ಬೆಳಗಾವಿ(ಜು.26): ರಮೇಶ್ ಜಾರಕಿಹೊಳಿ ಅವರನ್ನು ಅನರ್ಹಗೊಳಿಸಿರುವ ಸುದ್ದಿ ಹೊರಬೀಳುತ್ತಲೇ ಗೋಕಾಕ್‌ನಲ್ಲಿ ರಾಜಕೀಯ ಚಟುವಟಿಕೆಗಳೂ ಚುರುಕುಗೊಂಡಿದೆ. ಗೋಕಾಕ್ ಕ್ಷೇತ್ರದಲ್ಲಿ ಹೆಸರು ಮಾಡಿಕೊಂಡಿರುವ ರಮೇಶ್ ಜಾರಕಿಹೊಳಿ ಅವರ ಅಳಿಯ ಅಂಬಿರಾಯ ಪಾಟೀಲ ಅವರನ್ನ ಕದನಕಣಕ್ಕೆ ಇಳಿಸಲು ಸಿದ್ಧತೆಗಳು ನಡೆದಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ.

ರಮೇಶ್ ಜಾರಕಿಹೊಳಿ ಅನರ್ಹರಾದ ಬೆನ್ನಲ್ಲೇ ಗೋಕಾಕ್‌ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗದುಗೆದರಿದರಿದೆ. ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿ ತ್ವರಿತ ರಾಜಕೀಯ ಬೆಳವಣಿಗೆಗಳು ಕಂಡುಬಂದಿದೆ. ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾಯ ಪಾಟೀಲ ಅವರನ್ನ ಕದನಕಣಕ್ಕೆ ಇಳಿಸಲು ಸಜ್ಜು ನಡೆಸಲಾಗಿದೆ.

ಅನರ್ಹರು ಉಪಚುನಾವಣೆ ಸ್ಪರ್ಧಿಸಬಹುದೇ?

ವಿಧಾನಸಭೆ ವಿಸರ್ಜನೆಯಾಗುವ ತನಕ ರಮೇಶ್ ಜಾರಕಿಹೊಳಿ ಸ್ಪರ್ಧೆ ಮಾಡುವಂತಿಲ್ಲ:

ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮುಂಬೈ ಸೇರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ರಮೇಶ್ ಜಾರಕಿಹೊಳಿ ಅವರನ್ನು ಅನರ್ಹಗೊಳಿಸಿದ್ದಾರೆ. ರಮೇಶ್ ಜಾರಕಿಹೊಳಿ ಅನರ್ಹಗೊಂಡಿರುವ ಕಾರಣ ಈ ವಿಧಾನಸಭೆ ವಿಸರ್ಜನೆಯಾಗುವ ತನಕ ಸ್ಪರ್ಧೆ ಮಾಡುವಂತಿಲ್ಲ. ಇದೀಗ ಗೋಕಾಕ್‌ ಕ್ಷೇತ್ರದಿಂದ ಅಂಬಿರಾಯ ಪಾಟೀಲ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂಬಿರಾಯ ಪಾಟೀಲ ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಗೋಕಾಕ್‌ ಉಪಚುಣಾವಣೆಯಲ್ಲಿ ಅಳಿಯ ಅಂಬಿರಾಯ ಪಾಟೀಲ ಅವರನ್ನು ಕಣಕ್ಕೆ ಇಳಿಸುವುದು ಬಹುತೇಕ ಪಕ್ಕಾ ಆಗಿದೆ.

ಬಿಜೆಪಿಯಿಂದ ಸ್ಪರ್ಧೆ:

ಈಗಾಗಲೆ ರಮೇಶ್ ಜಾರಕಿಹೊಳಿ ಕ್ಷೆತ್ರದಲ್ಲಿ ಇಲ್ಲದಿದ್ದಾಗ ಅಂಬಿರಾಯ ವರ್ಚಸ್ಸು ಬೆಳೆಸಿಕ್ಕೊಂಡಿದ್ದಾರೆ. ಅಳಿಯ ಅಂಬಿರಾಯ ಪಾಟೀಲ ಗೋಕಾಕ್ನಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಜಾರಕಿಹೊಳಿ ಆಪ್ತ ವಲಯದಿಂದ ಮಾಹಿತಿ ಲಭ್ಯವಾಗಿದೆ.