Asianet Suvarna News Asianet Suvarna News

ಕನಕಪುರ: 38 ಮಕ್ಕಳಿಗೆ ವಕ್ಕರಿಸಿದ ಕೊರೋನಾ, ಜೈನ್‌ ಸ್ಕೂಲ್‌ ಸೀಲ್‌ಡೌನ್‌

ಕ್ಯಾಂಪಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ 280 ವಿದ್ಯಾರ್ಥಿಗಳು| ಶಾಲಾ ಆವರಣ ಸುತ್ತ ಸೋಂಕು ನಿವಾರಕ ಔಷಧಿ ಸಿಂಪಡಿಸಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಕೋವಿಡ್‌ ಟೆಸ್ಟ್‌| ಸೋಂಕು ತಗುಲಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ ಉಳಿದ ವಿದ್ಯಾರ್ಥಿಗಳಿಗೆ ಐಸೋಲೇಷನ್‌| ಸೋಂಕಿತರ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳು ಶಿಕ್ಷಕರಿಗೆ ಕ್ವಾರಂಟೈನ್‌|  

Jain School Sealdown due 38 Stundnts Tests Positive for Covid 19 at Kanakapura grg
Author
Bengaluru, First Published May 5, 2021, 11:34 AM IST

ಕನಕಪುರ(ಮೇ.05): ಹಾರೋಹಳ್ಳಿ ಹೋಬಳಿಯ ಜಕ್ಕಸಂದ್ರ ಬಳಿಯಿರುವ ಜೈನ್‌ ಅಂತಾರಾಷ್ಟ್ರೀಯ ಶಾಲೆಯ ಸುಮಾರು 38 ವಿದ್ಯಾರ್ಥಿಗಳಿಗೆ ಸೋಂಕು ತಗು​ಲಿ​ರುವ ಹಿನ್ನೆಲೆಯಲ್ಲಿ ಕ್ಯಾಂಪಸ್‌ ಆವರಣವನ್ನು ಸೀಲ್‌ ಡೌನ್‌ ಮಾಡಿ ನಿಷೇಧಿತ ವಲಯ ಎಂದು ಘೋಷಣೆ ಮಾಡಲಾ​ಗಿದೆ.

ಈ ಕ್ಯಾಂಪಸ್‌ನಲ್ಲಿ 280 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಾಲಾ ಆವರಣ ಸುತ್ತ ಸೋಂಕು ನಿವಾರಕ ಔಷಧಿ ಸಿಂಪಡಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾ​ಗು​ತ್ತಿ​ದೆ. ಸೋಂಕು ತಗುಲಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಿ ಉಳಿದ ವಿದ್ಯಾರ್ಥಿಗಳನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಸೋಂಕಿತರ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳು ಶಿಕ್ಷಕರನ್ನು ಕ್ವಾರಂಟೈನಲ್ಲಿ ಇರಿಸಲಾಗಿದೆ. ಸೋಂಕು ತಗುಲಿರುವ ವಿದ್ಯಾರ್ಥಿಗಳಿಗೆ ಆರು ದಿನಗಳ ನಂತರ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುವುದು ಎಂದು ತಹ​ಸೀ​ಲ್ದಾರ್‌ ವಿಶ್ವ​ನಾಥ್‌ ‘ಕನ್ನ​ಡ​ಪ್ರ​ಭ‘ಕ್ಕೆ ಪ್ರತಿ​ಕ್ರಿಯೆ ನೀಡಿದರು.

"

ಆನ್‌ಲೈನ್ ಕ್ಲಾಸ್‌: ಶಾಲಾ ಶುಲ್ಕ ಕಡಿತಗೊಳಿಸಲು ಸುಪ್ರೀಂ ಸೂಚನೆ!

ಹಾರೋಹಳ್ಳಿ ಹೋಬಳಿ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಸೋಂಕು ಹೆಚ್ಚಾಗಿರುವುದು ಕಂಡು ಬಂದಿದ್ದು, ಅಂತಹ ಕಡೆ ಸೋಂಕು ನಿವಾರಕ ಔಷಧಿ ಸಿಂಪಡಣೆ ನಡೆಸಿ ರೋಗ ಹರಡದಂತೆ ಎಚ್ಚರ ವಹಿಸಲಾಗಿದೆ. ಗ್ರಾಮೀಣ ಭಾಗದ ಜನರು ಕೆಮ್ಮು ಶೀತ, ನೆಗಡಿ ಕಾಣಿಸಿಕೊಂಡರೆ ಹೆದರಿ ಖಾಸಗಿ ವೈದ್ಯರ ಬಳಿ ತೆಗೆದುಕೊಂಡು ಸುಮ್ಮನಾಗುತ್ತಿರುವುದು ವೈರಸ್‌ ಹರಡಲು ಒಂದು ಕಾರಣವಾಗಿದೆ, ಜನರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷೆಗೊಳಪಡುವುದರಿಂದ ರೋಗ ಲಕ್ಷಣವನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ತಮ್ಮ ಹಾಗೂ ತಮ್ಮ ಕುಟುಂಬದ ಮತ್ತು ಗ್ರಾಮದ ಆರೋಗ್ಯ ಕಾಪಾಡಲು ಜನತೆ ಸ್ಥಳೀಯ ಆಡಳಿತದಲ್ಲಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದ​ರ್ಭ​ದಲ್ಲಿ ಜಿಲ್ಲಾ ಪೊಲೀಸ್‌ ಉಪ ವರಿಷ್ಠಾಧಿಕಾರಿ ರಮೇಶ್‌, ವೃತ್ತ ನಿರೀಕ್ಷಕರಾದ ಕೃಷ್ಣ, ರಾಮಪ್ಪ, ಆರಕ್ಷಕ ಉಪ ನಿರೀಕ್ಷಕ​ರಾದ ಮುರುಳಿ, ನವೀನ್‌, ಹಾರೋಹಳ್ಳಿ ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಕಿರಣ್‌, ಹಾರೋಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಮದ್‌ ಉಪಸ್ಥಿತರಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios