ಕಳೆದ 4 ವರ್ಷ ಭಾರಿ ಮಳೆ ಕಂಡಿದ್ದ ಭಾರತದಲ್ಲಿ ಈ ಸಲ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮುಂಗಾರು ಸುರಿಯಲಿದೆ. ‘ಎಲ್ ನಿನೋ’ ಹವಾಮಾನ ಸ್ಥಿತ್ಯಂತರದ ಪರಿಣಾಮ, ದೇಶದಲ್ಲಿ ಬರಗಾಲ ಉಂಟಾಗುವ ಶೇ.20ರಷ್ಟುಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಸಂಸ್ಥೆ ‘ಸ್ಕೈಮೆಟ್’ ಮುನ್ಸೂಚನೆ ನೀಡಿದೆ.
ಪಿಟಿಐ ನವದೆಹಲಿ (ಏ.11) : ಕಳೆದ 4 ವರ್ಷ ಭಾರಿ ಮಳೆ ಕಂಡಿದ್ದ ಭಾರತದಲ್ಲಿ ಈ ಸಲ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮುಂಗಾರು ಸುರಿಯಲಿದೆ. ‘ಎಲ್ ನಿನೋ’ ಹವಾಮಾನ ಸ್ಥಿತ್ಯಂತರದ ಪರಿಣಾಮ, ದೇಶದಲ್ಲಿ ಬರಗಾಲ ಉಂಟಾಗುವ ಶೇ.20ರಷ್ಟುಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಸಂಸ್ಥೆ ‘ಸ್ಕೈಮೆಟ್’ ಮುನ್ಸೂಚನೆ(Skymet's forecast) ನೀಡಿದೆ.
ಕಳೆದ 4 ವರ್ಷಗಳಲ್ಲಿ ‘ಲಾ ನಿನಾ’ ಹವಾಮಾನ ಸ್ಥಿತ್ಯಂತರದ ಪರಿಣಾಮ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿತ್ತು. ಆದರೆ ಈ ಸಲ ‘ಲಾ ನಿನಾ’ ಅಂತ್ಯಗೊಳ್ಳಲಿದೆ. ಅದಕ್ಕೆ ವಿರುದ್ಧವಾದ ‘ಎಲ್ ನಿನೋ’ ಸ್ಥಿತ್ಯಂತರ ಉಂಟಾಗಲಿದೆ. ಇದರಿಂದ ಮಳೆ ಕ್ಷೀಣಿಸುವ ಸಂಭವವಿದೆ ಎಂದು ಮುಂಗಾರನ್ನೇ ನಂಬಿರುವ ರೈತರು ಚಿಂತೆಗೀಡಾಗುವಂಥ ಮಾಹಿತಿಯನ್ನು ‘ಸ್ಕೈಮೆಟ್’ ಕೊಟ್ಟಿದೆ.
ಪ್ರವಾಸಕ್ಕೆ ಹೋಗುವವರಿಗೆ ಮಳೆ ಅಡ್ಡಿಯಾಗೋ ಸಾಧ್ಯತೆ: ಏ.12ರಿಂದ 20ರವರೆಗೆ ಕರ್ನಾಟಕದಲ್ಲಿ ವರುಣಾರ್ಭಟ
ಆದರೆ ಸರ್ಕಾರಿ ಹವಾಮಾನ ಸಂಸ್ಥೆಯಾದ ಭಾರತೀಯ ಹವಾಮಾನ ಇಲಾಖೆ ಇನ್ನೂ ಮುಂಗಾರು ಮುನ್ಸೂಚನೆ ಬಿಡುಗಡೆ ಮಾಡಿಲ್ಲ.
ಸ್ಕೈಮೆಟ್ ಹೇಳಿದ್ದೇನು?:
ಜೂನ್‌ನಿಂದ ಸೆಪ್ಟೆಂಬರ್ ನಡುವಿನ 4 ತಿಂಗಳ ದೀರ್ಘಾವಧಿ ವೇಳೆ ಶೇ.94ರಷ್ಟು(868.6 ಮಿ.ಮೀ.) ಮುಂಗಾರು ಮಳೆ ಸುರಿಯಬಹುದು. ಉತ್ತರ ಹಾಗೂ ಮಧ್ಯ ಭಾರತದಲ್ಲಿ ಮಳೆ ಕೊರತೆ ಉಂಟಾಗಬಹುದು. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಹರಾರಯಣ, ರಾಜಸ್ಥಾನ ಹಾಗೂ ಉತ್ತರ ಪ್ರದೇಶಗಳು ಮಳೆಯ ಕೊರತೆ ಎದುರಿಸಲಿವೆ. ದೇಶದಲ್ಲಿ ಬರಗಾಲ ಉಂಟಾಗುವ ಶೇ.20ರಷ್ಟುಸಾಧ್ಯತೆ ಇದೆ’ ಎಂದಿದೆ.
ವಾಡಿಕೆಗಿಂತ ಹೆಚ್ಚು ಮಳೆ ಆಗಬೇಕು ಎಂದರೆ ಶೇ.110ರಷ್ಟುಮಳೆ ಆಗಬೇಕು. ಇದು ಸಾಧ್ಯವೇ ಇಲ್ಲ. ವಾಡಿಕೆಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಶೇ.15ರಷ್ಟುಮಾತ್ರ ಇದೆ. ವಾಡಿಕೆಯಷ್ಟೇ ಮಳೆ ಬೀಳುವ ಸಾಧ್ಯತೆ ಶೇ.25ರಷ್ಟುಮಾತ್ರ ಇದೆ ಎಂದು ಅದು ವಿವರಿಸಿದೆ.
ಎಲ್ ನಿನೋ ಎಂದರೇನು?:
ದಕ್ಷಿಣ ಅಮೆರಿಕ ಸಮೀಪ ಪೆಸಿಫಿಕ್ ಸಾಗರದಲ್ಲಿ ನೀರು ಬಿಸಿ ಆಗುತ್ತದೆ. ಇದಕ್ಕೆ ‘ಎಲ್ ನಿನೋ’ ಎನ್ನುತ್ತಾರೆ. ಇದು ಮುಂಗಾರು ಮಾರುತಗಳನ್ನು ದುರ್ಬಲಗೊಳಿಸುತ್ತದೆ.
Weather Forecast: ಇನ್ನೂ 2 ದಿನ ಗುಡುಗು ಸಹಿತ ಮಳೆ: ಸುವರ್ಣನ್ಯೂಸ್‌ಗೆ ಹವಾಮಾನ ಇಲಾಖೆ ಮುನ್ಸೂಚನೆ
ಲಾ ನಿನಾ ಎಂದರೇನು?:
ದಕ್ಷಿಣ ಅಮೆರಿಕ ಸಮೀಪ ಪೆಸಿಫಿಕ್ ಸಾಗರದಲ್ಲಿ ನೀರು ತಣ್ಣಗಾಗುತ್ತದೆ. ಇದಕ್ಕೆ ‘ಲಾ ನಿನಾ’ ಎನ್ನುತ್ತಾರೆ. ಇದು ಮುಂಗಾರು ಮಾರುತಗಳಿಗೆ ಬಲ ನೀಡಿ ಭಾರತಕ್ಕೆ ಉತ್ತಮ ಮಳೆ ಸುರಿಸುತ್ತದೆ.
