ರಾಮನಗರದ ಪೊಲೀಸರ ದರ್ಪ : ಅಸ್ವಸ್ಥ ತಾಯಿ ಬೈಕಲ್ಲಿ ಕರೆದೊಯ್ಯುತ್ತಿದ್ದವಗೆ ಏಟು
- ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿ
- ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದ ಮಗನನ್ನು ಅಡ್ಡಗಟ್ಟಿದ ಪೊಲೀಸರು
- ಮಗನೊಂದಿಗೆ ಪೊಲೀಸರ ಅಮಾನವೀಯ ನಡೆ
ರಾಮನಗರ (ಮೇ.09): ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದ ಮಗನನ್ನು ಪೊಲೀಸರು ಅಡ್ಡಗಟ್ಟಿದ್ದಲ್ಲದೆ ಲಾಠಿಯಲ್ಲಿ ಹೊಡೆದು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ನಗರದಲ್ಲಿ ಶನಿವಾರ ಜರುಗಿದೆ.
ನಗರದ ಹನುಮಂತರನಗರ ಬಡಾವಣೆ ವಾಸಿ ನಾಗರತ್ನಮ್ಮ (71) ಅವರಿಗೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಪುತ್ರ ಕೆ.ಮಹದೇವ, ತಾಯಿಯನ್ನು ದ್ವಿಚಕ್ರ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಾಗರತ್ನಮ್ಮ ಅವರನ್ನು ಪರೀಕ್ಷಿಸಿದ ವೈದ್ಯರು, ಆಕ್ಸಿಜನ್ ಪ್ರಮಾಣ 71 ಇದ್ದು, ಆಮ್ಲಜನಕದ ಅವಶ್ಯಕತೆಯಿದೆ. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ.
ಕನಕಪುರ: 38 ಮಕ್ಕಳಿಗೆ ವಕ್ಕರಿಸಿದ ಕೊರೋನಾ, ಜೈನ್ ಸ್ಕೂಲ್ ಸೀಲ್‌ಡೌನ್ ...
ಅದರಂತೆ ಮಹದೇವ ಅವರು ತಾಯಿಯನ್ನು ದ್ವಿಚಕ್ರ ವಾಹನದಲ್ಲೇ ಕೂರಿಸಿಕೊಂಡು ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಐಜೂರು ರಸ್ತೆಯಲ್ಲಿನ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದಾರೆ. ಸ್ಥಳದಲ್ಲೇ ಇದ್ದ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಶುಭಾಂಬಿಕಾ ದ್ವಿಚಕ್ರ ವಾಹನದ ಕೀ ಕಸಿದುಕೊಂಡಿದ್ದಾರೆ. ಇದೇ ಸಮಯಕ್ಕೆ ನಾಗರತ್ನಮ್ಮ ಅವರಿಗೆ ಸಂಬಂಧಿಯಾಗಿರುವ ಪತ್ರಕರ್ತರೊಬ್ಬರು ಸ್ಥಳಕ್ಕೆ ಬಂದಿದ್ದಾರೆ. ನಾಗರತ್ನಮ್ಮ ಅವರಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದು, ದ್ವಿಚಕ್ರ ವಾಹನದ ಕೀ ನೀಡುವಂತೆ ಮಾಡಿದ ಮನವಿಗೂ ಇನ್ಸ್‌ಪೆಕ್ಟರ್ ಕರಗಲಿಲ್ಲ. ಲಾಠಿಯಿಂದ ರುದ್ರೇಶ್ವರ್ ಮತ್ತು ಮಹದೇವ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ.
ದಿನಸಿ-ತರಕಾರಿ ತರಲು ವಾಹನ ಬಳಸಂಗಿಲ್ಲ, ಮೇ.10ರಿಂದ ಕರ್ನಾಟಕ ಸಂಪೂರ್ಣ ಲಾಕ್‌ಡೌನ್ !
ನಂತರ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಧ್ಯ ಪ್ರವೇಶಿಸಿ ನಾಗರತ್ನಮ್ಮ, ಮಹದೇವ ಅವರು ಆಸ್ಪತ್ರೆಗೆ ತೆರಳು ನೆರವಾದರು. ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನಂತರ ನಾಗರತ್ನಮ್ಮ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಿ ದಾಖಲು ಮಾಡಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona