Chikkamagaluru rain: ಕಾದ ಕಾವಲಿಯಾಗಿದ್ದ ಕಾಫಿನಾಡಲ್ಲಿ ತಂಪೆರೆದ ಮಳೆರಾಯ!
ಕಾದ ಕಾವಲಿನಂತಾಗಿದ್ದ ಕಾಫಿಯ ನಾಡಿನ ಬಯಲುಸೀಮೆಯಲ್ಲಿ ಗುರುವಾರ ಮಧ್ಯಾಹ್ನದ ನಂತರ ಬಂದ ಮಳೆ ತಂಪೆರೆಯಿತು.
ಚಿಕ್ಕಮಗಳೂರು (ಏ.21): ಕಾದ ಕಾವಲಿನಂತಾಗಿದ್ದ ಕಾಫಿಯ ನಾಡಿನ ಬಯಲುಸೀಮೆಯಲ್ಲಿ ಗುರುವಾರ ಮಧ್ಯಾಹ್ನದ ನಂತರ ಬಂದ ಮಳೆ ತಂಪೆರೆಯಿತು.
ಏ. 13 ರಿಂದ ಆರಂಭವಾದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏ.20 ರಂದು ಮಧ್ಯಾಹ್ನ 3 ಗಂಟೆಗೆ ಮುಕ್ತಾಯವಾಯಿತು. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಅಂದರೆ 3 ಗಂಟೆಯ ನಂತರದಲ್ಲಿ ಚಿಕ್ಕಮಗಳೂರು ನಗರದಲ್ಲಿ ಸಾಧಾರಣವಾಗಿ ಆರಂಭವಾದ ಮಳೆ ನಂತರದಲ್ಲಿ ಉತ್ತಮ ರೀತಿಯಲ್ಲಿ ಬಂದಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆ ಬಂದಿದ್ದು. ತಮ್ಮ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಹಿನ್ನಲೆಯಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಲು ಬಂದಿದ್ದ ಜನರು ಮಳೆಯಿಂದಾಗಿ ಗಂಟೆಗಟ್ಟಲೆ ಅಂಗಡಿಗಳ ಮುಂದೆ ನಿಂತಿದ್ದರು. ಕೆಲವು ಮಂದಿ ಸುರಿಯುವ ಮಳೆಯಲ್ಲಿಯೇ ಮನೆಯತ್ತ ಪ್ರಯಾಣ ಬೆಳೆದರು.
ಇನ್ನು ಕಡೂರು ಹಾಗೂ ಬೀರೂರಿನಲ್ಲೂ ಮಳೆ ಬಂದಿದೆ. ಇಲ್ಲಿನ ಗ್ರಾಮೀಣ ಭಾಗದಲ್ಲೂ ಉತ್ತಮ ಮಳೆಯಾಗಿದೆ. ತರೀಕೆರೆ ತಾಲೂಕಿನಲ್ಲೂ ಕೂಡ ಮಳೆಯಾಗಿದ್ದರಿಂದ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಜನರಿಗೆ ಮಳೆ ತಂಪೆರೆಯಿತು.
ರೈತರಿಗೆ ಶುಭ ಸುದ್ದಿ: ಈ ವರ್ಷ ಸಹಜ ಮುಂಗಾರು; ‘ಎಲ್ ನಿನೋ’ ಪರಿಣಾಮ ಇಲ್ಲ ಎಂದ ಹವಾಮಾನ ಇಲಾಖೆ
ಗುಡುಗು ಸಿಡಿಲಿನ ಅರ್ಭಟ:
ಕಡೂರು: ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಕಡೆ ಗುರುವಾರ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದು ಜನರ ಮನ ತಣಿಸಿತು.
ಗುರುವಾರ ಬೆಳಗಿನಿಂದಲೂ ಸುಡು ಬಿಸಿಲಿನ ವಾತಾವರಣವಿದ್ದು ಸಂಜೆ 4 ಗಂಟೆಗೆ ಇದ್ದಕ್ಕಿದ್ದಂತೆ ಮೋಡ ಮುಸುಕುವ ಮೂಲಕ ಸುಮಾರು 4.30ರ ಸುಮಾರಿಗೆ ಇದ್ದಕ್ಕಿದ್ದಂತೆ ಜೋರಾದ ಗಾಳಿ ಬಿಸಿ, ಗುಡುಗು, ಸಿಡಿಲು ಆರಂಭವಾಗಿ ಜೋರಾದ ಮಳೆ ಸುರಿಯಿತು. ಅ ಮೂಲಕ ಬಿಸಿಲ ಧಗೆಗೆ ಹೈರಾಣಾಗಿದ್ದ ಇಳೆಯನ್ನು ತಂಪಾಗಿಸಿತು. ಸುಮಾರು ಮುಕ್ಕಾಲು ಗಂಟೆಗಳ ಕಾಲ ಕಡೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲೂ ಉತ್ತಮವಾಗಿ ಮಳೆ ಬಂದಿತು. ಮೂರು ತಿಂಗಳ ಬಳಿಕ ಬಂದಿರುವ ಪ್ರಥಮ ಮಳೆ ಇದಾಗಿದ್ದು ಬಂದ ಮಳೆಯಿಂದ ಬಿಸಿಲಿನಿಂದ ಬಳಲಿದ್ದ ಜನರಲ್ಲಿ ಸಂತಸ ಉಂಟು ಮಾಡಿದೆ. ಬಂದ ಮಳೆಗೆ ಕಡೂರು ಪಟ್ಟಣದಲ್ಲಿ ವಿದ್ಯುತ… ಸಂಪರ್ಕ ಅಸ್ತವ್ಯಸ್ತವಾಗಿದ್ದು ರಾತ್ರಿ ಸಿಡಿಲಿನಿಂದಾಗಿ ಡಿಸಿಗಳು ಹಾಳಾಗಿ ವಿದ್ಯುತ… ಸಂಪರ್ಕ ಕಡಿತವಾಗಿ ಜನರು ಕತ್ತಲಲ್ಲಿ ಕಳೆಯುವಂತಾಯ್ತು.
Rain Forecast: ಈ ಬಾರಿ ಮಳೆ ಕಮ್ಮಿ, 20% ಬರ ಸಾಧ್ಯತೆ: ರೈತರಿಗೆ ಶಾಕ್ ನೀಡಿದ ಸ್ಕೈಮೆಟ್