ಈ ರೈಲಿಗೆ ತತ್ಕಾಲ್ ದರ ನಿಗದಿಪಡಿಸಲಾಗಿದೆ. ಬೆಂಗಳೂರು, ಕೃಷ್ಣರಾಜಪುರಂ, ಬಂಗಾರ ಪೇಟೆ, ಕಾಟ್‌ಪಡಿ, ರೇಣಿಗುಂಟ, ವಿಜಯವಾಡ, ಎಲುರು, ರಾಜಮುಂಡ್ರಿ, ವಿಶಾಖಪಟ್ಟಣಂ, ವಿಜಿನಗರಂ, ಖುರ್ದ ರೋಡ್, ಭುವನೇಶ್ವರ್, ಕಟಕ್, ಖರಗಪುರ್ ಮೂಲಕ ಸಂತ್ರಗಚಿ ತಲುಪಲಿದೆ.

ಮೈಸೂರು[ಅ.01]: ಮೈಸೂರಿನಿಂದ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸಂತ್ರಗಚಿಗೆ ಏಕಮುಖ ಎಕ್ಸ್‌ಪ್ರೆಸ್ ರೈಲು ಅ.2ರಂದು ಹೊರಡಲಿದೆ. ಅ.2ರಂದು ರಾತ್ರಿ 11.15ಕ್ಕೆ ಮೈಸೂರಿನಿಂದ ಹೊರಡಲಿರುವ ರೈಲು ಅ.4ರಂದು ಮಧ್ಯಾಹ್ನ 3 ಗಂಟೆಗೆ ಸಂತ್ರಗಚಿ ತಲುಪಲಿದೆ.

ಈ ರೈಲಿಗೆ ತತ್ಕಾಲ್ ದರ ನಿಗದಿಪಡಿಸಲಾಗಿದೆ. ಬೆಂಗಳೂರು, ಕೃಷ್ಣರಾಜಪುರಂ, ಬಂಗಾರ ಪೇಟೆ, ಕಾಟ್‌ಪಡಿ, ರೇಣಿಗುಂಟ, ವಿಜಯವಾಡ, ಎಲುರು, ರಾಜಮುಂಡ್ರಿ, ವಿಶಾಖಪಟ್ಟಣಂ, ವಿಜಿನಗರಂ, ಖುರ್ದ ರೋಡ್, ಭುವನೇಶ್ವರ್, ಕಟಕ್, ಖರಗಪುರ್ ಮೂಲಕ ಸಂತ್ರಗಚಿ ತಲುಪಲಿದೆ. ಒಂದು ಟೂ ಟೈರ್ ಎಸಿ ಕೋಚ್, ಆರುತ್ರೀ ಟೈರ್ ಎಸಿ ಕೋಚ್, ಹನ್ನೊಂದು ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್‌ಗಳು, ಮೂರು ಜನರಲ್ ಸೆಕೆಂಡ್ ಕ್ಲಾಸ್ ಕೋಚಸ್, ಎರಡು ಲಗೇಜ್ ಬೋಗಿ, ಅಂಗವಿಕಲ ಸ್ನೇಹಿ ಕೋಚ್ ಇರುತ್ತದೆ.