Asianet Suvarna News Asianet Suvarna News

ಮಹಿಳೆ ಬೆತ್ತಲೆ ಕೇಸ್ : ಪ್ರಕರಣ ಭೇದಿಸಿದ ಪೊಲೀಸರಿಗೆ ರವಿ ಚನ್ನಣ್ಣವರ್ ಶ್ಲಾಘನೆ

ವಿದೇಶಿ ಮಹಿಳೆಯನ್ನು ಬೆತ್ತಲೇ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರಿಗೆ ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಚನ್ನಣ್ಣನವರ್ ಶ್ಲಾಘಿಸಿದ್ದಾರೆ. 

Ravi Channannavar Praises Doddaballapur Police
Author
Bengaluru, First Published Jan 24, 2020, 10:46 AM IST

ದೊಡ್ಡಬಳ್ಳಾಪುರ (ಜ.24) : ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 2 ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾ ಗಿರುವ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾ ಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ. ಚೆನ್ನಣ್ಣನವರ್ ಹೇಳಿದರು.

ಈ ಕುರಿತು ವಿವರ ನೀಡಿದ ಅವರು, ಚನ್ನಾಪುರದಲ್ಲಿ ಕೊಲೆಯಾದ ಅಪರಿಚಿತ ವ್ಯಕ್ತಿಯ ಚಹರೆ ಪತ್ತೆ ಮಾಡಿ, ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲಾ ಗಿದೆ. ಪ್ರಕರಣದಲ್ಲಿ ಕೊಲೆಯಾದ ವ್ಯಕ್ತಿ ಅಪರಿಚಿತನಾಗಿದ್ದ. ಜತೆಗೆ ಆರೋಪಿಗಳಾರು ಎಂಬುದು ನಿಗೂಢವಾಗಿತ್ತು. ಈ ಸವಾಲಿನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸ್ಥಳದಲ್ಲಿ ದೊರೆತ ಸೂಕ್ಷ್ಮ ಕುರುಹುಗಳಿಂದ ಜ. 20ರಂದು ಆರೋಪಿಗಳಾದ ಮೆಲ್ವೀನ್, ರವಿ, ನಿಖಿಲ್ ಕುಮಾರ್, ವಿಘ್ನೇಶ್, ಕುಷಾಲ್ ಹಾಗೂ ಮೋಹನ ಎಂಬುವರನ್ನು ಬಂಧಿಸಲಾಗಿದೆ ಎಂದರು.

ರವಿ ಚನ್ನಣ್ಣನವರ್ ಡಿಐಜಿ ಆದರೆ ಮಾಡುವ ಮೊದಲ ಕೆಲಸ!..

ಎರಡನೇ ಪ್ರಕರಣದಲ್ಲಿ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಸುಲಿಗೆ ಮಾಡಿದ ಆರೋಪಿಗಳನ್ನು ಬಂಧಿಸುವ ಲ್ಲಿಯೂ ಪೊಲೀಸರು ಯಶ್ವಸಿಯಾಗಿದ್ದಾರೆ. ವಿದೇಶಿ ಮಹಿಳೆಯನ್ನು ತಾಲೂಕಿನ ಆಲಹಳ್ಳಿ ಕಚ್ಚಾ ರಸ್ತೆಗೆ ಕರೆದುಕೊಂಡು ಬಂದಿದ್ದ ನಾಲ್ಕು ಮಂದಿ ಆರೋಪಿಗಳು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹಲ್ಲೆ ಮಾಡಿ, ಆಕೆಯ ಬಳಿ ಇದ್ದ ಒಡವೆ, ಹಣ, ಮೊಬೈಲ್ ಕಸಿದುಕೊಂಡು ಆಕೆ ಯನ್ನು ಅಲ್ಲೇ ಬಿಟ್ಟುಹೋಗಿದ್ದರು. 

ಹೆಣ್ಣು ಮಕ್ಕಳ ರಕ್ಷಣೆಗೆ ಹೊಸ ಪಡೆ: SP ರವಿ ಡಿ.ಚನ್ನಣ್ಣನವರ್‌...

ಇದಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ರಚನೆಯಾದ ತಂಡದ ಸಿಬ್ಬಂದಿ ಆರೋಪಿ ಅಭಿಷೇಕ್‌ನನ್ನು ಆತನ ಕಾರಿನೊಂದಿಗೆ ಬಂಧಿಸುವಲ್ಲಿ ಯಶ್ವಸಿಯಾ ಗಿರುತ್ತಾರೆ. ಈ ಪ್ರಕರಣದಲ್ಲಿ ಮೂವರು ಬಾಲಕರನ್ನು ಮಾನ್ಯ ಬಾಲ ನ್ಯಾಯ ಮಂಡಲಿಗೆ ಹಾಜರುಪಡಿಸಲಾಗಿದೆ. ಈ ಎರಡು ಪ್ರಕರಣಗಳನ್ನು ಅತ್ಯಂತ ತ್ವರಿತ ವಾಗಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಗೆ ಅಭಿನಂದನಾ ಪತ್ರ ಹಾಗೂ ಬಹುಮಾನ ನೀಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಟಿ. ರಂಗಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ರಾಘವೇಂದ್ರ, ಗ್ರಾಮಾಂತರ ಠಾಣಾ ಪಿಎಸ್‌ಐ ಗಜೇಂದ್ರ, ನಗರಠಾಣಾ ಪಿಎಸ್‌ಐ ವೆಂಕ ಟೇಶ್, ಸಿಬ್ಬಂದಿ ಎಚ್.ಸಿ. ರಾಧಾಕೃಷ್ಣ, ಕೃಷ್ಣಪ್ಪ, ಕರಾರ್ ಹುಸೇನ್, ಎಚ್.ಸಿ. ಪುಟ್ಟನರಸಿಂಹಯ್ಯ, ನಟರಾಜು, ಪಿ.ಸಿ ಮಧುಕುಮಾರ್, ಪಾಂಡುರಂಗ ಕುಮಾರ್ ಹುಸೇನ್ ಮತ್ತಿತರರಿದ್ದರು.

Follow Us:
Download App:
  • android
  • ios