ಮಳೆ ಮುನ್ಸೂಚನೆ: ಗುಡುಗು, ಸಿಡಿಲಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಇನ್ನೈದು ದಿನ ರಾಜ್ಯದಲ್ಲಿ ಬಿರುಸಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಗುಡುಗು, ಮಿಂಚು, ಗಾಳಿ ಸಹಿತ ವರುಣ ಆರ್ಭಟ ತೋರುವ ಸಾಧ್ಯತೆ ಇದೆ. ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳುಬೇಕು?
ಬೆಂಗಳೂರು (ಮೇ 29): ಬಿಸಿಲಿನಿಂದ ಬಸವಳಿದ ಜನರಿಗೆ ಮಳೆ ಬರುವ ಸೂಚನೆಯೇ ಮನಸ್ಸಿಗೆ ಮುದ ನೀಡಿದ್ದು ಸುಳ್ಳಲ್ಲ. ಅದೂ ಅಲ್ಲದೇ ದಕ್ಷಿಣ ಒಳನಾಡಿನ ಹತ್ತು ಜಿಲ್ಲೆಗಳಿಗೆ ಹವಾಮಾನ ಇಳಾಕೆ ಯಲ್ಲೋ ಅಲರ್ಟ್ ನೀಡಿದ್ದು, ಗುಡುಗು, ಮಿಂಚು, ಗಾಳಿ ಸಹಿತ ಮಳೆ ಬರುವ ಸೂಚನೆ ಇದ್ದು ಜನರು ಸ್ವಲ್ಪ ಹುಷಾರಾಗಿದ್ದರೆ ಒಳ್ಳೆಯದು.
ಅದ್ಸರಿ ಮಳೆಗಾಲದ ಮೊದಲ ಮಳೆ ಆರ್ಭಟಿಸುವಾಗ ಯಾವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ? ಯಾವುದಕ್ಕೂ ನಮ್ಮ ಹುಷಾರಲ್ಲಿ ನಾವಿದ್ದರೆ ಗುಡುಗು, ಮಿಂಚಿನಿಂದ ಆಗುವ ಅನಾಹುತವನ್ನು ಆದಷ್ಟು ತಡೀಬಹುದು. ಯಾವುದನ್ನೂ taken for granted ಮಾಡಿಕೊಳ್ಳದೇ ಜಾಗೃತರಾಗಿರಿ. ಜನ, ಜಾನುವಾರುಗಳನ್ನು ಈ ಅನಾಹುತದಿಂದ ತಪ್ಪಿಸಲು ಏನೇನು ಮಾಡಬಹುದು ಎಂಬುದಕ್ಕೆ ಇಲ್ಲಿವೆ ಟಿಪ್ಸ್...
ನಾಳೆಯಿಂದ ಕರ್ನಾಟಕದಲ್ಲಿ ಭರ್ಜರಿ ಮಳೆ: 10 ಜಿಲ್ಲೆಗೆ ಯೆಲ್ಲೋ ಅಲರ್ಟ್
- ಹೊರಗಡೆ ಸಿಡಿಲು, ಗುಡುಗು ಸಹಿತ ಮಳೆ ಸೂಚನೆ ಬರುತ್ತೆ ಎಂದ ಕೂಡಲೇ ಮನೆಯಲ್ಲಿಯೇ ಇರೋದು ಒಳ್ಳೆಯದು.
- ಕೆರೆಯಲ್ಲಿ ಈಜೋದು, ಸ್ನಾನ ಮಾಡುವ ಧೈರ್ಯಕ್ಕೆ ಮುಂದಾಗಬೇಡಿ.
- ಅಕಸ್ಮಾತ್ ರಸ್ತೆಯಲ್ಲಿದ್ದರೆ ಮರದ ಕೆಳಗೆ ನಿಲ್ಲುವುದನ್ನು ಅವೈಯ್ಡ್ ಮಾಡಿ. ಯಾವುದಾದರೂ ಸುರಕ್ಷಿತ ಕಟ್ಟಡದಲ್ಲಿ ಆಶ್ರಯ ಪಡೆದರೆ ಒಲ್ಳೆಯದು. ಬಯಲಲ್ಲಿ ಇದ್ದರೆ ತಗ್ಗು ಪ್ರದೇಶದಲ್ಲಿ ಕುಳಿತುಕೊಳ್ಳಿ. ಮೆದುಳು, ಹೃದಯದ ಮೇಲೆ ಬೀಳುವ ಮಿಂಚು, ಗುಡುಗಿನ ಅನಾಹುತವನ್ನು ಇದು ತಡೆಯುತ್ತದೆ.
- ಎಲೆಕ್ಟ್ರಿಕ್ ಕಂಬ, ಟವರ್, ಮೊಬೈಲ್ ಟವರ್, ಟ್ರಾನ್ಸ್‌ಫಾರ್ಮರ್, ತಂತಿ ಬೇಲಿ, ಬಟ್ಟೆ ಒಣ ಹಾಕುವ ತಂತಿ, ರೈಲ್ವೆ ಹಳಿ, ಲೋಹದ ಗೇಟ್ ಮತ್ತು ಪೈಪ್‌ಗಳ ತಂಟೆಗೆ ಹೋಗದಿದ್ದರೆ ಒಳಿತು. ಮೆಟಲ್ ಪೈಪಿನಿಂದ (Metal Pipe) ಅನಾಹುತ ಹೆಚ್ಚಾಗಬಹುದು. ನಾಲ್ಕು ಚಕ್ರ ವಾಹನಗಳಲ್ಲಿ (Four Wheelers) ಪ್ರಯಾಣಿಸುತ್ತಿದ್ದರೆ ಗ್ಲಾಸ್ ಕ್ಲೋಸ್ ಮಾಡಿಕೊಳ್ಳಿ. ಕಾರಿನ ಲೋಹದ ಬಾಡಿಗೆ ದೇಹ ಟಚ್ ಆಗದಂತೆ ಹುಷಾರಾಗಿರಿ.
- ಮರದ ಕೆಳಗೆ ನಿಲ್ಲುವ ಧೈರ್ಯ ಮಾಡಬೇಡಿ. ಸಿಡಿಲು ಬಡಿದರೆ, ಜೋರಾಗಿ ಗಾಳಿ ಬೀಸಿದರೆ ಮರಗಳು ಬೀಳುವ, ಕೊಂಬೆ ಮುರಿಯುವ ಸಾಧ್ಯತೆ ಹೆಚ್ಚು ಎಂಬುದನ್ನು ನೆನಪಿನಲ್ಲಿಡಿ.
- ಸಿಡಿಲು (Tunder), ಮಿಂಚು (Lightning) ಕೆಲವರಿಗೆ ಎಲ್ಲಿಲ್ಲದ ಆಕರ್ಷಣೆ ನೀಡುತ್ತದೆ. ಅಪ್ಪಿ ತಪ್ಪಿಯೂ ಇದರ ಮಜಾ ಪಡೆಯಲು ಟೆರಾಸ್ ಮೇಲೆ ಹೋಗಿ ನಿಲ್ಲಬೇಡಿ. ಅಕಸ್ಮಾತ್ ಅಂಥ ಹುಚ್ಚು ಸಾಹಸಕ್ಕೆ ಕೈ ಹಾಕಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೀಬೇಡಿ.
- ವಿಶೇಷವಾಗಿ ಹೊಲ-ಗದ್ದೆಗಳಲ್ಲಿ ದುಡಿಯುವ ರೈತರಲು ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದು ಅನಿವಾರ್ಯ. ಲೋಹದ ಸಲಕರಣೆಗಳಿಂದ ದೂರವಿರಿ. ಸದಾ ಕತ್ತಿ ಹಿಡಿದುಕೊಂಡು ತಿರುಗಾಡುವ ರೈತಾಪಿ (Farmers) ಜನರು ಸ್ವಲ್ಪ ಅಂಥ ವಸ್ತುಗಳನ್ನು ದೂರ ಹಾಕಿದರೆ ಒಳ್ಳೆಯದು.
- ಸಾಧ್ಯವಾದರೆ ಮನೆಗೇ ಮಿಂಚು ಬಂಧಕ ಅಳವಡಿಸಿಕೊಂಡರೆ ಒಳಿತು. ಆಗ ಮಿಂಚಿನ ಸಂಪರ್ಕಕ್ಕೆ ಬಂದರೆ ನೇರವಾಗಿ ಭೂಮಿಗೆ ಪಾಸ್ ಆಗುತ್ತದೆ. ಅಪಾಯದಿಂದ ಪಾರಾಗಲು ಸುಲಭವಾಗುತ್ತದೆ.
- ಕಾಂಕ್ರೀಟ್ ಗೋಡೆಯಿಂದ ಸಾಧ್ಯವಾದಷ್ಟು ದೂರ ನಿಂತರೆ ಒಳ್ಳೆಯದು.
ರಾಜಸ್ಥಾನ ಮರುಭೂಮೀಲಿ ರಣಮಳೆ, ಹಲವು ಭಾಗಗಳಲ್ಲಿ ಪ್ರವಾಹ: 13 ಜನ ಬಲಿ
ಬಿಸಿಲು ಸಾಕಪ್ಪ, ಮಳೆ ಬರಲಿ ಅಂತ ನಿರೀಕ್ಷಿಸೋದು ಕಾಮನ್. ಆದರೆ, ಆ ಮಳೆಗಾಲಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳಿ. ಆರೋಗ್ಯದ ಮೇಲೂ ಈ ಮಾನ್ಸೂನ್ ದುಷ್ಪರಿಣಾಮಗಳು ಬೀಳುವ ಸಾಧ್ಯತೆ ಇದ್ದು, ಯಾವ ಯಾವ ರೀತಿಯಲ್ಲಿ ಜಾಗರೂಕರಾಗಿಲು ಸಾಧ್ಯವೋ ಜಾಗೃತೆ ಮಾಡಿಕೊಳ್ಳಿ. ಹವಾಮಾನ ಇಲಾಖೆ ಸೂಚನೆಯಿಂದ ಅಲರ್ಟ್ ಆಗಿದ್ದರೆ ಕೆಲವು ಅನಾಹುತಗಳನ್ನು ಸುಲಭವಾಗಿ ತಡೀಬಹುದು.