ಯಡಿಯೂರಪ್ಪ ಕಾಲ್ಗುಣದಿಂದ‌ ಮಳೆ : ರೈತರು ಹಾಡಿ ಹೊಗಳಿದ ರೈತರು

ಕಳೆದ ರಾತ್ರಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಬಂದಿದ್ದಕ್ಕೆ ಕಾರಣ ಬಿ.ಎಸ್. ಯಡಿಯೂರಪ್ಪನವರು ಎಂದು ರೈತರು ಹಾಡಿ ಹೊಗಳಿದ್ದಾರೆ. ಬರ ವೀಕ್ಷಣೆಗೆ ಆಗಮಿಸಿದ್ದರಿಂದ ಅವರ ದೆಸೆಯಿಂದ ಜಿಲ್ಲೆಯಾದ್ಯಂತ ವರ್ಷಧಾರೆಯಾಗಿದೆ ಎಂದು ರೈತರು ಬಣ್ಣಿಸಿದ್ದಾರೆ.

Rain from Yeddyurappa Kalguna: Farmers praised by farmers  snr

 ತುಮಕೂರು :  ಕಳೆದ ರಾತ್ರಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಬಂದಿದ್ದಕ್ಕೆ ಕಾರಣ ಬಿ.ಎಸ್. ಯಡಿಯೂರಪ್ಪನವರು ಎಂದು ರೈತರು ಹಾಡಿ ಹೊಗಳಿದ್ದಾರೆ. ಬರ ವೀಕ್ಷಣೆಗೆ ಆಗಮಿಸಿದ್ದರಿಂದ ಅವರ ದೆಸೆಯಿಂದ ಜಿಲ್ಲೆಯಾದ್ಯಂತ ವರ್ಷಧಾರೆಯಾಗಿದೆ ಎಂದು ರೈತರು ಬಣ್ಣಿಸಿದ್ದಾರೆ.

ಯಡಿಯೂರಪ್ಪ ಆಗಮಿಸುತ್ತಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಮಳೆ ಬಂತು. ಹೀಗಾಗಿ, ಕ್ಷೇತ್ರವನ್ನೆಲ್ಲಾ ಸುತ್ತಾಡಿ ಮಳೆ ಬರುವಂತಾಗಲಿ ಎಂದು ರೈತರು ಯಡಿಯೂರಪ್ಪನವರಿಗೆ ಜೈಕಾರ ಹಾಕಿದ್ದಾರೆ. ಮಧುಗಿರಿ ತಾಲೂಕು ಕೋಡ್ಲಾಪುರ ಗ್ರಾಮಕ್ಕೆ ಬರ ವೀಕ್ಷಣೆಗೆ ತೆರಳಿದ ವೇಳೆ ತಿಮ್ಮಪ್ಪ ಎಂಬ ರೈತ ಹಾಡಿ ಹೊಗಳಿದ್ದಾರೆ.

ಸರ್ಕಾರದ ವಿರುದ್ಧ ಬಿಎಸ್‌ವೈ ಗರಂ

ಮಧುಗಿರಿ(ನ.08):  ದಾರಿಯ ಉದ್ದಗಲಕ್ಕೂ ಎಡ, ಬಲ ನೋಡ್ತಾ ಇದ್ಧೀನಿ, ರೈತರ ಜಮೀನಿಗೆ ಇಳಿದು ನೋಡುತ್ತಿದ್ದು, ಈ ಬಾರಿ ಮಳೆ ಇಲ್ಲದೆ ರೈತ ಬಿತ್ತಿದ ಎಲ್ಲ ಬೆಳೆಗಳು ಸಂಪೂರ್ಣ ನಾಶವಾಗಿವೆ. ಬಿತ್ತಿದ ಬೀಜ ಕೂಡ ಸಿಗದೆ ರೈತ ಕಂಗಲಾಗಿದ್ದಾನೆ. ಮುಂದಿನ ಜೀವನ ಏನೂ ಎಂದು ಯೋಚಿಸುವ ದುಸ್ಥಿತಿ ತಲುಪ್ಪಿದ್ದರೂ ಯಾವುದೇ ಸಚಿವರು ಸ್ಥಳ ಪರಿಶೀಲಿಸಿ ರೈತರಲ್ಲಿ ಆತ್ಮ ವಿಶ್ವಾಸ ಮೂಡಿಸಿಲ್ಲ. ನಾನು, ಬರ ಪ್ರವಾಸ ಶುರು ಮಾಡಿದ ನಂತರ ಅವರು ಈಗ ಪ್ರವಾಸ ಕೈಗೊಳ್ಳಲು ಶುರು ಮಾಡಿದ್ದಾರೆ ಎಂದು ಸರ್ಕಾರದ ಕಾರ್ಯ ವೈಖರಿ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಿಡಿಕಾರಿದರು.

ತಾಲೂಕಿನಲ್ಲಿ ಬರ ಅಧ್ಯಯನ ಪ್ರವಾಸ ನಡೆಸಿ ಕೋಡ್ಲಾಪುರ, ಚಿನ್ನೆನಹಳ್ಲಿ, ಬಡವನಹಳ್ಳಿ ಭಾಗದ ರೈತರ ಜಮೀನಿಗಿಳಿದು ಬೆಳೆ ನಾಶವಾಗಿರುವುದನ್ನು ಪರಿಶೀಲಿಸಿ ಮಾತನಾಡಿದರು. ರೈತರ ಪಾಲಿಗೆ ಸರ್ಕಾರ ಜೀವಂತವಿದೆಯೋ ಅಥವಾ ಸತ್ತಿದೆಯೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದು ರೈತರಿಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇನೆ. ರೈತರು ಅಲ್ಲಿಯವರೆಗೆ ಧೃತಿಗೆಡಬಾರದು ಎಂದರು.

ಶೀಘ್ರದಲ್ಲೇ ವಿಪಕ್ಷ ನಾಯಕನ ಹೆಸರು ಪ್ರಕಟ: ಯಡಿಯೂರಪ್ಪ

ಕೋಡ್ಲಾಪುರದಲ್ಲಿ ರೈತರು ನಿಮ್ಮ ಕಾಲ್ಗುಣದಿಂದ ಮಳೆ ಬಂದಿದೆ. ಬರ ವೀಕ್ಷಣೆ ವೇಳೆ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ ರೈತರು ನಿಮ್ಮ ಕಾಲ್ಗುಣದಿಂದ ಜಿಲ್ಲೆಯಲ್ಲಿ ಮಳೆ ಬಂದಿದೆ. ನೀವು ಬರುತ್ತೀರಾ ಎಂಬ ಸುದ್ದಿ ಕೇಳಿ, ಇದೇ ಮೊದಲ ಬಾರಿಗೆ ಮಳೆ ಬಂದಿದೆ. ದಯಮಾಡಿ ಕ್ಷೇತ್ರದಲ್ಲಿ ಓಡಾಡಿ ಮಳೆ ಬರುತ್ತದೆ ಎಂದು ಬಿಎಸ್‌ವೈಗೆ ರೈತರು ಜೈಕಾರ ಹಾಕಿದರು. ಮಳೆ ಇಲ್ಲದೆ ಶೇಂಗಾ ಒಣಗಿದೆ. ರೈತರು ತಂದ ಶೇಂಗಾ ಗಿಡವನ್ನು ಕೈಯಲ್ಲಿ ಹಿಡಿದು ಪರಿಶೀಲಿಸಿದರು.

ಮಧುಗಿರಿಯಲ್ಲಿ ಸುದ್ದಿಗೋಷ್ಠಿ.: ಕೊರಟೆಗೆರೆ-ಮಧುಗಿರಿ ಈ ಭಾಗದ ರೈತರ ಹೊಲಗಳಿಗೆ ಬೇಟಿ ನೀಡಿ ಸ್ಥಿತಿಗತಿ ನೋಡಿದ್ದು, ಬಿತ್ತನೆ ಮಾಡಿರುವ ಬೆಳೆಗಳು ನಾಶವಾಗಿವೆ. ಜಾನುವಾರುಗಳಿಗೆ ಮೇವು ಸಹ ಇಲ್ಲ, ಆದರೂ ಸರ್ಕಾರ ರೈತರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿಲ್ಲ ಎಂದರು.

ಮಧಗಿರಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಲ ವಾಡಿಕೆ ಮಳೆಗಿಂತ ತುಂಬಾ ಕಡಿಮೆ ಮಳೆ ಬಿದ್ದಿದೆ. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.

ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಅವರ ಜಿಲ್ಲೆ, ಕ್ಷೇತ್ರದಲ್ಲಿ ಇಂತಹ ಬರ ಪರಿಸ್ಥಿತಿ ನೋಡಿ ಶಾಕ್‌ ಆಗಿದೆ ಅನ್ನೋದನ್ನು ಹೇಳಲು ನನಗೆ ಬೇಸರವಾಗಿದೆ. ಮಳೆ ಇಲ್ಲದ ಕಾರಣ ರಾಗಿ ,ಮೆಕ್ಕೆಜೋಳ, ಶೇಂಗಾ ಇತರೆ ಎಲ್ಲ ಬೆಳೆಗಳು ನಾಶವಾಗಿವೆ. ಬೋರವೆಲ್‌ ಇರುವ ಜಮೀನಿಗೆ ಹೋದರೆ ವಿದ್ಯುತ್‌ ಕೊರತೆ ಕಾಡುತ್ತಿದೆ. ಅಲ್ಲೂ ಕೂಡ ರೈತರು ನೆಮ್ಮದಿಯಿಂದ ಇಲ್ಲ, ನಿನ್ನೆ ಸ್ವಲ್ಪ ಮಳೆ ಬಿದ್ದ ಪರಿಣಾಮ ರಿಲೀಫ್‌ ಆಗಬಹುದು. ಮಾಹಿತಿ ಪ್ರಕಾರ ಕೊರಟಗೆರೆಯಲ್ಲಿ ಪರಿಶಿಷ್ಠರ ಅಂತ್ಯ ಸಂಸ್ಕಾರಕ್ಕೆ ನೀಡಿದ್ದ ಚೆಕ್‌ ಬೌನ್ಸ್‌ ಆಗಿದೆ ಅಂದರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದೆ ದಿವಾಳಿಯಾಗಿದೆ ಎಂಬುದುನ್ನು ತೋರಿಸುತ್ತದೆ. ಇನ್ನು ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಬಡವನಹಳ್ಳಿಗೆ ಭೇಟಿ ನೀಡಿದಾಗ, ರಾಗಿ ಬೆಳೆಗಳು ಒಣಗಿ ನೆಲ ಕಚ್ಚಿವೆ. ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತಿದ್ದು, ಈ ಪೈಕಿ ರಾಜ್ಯ ಸರ್ಕಾರ ಕೇವಲ 3 ಕೇಜಿ ಅಕ್ಕಿ , 2 ಕೇಜಿ ರಾಗಿ ಕೊಡುತ್ತಿದ್ದು, ಅದರಲ್ಲಿ ರಾಗಿ ಕಳಪೆಯಾಗಿವೆ ಎಂದು ದೂರಿದರು.

ನಾವಲ್ಲ, ಬಿಜೆಪಿಗರೇ ಕಿತ್ತಾಡ್ತಿದ್ದಾರೆ: ಯಡಿಯೂರಪ್ಪಗೆ ಡಿಕೆಶಿ ತಿರುಗೇಟು

ಚನ್ನೇನಹಳ್ಳಿಯಲ್ಲಿ ರೈತರು ಒಣಿಗಿದ ಶೇಂಗಾ ಕಿತ್ತು ತೋರಿಸಿ ಗೋಳಾಡಿದರು. ಉದ್ಯೋಗಕ್ಕಾಗಿ ಜನರು ಗುಳೇ ಹೋಗುವ ಸ್ಥಿತಿ ತಲುಪಿದೆ. ಸರ್ಕಾರ 5 ಗ್ಯಾರಂಟಿ ಕೊಟ್ಟು ರಾಜ್ಯ ದಿವಾಳಿಯಾಗಿದೆ. ಇದರಲ್ಲೂ ಮಹಿಳೆಯರಿಗೆ ಮೋಸವಾಗಿದೆ. ರಾಜ್ಯದಲ್ಲಿ ಬರಗಾಲ ಘೋಷಿಸಿ ವಿಶೇಷ ಪ್ಯಾಕೇಜ್‌ ಕೊಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ಅಭಿವೃದ್ಧಿ ಕುಂಠಿತವಾಗಿದೆ. ಯಾವ ವಿಷಯಕ್ಕೆ ಹೋದರು ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರ ಬದಕಿನ ನಡುವೆ ಸರ್ಕಾರ ಚಲ್ಲಾಟವಾಡುತ್ತಿದೆ. ಬೆಂಗಳೂರಿಗೆ ಹೋಗಿ ಈ ಸರ್ಕಾರದ ವೈಪಲ್ಯ ಎತ್ತಿ ಹಿಡಿಯುವಲ್ಲಿ ಹೋರಾಟ ರೂಪಿಸುತ್ತೇವೆ. ಇಲ್ಲಿನ ಸ್ಥಿತಿ ಗತಿಗಳನ್ನು ಪ್ರಧಾನಿ ನರೇಂದ್ರ ಮೋದಿಗೆ ಮನವರಿಕೆ ಮಾಡಿ ಕೊಡುತ್ತೇವೆ ಎಂದರು.

Latest Videos
Follow Us:
Download App:
  • android
  • ios