Asianet Suvarna News Asianet Suvarna News

Tumakuru: ರೈಲ್ವೇ ಬಿಡ್ಜ್ ನಿರ್ಮಿಸುವಂತೆ ಒತ್ತಾಯಿಸಿ ಹಳಿ ಮೇಲೆ‌ ಕುಳಿತು ಗ್ರಾಮಸ್ಥರ ಪ್ರತಿಭಟನೆ

ರೈಲ್ವೇ ಬ್ರಿಡ್ಜ್ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ರೈಲ್ವೇ ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೆ.ರಾಂಪುರ ಗ್ರಾಮದಲ್ಲಿ ನಡೆದಿದೆ.  

Railway bridge construction  protest in Tumakuru gow
Author
First Published Jan 31, 2023, 5:25 PM IST

ತುಮಕೂರು (ಜ.31): ರೈಲ್ವೇ ಬ್ರಿಡ್ಜ್ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ರೈಲ್ವೇ ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕೆ.ರಾಂಪುರ ಗ್ರಾಮದಲ್ಲಿ ನಡೆದಿದೆ. ಇದು ತುಮಕೂರು ಮತ್ತು ರಾಯದುರ್ಗ ನಡುವಿನ ಯೋಜನೆಯಾಗಿದ್ದು, ಈಗಾಗಲೇ ಆಂಧ್ರದ ಕಲ್ಯಾಣ ದುರ್ಗದಿಂದ ತುಮಕೂರಿನ ಗಡಿ ಭಾಗದವರೆಗೂ ರೈಲು ಓಡಾಟ ಶುರುವಾಗಿದೆ. ಉಳಿದಂತೆ ತುಮಕೂರಿನವರೆಗೂ ರೈಲ್ವೇ ಹಳಿ ಹಾಕುವ ಕಾಮಗಾರಿ ನಡೆಯುತ್ತಿದೆ. ಎರಡು ವರ್ಷದ ಹಿಂದೆಯೇ ಕೆ.ರಾಂಪುರ ಬಳಿ ರೈಲ್ವೇ ಹಳಿಯನ್ನ ಹಾಕಲಾಗಿದೆ. ಗ್ರಾಮದ ಬಳಿ ಬ್ರಿಡ್ಜ್ ನಿರ್ಮಿಸದೆ ಹಳಿ ಹಾಕಿರೋದ್ರಿಂದ ರೈತರು ತಮ್ಮ ಹೊಲಗಳಿಗೆ ಹೋಗಲು ಪರದಾಡುವಂತಾಗಿದೆ. ಜಾನುವಾರುಗಳ ಓಡಾಟಕ್ಕೂ ಇದರಿಂದ ಸಮಸ್ಯೆಯಾಗುತ್ತಿದೆ. ಇನ್ನೂ ಕಾಮಗಾರಿ ಪ್ರಗತಿಯಲ್ಲಿರೋದ್ರಿಂದ ಸದ್ಯ ಬ್ರಿಡ್ಜ್ ನಿರ್ಮಾಣಕ್ಕೆ ಅವಕಾಶವಿದೆ. ಒಂದು ಬಾರಿ ರೈಲು ಓಡಾಟ ಶುರುವಾಗಿಬಿಟ್ರೆ ಬ್ರಿಡ್ಜ್ ನಿರ್ಮಾಣ ಅಸಾಧ್ಯವಾಗಲಿದೆ. ಹೀಗಾಗಿ ಈಗಲೇ ಬ್ರಿಡ್ಜ್ ನಿರ್ಮಿಸಿಕೊಡಿ ಅಂತಾ ಕೆ.ರಾಂಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.

ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ 20 ಕೋಟಿ ನೀಡಲು ಆಗ್ರಹ: ಚಿಕ್ಕಜಾಜೂರು-ಹುಬ್ಬಳ್ಳಿ ರೈಲ್ವೇ ಮಾರ್ಗದ ವಿದ್ಯುದೀಕರಣ, ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಮಾತರಂ ರೈಲು ಸಂಚಾರ, ದಾವಣಗೆರೆ ರೈಲ್ವೇ ನಿಲ್ದಾಣದ ಅಭಿವೃದ್ಧಿ ಗೆ 20 ಕೋಟಿ ಅನುದಾನ ನೀಡುವುದೂ ಸೇರಿ ವಿವಿಧ ಬೇಡಿಕೆಗಳ ಬಜೆಟ್‌ನಲ್ಲಿ ಈಡೇರಿಸಲು ನೈರುತ್ಯ ವಲಯದ ರೈಲ್ವೆ ಪ್ರಯಾಣಿಕರ ಸಂಘವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಒತ್ತಾಯಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಣಕಾಸು ಹಾಗೂ ರೈಲ್ವೇ ಬಜೆಟ್‌ಗಳ ಫೆ.1ರಂದು ಮಂಡಿಸಲಿದ್ದು, ಜಿಲ್ಲೆಗೂ ಅನೇಕ ಬಜೆಟ್‌ನಲ್ಲಿ ಹಲವಾರು ನಿರೀಕ್ಷೆಗಳಿದ್ದು, ಅವುಗಳಿಗೆ ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು ಎಂದು ಸಂಘದ ಕಾರ್ಯದರ್ಶಿ ರೋಹಿತ್‌ ಎಸ್‌.ಜೈನ್‌ ಪತ್ರಿಕಾ ಆಗ್ರಹಿಸಿದ್ದಾರೆ. ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಮ್ಯೂಸಿಯಂ ಸ್ಥಾಪನೆ, ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿ ಶೀಘ್ರ ಆರಂಭಿಸಬೇಕು. ಹುಬ್ಬಳ್ಳಿ-ಮೈಸೂರು ಮಧ್ಯೆ ದಾವಣಗೆರೆ-ಹಾಸನ ಮಾರ್ಗವಾಗಿ ಇಂಟರ್‌ ಸಿಟಿ ರೈಲಿನಲ್ಲಿ ಸಂಚರಿಸಲು ಅನುವು ಮಾಡಿಕೊಡಬೇಕು. ಕರ್ನಾಟಕ ಸಂಪರ್ಕ ಕ್ರಾಂತಿ ರೈಲನ್ನು ಪ್ರತಿನಿತ್ಯ ವಯಾ ದಾವಣಗೆರೆ, ಹುಬ್ಬಳ್ಳಿ, ಪುಣೆ ಮಾರ್ಗವಾಗಿ ಸಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ, ದಾವಣಗೆರೆ-ಹರಿಹರ ನಗರದಲ್ಲಿ ಡೆಮು(ಡೀಸೆಲ್‌ ಎಲೆಕ್ಟ್ರಿಕ್‌ ಮಲ್ಪಿಪಲ್‌ ಯೂನಿಟ್‌) ರೈಲಿನ ಜನದಟ್ಟಣೆ ಕಡಿಮೆ ಮಾಡಲು, ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ರೈಲ್ವೆ ಹಳಿಯಲ್ಲೇ ತರಕಾರಿ ಮಾರ್ಕೆಟ್ : ವೈರಲ್ ವಿಡಿಯೋ

ಹರಿಹರ ಅಥವಾ ಎವಿಸಿ ರೈಲು ನಿಲ್ದಾಣದಲ್ಲಿ ಶಿವಮೊಗ್ಗ ಸಮೀಪದ ಕೊತ್ತನೂರಿನಲ್ಲಿ ನಿರ್ಮಾಣವಾಗುತ್ತಿರುವ ಟರ್ಮಿನಲ್‌ ಸ್ಟೇಷನ್‌ ಹಾಗೂ ಕೋಚಿಂಗ್‌ ಡಿಪೋ ಮಾದರಿಯಲ್ಲಿ ಹರಿಹರ ಅಥವಾ ಎವಿಸಿಯಲ್ಲಿ ಟರ್ಮಿನಲ್‌ ಸ್ಟೇಷನ್‌, ಕೋಚಿಂಗ್‌ ಡಿಪೋ, ಪಿತ್‌ ಲೈನ್‌ ನಿರ್ಮಿಸಬೇಕು. ಇದರಿಂದ ದಾವಣಗೆರೆ ಭಾಗದ ಅನೇಕ ಕಡೆ ರೈಲು ಸಂಚರಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಎಕ್ಸಪ್ರೆಸ್‌ ಗಾಡಿಗಳ ನಿಲ್ದಾಣದ ನಿಲುಗಡೆ ಸಮಯ 5 ನಿಮಿಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ವನ್ಯಜೀವಿ ಮಂಡಳಿ ಅಸ್ತು

ಪುಣೆ-ಬೆಂಗಳೂರು ಮಧ್ಯೆ ರಾತ್ರಿ ವೇಳೆ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು, ಮತ್ತೊಂದು ಹೊಸ ರೈಲನ್ನು ನಿತ್ಯವೂ ಸಂಚರಿಸಲು ಕ್ರಮ ಕೈಗೊಳ್ಳಬೇಕು. ಬಳ್ಳಾರಿ-ಹರಿಹರ ಡೆಮು ರೈಲವನ್ನು ಚಿಕ್ಕಮಗಳೂರುವರೆಗೂ ವಿಸ್ತರಿಸಬೇಕು. ವೈಷ್ಣೋದೇವಿ-ಬೆಂಗಳೂರು(ಕತ್ರ) ಎಕ್ಸಪ್ರೆಸ್‌ ರೈಲನ್ನುವಾರಕ್ಕೆ 2 ಸಲ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮಾರ್ಗವಾಗಿ ಓಡಿಸಬೇಕು. ಬೆಂಗಳೂರು-ಅಜ್ಮೇರ್‌, ಬೆಂಗಳೂರು-ಜೋಧಪುರ ಎಕ್ಸಪ್ರೆಸ್‌ ರೈಲನ್ನು ವಾರಕ್ಕೆ 2 ಸಲ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ ಮಾರ್ಗವಾಗಿ ಓಡಿಸಬೇಕು ಎಂದು ಮನವಿ ಮಾಡಿದ್ದಾರೆ.

Follow Us:
Download App:
  • android
  • ios