ಮೈಸೂರು(ಆ.14): ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಅವರು ಮೈಸೂರು ನಗರಾದ್ಯಂತ ಒಂದು ವಾರ ಸಂಗ್ರಹಿಸಿದ 20 ಲಕ್ಷ ಮೌಲ್ಯದ ಆಹಾರ ಪದಾರ್ಥ ಹಾಗೂ ಇನ್ನಿತರ ವಸ್ತುಗಳನ್ನು ಮಂಗಳವಾರ ವಿವಿಧ ಜಿಲ್ಲೆಗಳಿಗೆ ಕಳುಹಿಸಿಕೊಟ್ಟರು.

250 ಮೂಟೆ ಅಕ್ಕಿ:

ಸ್ವತಃ 3 ಲಕ್ಷ ದೇಣಿಗೆ ನೀಡಿರುವ ಎಂ.ಕೆ. ಸೋಮಶೇಖರ್‌ ಅವರು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರೊಡಗೂಡಿ ಒಂದು ವಾರದಿಂದ ನಗರದೆಲ್ಲೆಡೆ ಸುತ್ತಿ 20 ಲಕ್ಷದ ಮೌಲ್ಯದ ಆಹಾರ ಪದಾರ್ಥಗಳು, 250 ಮೂಟೆ ಅಕ್ಕಿ, ಬೇಳೆ ಹಾಗೂ ಮೂಲಭೂತ ವಸ್ತುಗಳನ್ನು ಸಂಗ್ರಹಿಸಿದ್ದಾರೆ.

ಇವುಗಳನ್ನು ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣಮಂಟಪದಿಂದ ಬೆಳಗಾವಿ, ಬಾಗಲಕೋಟೆ, ಕೊಡಗು ಜಿಲ್ಲೆಗಳಿಗೆ ಪ್ರತ್ಯೇಕವಾಗಿ 3 ಲಾರಿಗಳಲ್ಲಿ ಕಳುಹಿಸಲಾಯಿತು. ಜೊತೆಗೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಮತ್ತು ಕಾರ್ಯಕರ್ತರು ಲಾರಿಗಳ ಜೊತೆ ನೆರೆಪೀಡಿತ ಜಿಲ್ಲೆಗಳಿಗೆ ತೆರಳಿದ್ದು, ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಲ್ಲಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ, ಮಾಜಿ ಮೇಯರ್‌ ಟಿ.ಬಿ. ಚಿಕ್ಕಣ್ಣ, ನಗರಪಾಲಿಕೆ ಸದಸ್ಯರಾದ ಶೋಭಾ ಸುನಿಲ…, ಜೆ. ಗೋಪಿ, ಮುಖಂಡರಾದ ಟಿ.ಎಸ್‌. ರವಿಶಂಕರ್‌, ಶಿವಣ್ಣ, ಜಿ. ಸೋಮಶೇಖರ್‌, ವೀಣಾ, ವಿಜಯ್‌ಕುಮಾರ್‌, ಭಾಸ್ಕರ್‌, ಧರ್ಮೇಂದ್ರ, ವಿಶ್ವ, ವಸಂತ್‌, ಗುಣಶೇಖರ್‌, ವೆಂಕಟೇಶ್‌, ನಾಸೀರ್‌, ಶಾದಿಖ್‌, ಹರೀಶ್‌, ಭೈರಪ್ಪ, ಸೀನಪ್ಪ, ಶ್ರೀನಿವಾಸ್‌, ಕಿರಣ್‌ ಸಿಂಗ್‌, ಸೋಮು, ರಮೇಶ್‌, ನಾಗಮಹದೇವ, ಮಹೇಂದ್ರಗೌಡ ಮೊದಲಾದವರು ಇದ್ದರು.

ಮೈಸೂರು: ನೆರೆಯಿಂದ ಆಸ್ತಿ ಹೋಯ್ತು, ಆದ್ರೆ ಜಾತಿ ಹೋಗಿಲ್ಲ