Asianet Suvarna News Asianet Suvarna News

ರಾಯಚೂರು: ರಾಮಮಂದಿರ ನಿರ್ಮಾಣದಲ್ಲಿ ಕೈಜೋಡಿಸಿದ ಜಾನೇಕಲ್ ಗ್ರಾಮದ ಶಿಲ್ಪಿ ವಿರೇಶ್ ಬಡಿಗೇರ

ಇಡೀ ವಿಶ್ವವೇ ಅಯೋಧ್ಯೆಯತ್ತ ತಿರುಗಿನೋಡುವಂತೆ ಮಾಡಿರುವ ಶ್ರೀರಾಮನ ಭವ್ಯ ಮಂದಿರದ ನಿರ್ಮಾಣ ಕಾರ್ಯದಲ್ಲಿ ಕಲೆ ಕುಸುರಿಯಲ್ಲಿ ತೊಡಗಿ ಸುಂದರ ಚಿತ್ತಾಕರ್ಷಕ ಕಂಬಗಳ ನಿರ್ಮಾಣ ಮಾಡಿರುವ ವಿರೇಶ್ ಬಡೀಗೇರ. ರಾಜ್ಯದಿಂದ ಆಯ್ಕೆಯಾಗಿ ಅಯೋದ್ಯೆಗೆ ಹೊರಟ 8 ಶಿಲ್ಪಕಲಾವಿದರಲ್ಲಿ ಒಬ್ಬರಾಗಿದ್ದಾರೆ. ರಾಯಚೂರು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

Raichur sculptor Viresh Badigera in the construction of Ayodhya Ram Mandir rav
Author
First Published Jan 18, 2024, 1:36 PM IST

ರಾಯಚೂರು (ಜ.18): ಅಯೋಧ್ಯಾ ರಾಮಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಕೋಟ್ಯಂತರ ಹಿಂದೂಗಳ ಮನೆ ಮನದಲ್ಲಿ ಜೈ ಶ್ರೀರಾಮ ಘೋಷಣೆ ಮೊಳಗುತ್ತಿದೆ. ರಾಮಭಕ್ತರಲ್ಲಿ ಜೈ ಶ್ರೀರಾಮ ಒಂದೇ ಜಪ ಕೇಳಿಬರುತ್ತಿದೆ. ಈ 500 ವರ್ಷಗಳ ಕನಸು ನನಸಾಗುವಲ್ಲಿ ಲಕ್ಷಾಂತರ ಕರಸೇವಕರ ಹೋರಾಟ, ಪ್ರಾಣತ್ಯಾಗವಿದೆ. ಹಲವು ವರ್ಷಗಳಿಂದ ಹಗಲಿರುಳು ಕಲ್ಲು ಕಡೆದು ಭವ್ಯ ಮಂದಿರ ಕಟ್ಟುತ್ತಿರುವ ಶಿಲ್ಪ ಕಲಾವಿದರ ಶ್ರಮದ ಬೆವರಿದೆ. ಅದರಲ್ಲೂ ಜಕಣಾಚಾರಿಗಳ ನಾಡಾದ ನಮ್ಮ ನಾಡಿನ ಶಿಲ್ಪಿಗಳು ರಾಮಮಂದಿರ ನಿರ್ಮಾಣದಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲು ಮೈಸೂರಿನ ಶಿಲ್ಪಿ ಅರುಣ ಯೋಗಿರಾಜ ಕೆತ್ತಿರುವ ರಾಮಲಲ್ಲಾ ವಿಗ್ರಹ ಆಯ್ಕೆಯಾಗಿರುವುದು ಹೆಮ್ಮೆಪಡುವ ಸಂಗತಿಯಾಗಿದೆ. ಅವರೊಂದಿಗೆ ನಾಡಿನ ಹಲವು ಜಿಲ್ಲೆಗಳ ಶಿಲ್ಪಕಲಾವಿದರು ಅಯೋಧ್ಯೆಗೆ ತೆರಳಿ ರಾಮಮಂದಿರದ ಕಲ್ಲಿನ ಕಂಬದಲ್ಲಿ ಕಲೆ ಅರಳಿಸುವ ಕೆಲಸದಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದ್ಧಾರೆ.

ರಾಮಮಂದಿರ ನಿರ್ಮಾಣದಲ್ಲಿ ಕೈಜೋಡಿಸಿದ ಜಾನೇಕಲ್ ಜಕಣಾಚಾರಿ!

ಇಡೀ ವಿಶ್ವವೇ ಅಯೋಧ್ಯೆಯತ್ತ ತಿರುಗಿನೋಡುವಂತೆ ಮಾಡಿರುವ ಶ್ರೀರಾಮನ ಭವ್ಯ ಮಂದಿರದ ನಿರ್ಮಾಣ ಕಾರ್ಯದಲ್ಲಿ ಕಲೆ ಕುಸುರಿಯಲ್ಲಿ ತೊಡಗಿ ಸುಂದರ ಚಿತ್ತಾಕರ್ಷಕ ಕಂಬಗಳ ನಿರ್ಮಾಣ ಮಾಡಿರುವ ವಿರೇಶ್ ಬಡೀಗೇರ. ರಾಜ್ಯದಿಂದ ಆಯ್ಕೆಯಾಗಿ ಅಯೋದ್ಯೆಗೆ ಹೊರಟ 8 ಶಿಲ್ಪಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಧಾರವಾಡದ ಹಿರಿಯ ಶಿಲ್ಪ ಕಲಾವಿದರಾದ ರವೀಂದ್ರ ಆಚಾರ್ ಅವರ ಶಿಫಾರಾಸಿನ ಮೇರೆಗೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತಿಂಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ವೀರೇಶ್ ಬಡಿಗೇರ, ರಾಯಚೂರು ಜಿಲ್ಲೆಯಿಂದ ಅಯೋಧ್ಯೆಗೆ ಹೋಗಿರುವ ಏಕೈಕ ಶಿಲ್ಪಕಲಾವಿದರಾಗಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ. 

ಕೊಪ್ಪಳದ ಶಿಲ್ಪಿ ಗುರುತಿಸಿದ್ದ ಬಂಡೆ ಈಗ ಅಯೋಧ್ಯೆಯ ಶ್ರೀರಾಮ ಮೂರ್ತಿ!

ರಾಮನಗರದ ಜಿಲ್ಲೆಯ ಚನ್ನಪಟ್ಟಣದ ಕೆಂಗಲ್ ಗ್ರಾಮದ ಶ್ರೀ ಗಂಗರಸ ಶಿಲ್ಪಕಲಾ ಶಿಕ್ಷಣ ಕೇಂದ್ರದಲ್ಲಿ ಸಾಂಪ್ರಾದಾಯಿಕ ಶಿಲ್ಪಕಲಾ(ಬಿವಿಎ) ಪದವಿ ಪಡೆದಿರುವ ವಿರೇಶ್ ಬಡಿಗೇರಾ ಇದುವರೆಗೂ ಮೂವತ್ತಕ್ಕೂ ಅಧಿಕ ಮೂರ್ತಿಗಳನ್ನ ಕೆತ್ತಿದ್ದಾರೆ. ಹಲವು ದೇವಾಲಯಗಳ ನಿರ್ಮಾಣ ಕಾರ್ಯ ಮಾಡಿದ್ದಾರೆ. ಶಿಲ್ಪಕಲೆಯಲ್ಲಿ ಸುಮಾರು ಹತ್ತು ವರ್ಷಗಳ ಅನುಭವ ಇರುವ ವೀರೇಶ್ ಬಡಿಗೇರ ರಾಜ್ಯದ ಮೂಲೆಮೂಲೆಗಳಿಗೆ ತೆರಳಿ ದೇವಾಲಯ ಗೋಪುರ ನಿರ್ಮಾಣ, ಬಸವಣ್ಣ, ಈಶ್ವರ, ಆಂಜನೇಯ ಮೂರ್ತಿಗಳ ಕೆತ್ತನೆಯಲ್ಲಿ ಪರಿಣತಿ ಸಾಧಿಸಿರುವ ಕಲಾವಿದರಾಗಿದ್ದಾರೆ.

ಶಿಲ್ಪಕ್ಕೆ ಸಿಗುವ ಮಹತ್ವ ಶಿಲ್ಪಿಗಳಿಗೆ ಸಿಗುತ್ತಿಲ್ಲ!

ನಮ್ಮ ರಾಜ್ಯ ಹೇಳಿಕೇಳಿ ಜಕಣಾಚಾರಿಗಳ ನಾಡು ಇಲ್ಲಿ ಪ್ರತಿ ಊರಿನಲ್ಲೂ ಶಿಲ್ಪಕಲಾವಿದರಿದ್ದಾರೆ. ಕಲ್ಲನ್ನು ಕಡೆದು ಶಿಲ್ಪವನ್ನಾಗಿಸಿ ದೇವರನ್ನಾಗಿಸುವ ಶಿಲ್ಪಿಗಳು ದೇವರ ಸೃಷ್ಟಿಕರ್ತರೆನಿಸಿದ್ದಾರೆ. ಕಲ್ಲನ್ನು ಕಡೆದು ಮೂರ್ತಿಯಾಗಿಸುವುದು ಸುಲಭದ ಕೆಲಸವಲ್ಲ ಅದೊಂದು ತಪ್ಪಸ್ಸಿನಂತೆ ನಡೆಯುವ ಕಾರ್ಯ. ಸುಂದರ ಮೂರ್ತಿಯನ್ನು ನಿರ್ಮಿಸಿ ಅದಕ್ಕೆ ಪೂಜೆ ಪುನಸ್ಕಾರ, ದೇವರ ಸ್ಥಾನ ನೀಡುವ ಕಲಾವಿದರ ವೈಯಕ್ತಿಕ ಬದುಕು ಮಾತ್ರ ಶೋಚನೀಯವಾಗಿದೆ. ಅಂತಹ ಬದುಕು ನಡೆಸಿದವರು ವೀರೇಶ್ ಬಡಿಗೇರ. ಕೊರೊನಾ ಸಮಯದಲ್ಲಿ ಕೆಲಸವಿಲ್ಲದೆ ಜೀವನ ಸಂಕಷ್ಟಕ್ಕೀಡಾಯಿತು. ಅದೇ ಸಮಯದಲ್ಲಿ ಅನಾರೋಗ್ಯಕ್ಕೀಡಾದ ತಂದೆಗೆ  ಸೂಕ್ತ ಚಿಕಿತ್ಸೆ ದೊರೆಯದೆ ಕಳೆದುಕೊಳ್ಳಬೇಕಾಯಿತು. ಶಿಲ್ಪಕಲಾವಿದರಿಗೆ ಬೇರೆ ಉದ್ಯೋಗಗಳಂತೆ ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ. ನಾಡಿನ ಬಹುತೇಕ ಶಿಲ್ಪಕಲಾವಿದರು ಈಗಲೂ ಹೊಟ್ಟೆಗೆ ಬಟ್ಟೆಗೆ ಎಂಬಂತೆ ಬಡತನದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಸ್ವಂತವಾಗಿ ಶಿಲ್ಪಕೇಂದ್ರ ತೆರೆಯಲು, ಶಿಲ್ಪಕ್ಕೆ ಬೇಕಾದ ಕಲ್ಲು ಖರೀದಿಸಲು, ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಶಿಲ್ಪಕಲಾವಿದರ ನೆರವಿಗೆ ಬರಬೇಕಿದೆ.

 

ಅಯೋಧ್ಯೆ ನಿರ್ಮಾಣ ಕಾರ್ಯದಲ್ಲಿ ಕನ್ನಡಿಗರ ಹವಾ: ಕೋಟೆನಾಡಿನ ಶಿಲ್ಪಿ ಕೈಯಿಂದ ಮೂಡಿತು ಗಣೇಶ!


ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾಗಿದ್ದು, ನನ್ನ ಪೂರ್ವಜನ್ಮದ ಪುಣ್ಯ, ತಂದೆತಾಯಿಗಳ ಅಶೀರ್ವಾದ. ಕುಲಕಸುಬಿನಿಂದ ಶಿಲ್ಪಕಲೆಯಲ್ಲಿ ವೃತ್ತಿಪರ ವ್ಯಾಸಂಗಕ್ಕೆ ಆರ್ಥಿಕವಾಗಿ ನೆರವಾದ ಜಾನೇಕಲ್ ಗ್ರಾಮದ ಸುಮಂಗಲಮ್ಮ, ಶಂಕ್ರಪ್ಪಗೌಡ ಫಾಟೀಲ್ ಪ್ರೋತ್ಸಾಹದಿಂದ ಸಾಧನೆ ಮಾಡಲು ಸಾಧ್ಯವಾಗಿದೆ.

ಶಿಲ್ಪಕಲಾವಿದ ವಿರೇಶ್ ಬಡಿಗೇರಾ
 

Follow Us:
Download App:
  • android
  • ios