Bengaluru Rain: ಅಬ್ಬರದ ಮಳೆ, ಎಚ್ಚರ ಎಂದ ಹವಾಮಾನ ಇಲಾಖೆ
ಹವಾಮಾನ ಇಲಾಖೆಯ ಎಚ್ಚರಿಕೆಯಂತೆ ವರುಣ ಸಿಲಿಕಾನ್ ಸಿಟಿಯಲ್ಲಿ ಆರ್ಭಟ ತೋರುತ್ತಿದ್ದಾನೆ. ಎಲ್ಲೆಡೆ ಮಳೆ ಸುರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಬೆಂಗಳೂರು (ಮೇ 30): ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಎಲ್ಲೆಡೆ ವರುಣನ ಆರ್ಭಟ ಹೆಚ್ಚಾಗಿದೆ. ತುಸು ಗುಡುಗು, ಮಿಂಚು ಗಾಳಿಯಿಂದ ಕೂಡದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಂತಾಗಿದೆ. ಎಲ್ಲೆಡೆ ಸಂಚಾರಕ್ಕೆ ಅಡೆತಡೆಯಾಗಿದ್ದು, ಹವಾಮಾನ ಇಲಾಖೆ ಎಚ್ಚರಿಕೆಯಿಂದ ಇರಲು ಜನರನ್ನು ಎಚ್ಚರಿಸಿದೆ.
ಮಿಂಚು ಮತ್ತು ಗುಡುಗು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಲ್ಲಿ ಮಳೆ ಶುರುವಾಗ್ತಿದ್ದಂತೆ ಜನರಿಗೆ ಎಚ್ಚರಿಕೆ ನೀಡಿದೆ ಹವಾಮಾನ ಇಲಾಖೆ. ಗಾಳಿಯ ಗಂಟೆಗೆ 30 ರಿಂದ 40 ಕಿಮೀ ಇರುವ ಸಾಧ್ಯತೆ ಇದೆ. ಮುಂದಿನ ಮೂರು ಗಂಟೆಗಳಲ್ಲಿ ಕೊಡಗು, ಮೈಸೂರು, ಉತ್ತರಕನ್ನಡ, ಉಡುಪಿ, ರಾಯಚೂರು, ಗುಲ್ಬರ್ಗ, ಶಿವಮೊಗ್ಗ, ಚಿತ್ರದುರ್ಗ, ಹಾಸನ, ಚಾಮರಾಜನಗರ, ರಾಮನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆ ಸಾಧ್ಯತೆ ಇದೆ.
ಮಳೆಯ ಎಫೆಕ್ಟ್, ಏನಾಗಬಹುದು:
*ಕೆಲವು ಕಡೆಗಳಲ್ಲಿ ತಾತ್ಕಾಲಿಕ ವಿದ್ಯುತ್ ವ್ಯತ್ಯಯ ಸಾಧ್ಯತೆ
* ಟ್ರಾಫಿಕ್ ಜಾಮ್ ಸಾಧ್ಯತೆ
*ದುರ್ಬಲ ಮರದ ಕೊಂಬೆಗಳು ನೆಲಕ್ಕುರುಳುವ ಸಾಧ್ಯತೆ
ಮಳೆ ಮುನ್ಸೂಚನೆ: ಗುಡುಗು, ಸಿಡಿಲಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಹವಾಮಾನ ಇಲಾಖೆ ಎಚ್ಚರಿಕೆ:
ಸಾರ್ವಜನಿಕರಿಗೆ ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ ನೀಡಿದ್ದು, ಮುಂಜಾಗೃತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಏನೇನು ಮಾಡಬೇಕು?
*ಮನೆಯೊಳಗೆ ಇರಿ ಕಿಟಕಿ ಬಾಗಿಲುಗಳನ್ನು ಮುಚ್ಚಿ ಸಾಧ್ಯವಾದರೆ ಪ್ರಯಾಣಗಳನ್ನು ತಪ್ಪಿಸಿ
*ಮರದ ಕೆಳಗೆ ಆಶ್ರಯ ಪಡೆಯಬೇಡಿ
*ಕಾಂಕ್ರೀಟ್ ಗೋಡೆಗಳಿಗೆ ಒರಗಬೇಡಿ
*ತಕ್ಷಣವೇ ವಿದ್ಯುತ್ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅನ್ ಪ್ಲಗ್ ಮಾಡಿ
*ತಕ್ಷಣ ಜಲಮೂಲಗಳಿಂದ ಹೊರ ಬನ್ನಿ
*ನೀವು ಬೈಕ್, ವಾಹನ ಚಲಾಯಿಸುತ್ತಿದ್ರೆ ಎಚ್ಚರವಹಿಸಿ
ಮಳೆಗೆ ಅಲ್ಲಲ್ಲಿ ಅನಾಹುತ:
ಬಾರಿ ಮಳೆಗೆ ಬಿದ್ದ ಬೃಹತ್ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಆಟೋ ಜಖಂ ಆಗಿದ್ದು, ಸ್ವಲ್ಪದರಲ್ಲೆ ಅನಾಹುತದಿಂದ ಬಚಾವ್ ಆದ ಆಟೋ ಚಾಲಕ. ಕಮಲನಗರ ವಾಟರ್ ಟ್ಯಾಂಕ್ ಬಳಿ ಈ ಘಟನೆ ನಡೆದಿದೆ.
Karnataka rains: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ: ಸಿಡಿಲಿಗೆ ಮೂವರು ಬಲಿ!
ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಬೆಂಗಳೂರಿನ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ನದಿಯಂತೆ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಜೊತೆ ಚೇಂಬರ್ ಓಪನ್ ಆಗಿ ರಸ್ತೆಗೆ ನೀರು ನುಗ್ಗುತ್ತಿದ್ದು, ಕೆಲವೇ ನಿಮಿಷಗಳ ಮಳೆಗೆ ಬೆಂಗಳೂರು ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ಕೆಲವು ನಿಮಿಷಗಳ ಕಾಲ ರಭಸವಾಗಿ ಮಳೆ ಸುರಿದಿದ್ದು, ಇದೀಗ ತುಸು ತಗ್ದಿದಂತೆ ಭಾಸವಾಗುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆಯಲ್ಲಿಯೂ ಹರಿಯುತ್ತಿದೆ ನೀರು.
ಭೀಕರ ಮಳೆಯಿಂದ ಶಿವಾನಂದ ಸರ್ಕಲ್ ಅಂಡರ್ ಪಾಸ್ (Under Pass) ಮುಚ್ಚಿದೆ. ಅಂಡರ್ ಪಾಸ್ ಕೆಳಗೆ ಕೆಟ್ಟುನಿಂತಿವೆ ಆಟೋ. ಬ್ಯಾರಿಕೇಡ್ ಹಾಕಿದ್ದು, ಸಂಚಾರ ವ್ಯವಸ್ಥೆ ಸುಗಮವಾಗಲು ಟ್ರಾಫಿಕ್ ಪೊಲೀಸರು ಶ್ರಮಿಸುತ್ತಿದ್ದಾರೆ. ಅರ್ಧ ಗಂಟೆ ಬಿರುಸಿನಿಂದ ಸುರಿದ ಮಳೆಗೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಶೇಷಾದ್ರಿಪುರ ಅಂಡರ್ ಪಾಸ್ ಬಂದ್ ಆಗಿದ್ದು, ಒಳಗೆ ವಾಹನ ಸಂಚರಿಸದಂತೆ ಬಂದ್ ಮಾಡಿದ್ದಾರೆ ಪೊಲೀಸರು. ಅಂಡರ್ ಪಾಸ್ ಪಕ್ಕದ ಕಿರಿದಾದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ರಸ್ತೆಯ ಎರಡೂ ಬದಿ ಸಾಲುಗಟ್ಟಿ ನಿಂತಿವೆ ವಾಹನಗಳು.