Asianet Suvarna News Asianet Suvarna News

'ವೈಜ್ಞಾನಿಕ ಪ್ರಜ್ಞಾ ಮಟ್ಟವನ್ನು ಉನ್ನತಿಕರಿಸಿಕೊಳ್ಳುವುದು ಅಗತ್ಯ'

ದೇಶದ ವಿದ್ಯಾರ್ಥಿಗಳೆಲ್ಲರೂ ತಮ್ಮ ವೈಜ್ಞಾನಿಕ ಪ್ರಜ್ಞಾ ಮಟ್ಟವನ್ನು ಉನ್ನತಿಕರಿಸಿಕೊಳ್ಳಬೇಕು ಎಂದು ಎಐಡಿಎಸ್ಓ ಮಾಜಿ ರಾಜ್ಯಾಧ್ಯಕ್ಷೆ ಕೆ. ಉಮಾ ಕರೆ ನೀಡಿದರು.

Raise the level of scientific consciousness snr
Author
First Published Oct 15, 2023, 8:35 AM IST

  ಮೈಸೂರು :  ದೇಶದ ವಿದ್ಯಾರ್ಥಿಗಳೆಲ್ಲರೂ ತಮ್ಮ ವೈಜ್ಞಾನಿಕ ಪ್ರಜ್ಞಾ ಮಟ್ಟವನ್ನು ಉನ್ನತಿಕರಿಸಿಕೊಳ್ಳಬೇಕು ಎಂದು ಎಐಡಿಎಸ್ಓ ಮಾಜಿ ರಾಜ್ಯಾಧ್ಯಕ್ಷೆ ಕೆ. ಉಮಾ ಕರೆ ನೀಡಿದರು.

ನಗರದ ರಾಮಸ್ವಾಮಿ ವೃತ್ತದ ಬಳಿ ಇರುವ ಎಐಡಿಎಸ್ಓ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ವಲಯ ಮಟ್ಟದ ಅಧ್ಯಯನ ಶಿಬಿರದಲ್ಲಿ ಕ್ರಾಂತಿಕಾರಿ ಸಾಹಿತಿ ಶರತ್ ಚಂದ್ರ ಚಟರ್ಜಿ ಅವರ ಅಧಿಕಾರ ಕಾದಂಬರಿ ಬಗ್ಗೆ ಚರ್ಚೆಯಲ್ಲಿ ಅವರು ಮಾತನಾಡಿದರು.

ದಿನೇ ದಿನೇ ಕೆಳಮಟ್ಟಕ್ಕೆ ಕುಸಿಯುತ್ತಿರುವ ನಮ್ಮ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಮೇಲೆತ್ತಲು, ಜನರ ನೋವುಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಸು ವಿದ್ಯಾರ್ಥಿಗಳದ್ದಾಗಲು, ಶೋಷಿತರ ಪರವಾಗಿ ಧ್ವನಿಯುತ್ತಲೂ ಶರತ್ ಚಂದ್ರರ ಉದಾತ್ತ ಮೌಲ್ಯಗಳುಳ್ಳ ಕಾದಂಬರಿಗಳು ಬಹಳ ಅವಶ್ಯಕವಾಗಿದೆ ಎಂದರು.

ಪ್ರಮುಖವಾಗಿ ಅಧಿಕಾರ ಕಾದಂಬರಿ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಹೋರಾಟಗಾರರ, ಕ್ರಾಂತಿಕಾರಿಗಳ ಜೀವನ ಸಂಘರ್ಷಗಳನ್ನು ಭಾವನಾತ್ಮಕವಾಗಿ, ಸ್ಪೂರ್ತಿದಾಯಕವಾಗಿ ನಮ್ಮ ಮುಂದಿಟ್ಟಿದೆ. ದೇಶದ ಏಳಿಗೆಗೆ ಗಂಡು ಹಾಗೂ ಹೆಣ್ಣು ಮಕ್ಕಳ ಪಾತ್ರ ಎಂದಿಗೂ ಸಮಾನ. ಈ ಕಾದಂಬರಿ ಒಂದು ಕಡೆ ಹಳೆಯ ಗೊಡ್ಡು ಸಂಪ್ರದಾಯಗಳನ್ನು ದಿಕ್ಕರಿಸುವ, ಮತ್ತೊಂದು ಕಡೆ ಬ್ರಿಟಿಷರ ಅಮಾನವೀಯ ಶೋಷಣೆ ಹಾಗೂ ದಬ್ಬಾಳಿಕೆಗಳ ವಿರುದ್ಧ ಸಿಡಿದೇಳುವ ಮನೋಭಾವವನ್ನು ತೆರೆದಿಟ್ಟಿದೆ ಎಂದು ಅವರು ಹೇಳಿದರು.

ನಮ್ಮ ದೇಶದ ರಾಜಿರಹಿತ ಕ್ರಾಂತಿಕಾರಿಗಳ ಅಂತಿಮ ಗುರಿ ಕೇವಲ ಸುಧಾರಣೆಯಲ್ಲ, ಮಾನವನಿಂದ ಮಾನವನ ಶೋಷಣೆಯ ಕೊನೆ ಎಂದು ನಿಜವಾದ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಯನ್ನು ಬಿಚ್ಚಿಟ್ಟಿದೆ ಎಂದರು.

ಶಿಬಿರವನ್ನು ಉದ್ಘಾಟಿಸಿ ಎಐಡಿಎಸ್ಒ ಮಾಜಿ ಜಿಲ್ಲಾಧ್ಯಕ್ಷ ಬಿ. ರವಿ ಮಾತನಾಡಿ, ವಿದ್ಯಾರ್ಥಿ ಶಿಬಿರಗಳ ನಿಜವಾದ ಮಹತ್ವವೇನು, ಉದಾತ್ತವಾದ ಜೀವನ ಹಾಗೂ ಆದರ್ಶ ಎಂದರೇನು?, ಒಂದು ಕಡೆ ಚಂದ್ರಗ್ರಹಕ್ಕೆ ಉಪಗ್ರಹ ಉಡಾವಣೆ ಮಾಡುವ ನಮ್ಮ ದೇಶ, ಮತ್ತೊಂದು ಕಡೆ ಹಸಿವಿನ ಸೂಚ್ಯಾಂಕದಲ್ಲಿ 111ನೇ ಸ್ಥಾನವನ್ನು ತಲುಪಿದೆ. ಮಗದೊಂದು ಕಡೆ ಶ್ರೀಮಂತರು ತಮ್ಮ ಆಸ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೇ ದೇಶದ ನಿಜವಾದ ಅಭಿವೃದ್ಧಿಯೇ ಎಂದು ಪ್ರಶ್ನಿಸಿದರು.

ಎಐಡಿಎಸ್ಒ ಜಿಲ್ಲಾಧ್ಯಕ್ಷ ಸುಭಾಷ್, ಉಪಾಧ್ಯಕ್ಷೆ ಅಸಿಯ ಬೇಗಂ, ಕಾರ್ಯದರ್ಶಿ ಚಂದ್ರಕಲಾ, ಪದಾಧಿಕಾರಿಗಳಾದ ನಿತಿನ್, ಸ್ವಾತಿ, ಚೈತ್ರಾ, ಚಂದ್ರಿಕಾ, ಹೇಮಲತಾ, ಚಂದನ, ದಿಶಾ, ಅಂಜಲಿ, ಶಿಬಿರಾರ್ಥಿಗಳಾದ ಅಭಿಷೇಕ್, ರಕ್ಷಿತಾ, ಧನುಶ್ರೀ, ಚೇತನಾ, ಶ್ಯಾಮಲಾ, ಮಮತಾ ಇದ್ದರು.

Follow Us:
Download App:
  • android
  • ios