadag ravi
Author
First Published May 25, 2023, 12:35 PM IST

ಲಕ್ಷ್ಮೇಶ್ವರ (ಮೇ.25) : ಪಟ್ಟಣದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷ ವೈಶಾಖ ಕೃಷ್ಣ ಪಕ್ಷ ಶುಭ ದಿನದಂದು ಸೂರ್ಯೋದಯದ ಪ್ರಥಮ ಸೂರ್ಯನ ಕಿರಣಗಳು ನೇರವಾಗಿ ಪೂರ್ವಾಭಿಮುಖವಾಗಿರುವ ಸೋಮನಾಥ ದೇವರ ಮೇಲೆ ಬೀಳುವುದು ವಿಶೇಷವಾಗಿದೆ. ಈ ವಿಸ್ಮಯ ಮೇ 25ರಂದು ಸಂಭವಿಸಲಿದೆ.

ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸುವ ಸಂದರ್ಭದಲ್ಲಿ ಈ ಅದ್ಭುತ ಜರುಗುತ್ತದೆ. ಮೇ 25ರಿಂದ 30ರ ವರೆಗೂ ಸುಮಾರು 6 ದಿನಗಳ ಕಾಲ ಪ್ರತಿದಿನ ಮುಂಜಾನೆ 5.58ಕ್ಕೆ ಸೂರ್ಯನ ನೇರ ಕಿರಣಗಳು ಬೀಳುವ ಸುಂದರ ಕೌತುಕದ ದೃಶ್ಯ ನೋಡಬಹುದಾಗಿದೆ. ಸುಮಾರು 7 ದ್ವಾರಗಳನ್ನು ದಾಟಿ ಈ ಕಿರಣಗಳು ದೇವರ ಮೇಲೆ ಬೀಳುವುದು ಅಪರೂಪದ ದೃಶ್ಯವಾಗಿದೆ.

ಈ ಊರಿನ ಬಗ್ಗೆ ಬರೆದ ಕೆಲವು ಇತಿಹಾಸದ ಪುಸ್ತಕಗಳಲ್ಲಿ ತಪ್ಪಾಗಿ ಉಲ್ಲೇಖಿಸಲಾಗಿದ್ದು, ಯುಗಾದಿಯಂದು ಸೂರ್ಯನ ಕಿರಣಗಳು ಸೋಮನಾಥ ದೇವರ ಮೂರ್ತಿಯನ್ನು ಸ್ಪರ್ಶಿಸುತ್ತದೆ ಎಂದು ಬರೆಯಲಾಗಿದೆ. ಆದರೆ ಅದು ತಪ್ಪು ಕಲ್ಪನೆ. ಪ್ರತಿವರ್ಷ ಮೇ 25ರಿಂದ 30ರ ವರೆಗೆ ಮಾತ್ರ ಈ ಕ್ರಿಯೆ ಜರುಗಲಿದೆ. ಯಾವುದೋ ಕಿಂಡಿಯಿಂದ ಸೂರ್ಯನ ಕಿರಣ ಬೀಳುತ್ತವೆ ಎಂಬುದೂ ತಪ್ಪು ಮಾಹಿತಿ. ಸೂರ್ಯನ ಕಿರಣಗಳು ಪೂರ್ವದ್ವಾರದಿಂದ ನೇರವಾಗಿ ಬೀಳುವುದು.

ಸೂರ್ಯ ಅದೇಕೆ ವಿಚಿತ್ರವಾಗಿ ಸಿಡಿಯುತ್ತಲೇ ಇದ್ದಾನೆ?

Follow Us:
Download App:
  • android
  • ios