ಶೀಘ್ರದಲ್ಲೇ ವಿಪಕ್ಷ ನಾಯಕನ ಹೆಸರು ಪ್ರಕಟ: ಯಡಿಯೂರಪ್ಪ
ಬರ ಅಧ್ಯಯನ ಪ್ರವಾಸ ಆರಂಭವಾಗಿದೆ. ನಾನು ವಿಐಎಸ್ಎಲ್ ಕಾರ್ಯಕ್ರಮ ಇದ್ದ ಕಾರಣ ಹೋಗಿಲ್ಲ. ಎರಡು ದಿನದ ನಂತರ ಪ್ರವಾಸ ತಂಡ ಸೇರಿಕೊಳ್ಳುತ್ತೇನೆ ಎಂದ ಅವರು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಅವರ ದೆಹಲಿ ಭೇಟಿಯಲ್ಲಿ ಅಂತಹ ವಿಶೇಷ ಏನಿಲ್ಲ. ಸಭೆಗೆ ಕರೆದಿದ್ದರು ಹೋಗಿದ್ದಾರೆ ಅಷ್ಟೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ
ಶಿವಮೊಗ್ಗ(ನ.04): ವಿಪಕ್ಷ ನಾಯಕನ ಆಯ್ಕೆಯಲ್ಲಿ ಸಾಕಷ್ಟು ವಿಳಂಬ ಆಗಿರುವುದು ನಿಜ, ಆದರೆ ಆದಷ್ಟು ಬೇಗ ವಿಪಕ್ಷ ನಾಯಕ ಆಯ್ಕೆ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಅದೇ ಪ್ರಶ್ನೆ ಕೇಳ್ತಿದ್ದಾರೆ. ಪಕ್ಷದ ವರಿಷ್ಠರು ಈ ಕುರಿತು ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲಿಯೇ ಈ ಕುರಿತು ಪ್ರಕಟಣೆ ಹೊರ ಬೀಳಲಿದೆ ಎಂದರು.
ಲೋಕಸಭಾ ಚುನಾವಣೆ 2024: ಕರ್ನಾಟಕದಲ್ಲಿ ಬಿಜೆಪಿ 28 ಸ್ಥಾನದಲ್ಲೂ ಗೆಲುವು, ಸದಾನಂದಗೌಡ
ಇಂದಿನಿಂದ ಬರ ಅಧ್ಯಯನ ಪ್ರವಾಸ ಆರಂಭವಾಗಿದೆ. ನಾನು ವಿಐಎಸ್ಎಲ್ ಕಾರ್ಯಕ್ರಮ ಇದ್ದ ಕಾರಣ ಹೋಗಿಲ್ಲ. ಎರಡು ದಿನದ ನಂತರ ಪ್ರವಾಸ ತಂಡ ಸೇರಿಕೊಳ್ಳುತ್ತೇನೆ ಎಂದ ಅವರು ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಅವರ ದೆಹಲಿ ಭೇಟಿಯಲ್ಲಿ ಅಂತಹ ವಿಶೇಷ ಏನಿಲ್ಲ. ಸಭೆಗೆ ಕರೆದಿದ್ದರು ಹೋಗಿದ್ದಾರೆ ಅಷ್ಟೆ ಎಂದು ಹೇಳಿದರು.
ನಾಳೆ ಭದ್ರಾವತಿ ವಿಐಎಸ್ ಎಲ್ ಶತಮಾನೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳು, ಮೈಸೂರು ಮಹಾರಾಜರು ಆಗಮಿಸುತ್ತಾರೆ. ನಾನು ಕೂಡ ಇದರಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.