Asianet Suvarna News Asianet Suvarna News

ಹೆಣ್ಣು ಮಕ್ಕಳ ರಕ್ಷಣೆಗೆ ಹೊಸ ಪಡೆ: SP ರವಿ ಡಿ.ಚನ್ನಣ್ಣನವರ್‌

ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ಹೊಸ ಪಡೆಯೊಂದನ್ನು ರಚಿಸಲಾಗಿದೆ. ಸದಾ ಹೆಣ್ಣು ಮಕ್ಕಳ ನೆರವಿಗೆ ಈ ಪಡೆ ಸಿದ್ಧವಿರಲಿದೆ. 

Ravi D channannavar Launched Obavva Team In bengaluru Rural
Author
Bengaluru, First Published Jan 21, 2020, 10:31 AM IST
  • Facebook
  • Twitter
  • Whatsapp

ದೊಡ್ಡಬಳ್ಳಾಪುರ [ಜ.21]:  ಶಾಲಾ ಕಾಲೇಜುಗಳ ಹಾಗೂ ಹಾಸ್ಟೆಲ್‌ಗಳ ಸಮೀಪ ಆಗುತ್ತಿರುವ ಕಿರುಕುಳಗಳ ಬಗ್ಗೆ ಹೆಣ್ಣು ಮಕ್ಕಳು ಎಲ್ಲೂ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇಂತಹವರ ರಕ್ಷಣೆಗಾಗಿಯೇ ಓಬವ್ವ ಪಡೆಯನ್ನು ರಚಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ಹೇಳಿದರು.

ಅವರು ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ನಾಗರಿಕರ ಪೊಲೀಸ್‌ ಗಸ್ತುಪಡೆ, ನಾಗರಿಕರ ಬಂದೂಕು ತರಬೇತಿ ಹಾಗೂ ಓಬವ್ವ ಪಡೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸುತ್ತೋಲೆ:  ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಓಬವ್ವ ಪಡೆ ರಚಿಸಿ ಯಶಸ್ವಿಯಾಗಿದೆ. ಇದನ್ನು ಇಡೀ ರಾಜ್ಯದಲ್ಲಿ ಜಾರಿಗೆ ತರಲು ಹಾಗೂ ಒಬವ್ವ ಪಡೆಗೆ ಅಗತ್ಯ ಕಾನೂನು ಬಲ ತುಂಬುವ ಸಲುವಾಗಿಯೇ ಆದೇಶವನ್ನು ನೀಡಿ, ಇದಕ್ಕಾಗಿ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಹೀಗಾಗಿ ಈ ಪಡೆ ಗಸ್ತಿನಲ್ಲಿ ಇರುವವರು ದೂರುಗಳನ್ನು ದಾಖಲಿಸಿ ದಂಡ ವಿಧಿಸುವ ಅಧಿಕಾರವನ್ನು ಹೊಂದಿದ್ದಾರೆ ಎಂದರು.

ಪೊಲೀಸರಿಗೆ ಒಳ್ಳೆ ಊಟ ಕೊಟ್ರೆ ಗುಡ್ಡವನ್ನೇ ಕಿತ್ತಿಡ್ತಾರೆ: ರವಿ ಚೆನ್ನಣ್ಣನವರ್...

ದಂಡ ವಸೂಲಿ:  ಪ್ರತಿ ತಿಂಗಳು ಒಬವ್ವ ಪಡೆ ಕಾರ್ಯವೈಖರಿ ಕುರಿತಂತೆ ಪರಾಮರ್ಶೆ ನಡೆಸಲಾಗುವುದು. ಶಾಲಾ ಕಾಲೇಜುಗಳ ಸಮೀಪ ಧೂಮಪಾನ ಸೇವನೆ, ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಮತ್ತಿತರೆ ಕಿರುಕುಳ ಕುರಿತಂತೆ ಸ್ಥಳದಲ್ಲೇ ದಂಡ ವಸೂಲಿ ಮಾಡಲಿದ್ದಾರೆ. ಕನಿಷ್ಠ ಒಂದು ತಿಂಗಳಿಗೆ 40 ರಿಂದ 50 ದೂರುಗಳನ್ನು ದಾಖಲು ಮಾಡಬೇಕು ಎಂದರು. ಎರೆಪ್ಪಗೌಡ ಚಾನಾಳ್‌ ಅವರು ಬರೆದಿರುವ ‘ನಮ್ಮೊಳಗೊಬ್ಬ ರವಿ ಡಿ.ಚನ್ನಣ್ಣನವರ್‌’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕಾರ‍್ಯಕ್ರಮದಲ್ಲಿ ಡಿವೈಎಸ್‌ಪಿ ರಂಗಪ್ಪ, ವೃತ್ತ ಆರಕ್ಷಕ ನಿರೀಕ್ಷಕ ರಾಘವ ಎಸ್‌. ಗೌಡ, ಆರಕ್ಷಕ ಉಪನಿರೀಕ್ಷಕ ವೆಂಕಟೇಶ್‌, ಗಜೇಂದ್ರ ಮತ್ತಿತರರು ಪಾಲ್ಗೊಂಡರು.

Follow Us:
Download App:
  • android
  • ios