ರಾಯಚೂರು ಜಿಲ್ಲೆಯ ಮಾನವಿಯಲ್ಲಿ ಹಳೆಯ ಮನೆಯೊಂದನ್ನು ಕೆಡವುವಾಗ ನೂರಕ್ಕೂ ಹೆಚ್ಚು ಚಿನ್ನದ ನಾಣ್ಯಗಳು ಸಿಕ್ಕಿವೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಗದಗದ ಲಕ್ಕುಂಡಿಯಲ್ಲೂ ಇದೇ ರೀತಿ ಚಿನ್ನದ ನಿಧಿ ಪತ್ತೆಯಾಗಿತ್ತು.

ರಾಯಚೂರು: ಮುತ್ತಜ್ಜಿ ಕಾಲದ ಮನೆಯೊಂದನ್ನು ಕೆಡವಿದಾಗ ಸುಮಾರು ನೂರಕ್ಕೂ ಅಧಿಕ ಚಿನ್ನದ ನಾಣ್ಯಗಳು ಸಿಕ್ಕಿದೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಾರುತಿ ನಾಯಕ್ (jai_maruti_305) ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಚಿನ್ನದ ನಾಣ್ಯಗಳು ಸಿಕ್ಕಿರೋ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಚಿನ್ನದ ನಾಣ್ಯಗಳ ಜೊತೆಯಲ್ಲಿ ಬೆಳ್ಳಿಯ ಚೈನ್ ಸಹ ಲಭ್ಯವಾಗಿದೆ. ಹಾಗಾದ್ರೆ ಈ ನಿಧಿ ಸಿಕ್ಕಿರೋದು ಎಲ್ಲಿ ಎಂಬುದನ್ನು ನೋಡೋಣ ಬನ್ನಿ.

ವೈರಲ್ ವಿಡಿಯೋ ಪ್ರಕಾರ, ಚಿನ್ನದ ನಿಧಿಯ ಸ್ಥಳ ರಾಯಚೂರು ಜಿಲ್ಲೆಯ ಮಾನವಿ ಎಂದು ಗೊತ್ತಾಗುತ್ತದೆ. ನಮ್ಮ ಮನೆಯಲ್ಲಿ ಚಿನ್ನದ ನಾಣ್ಯಗಳು (Gold coins in my Home) ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋವನ್ನು jai_maruti_305 ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದು ನಮ್ಮ ಮನೆ ಬೀಳಿಸುವಾಗ ಸಿಕ್ಕ ನಾಣ್ಯಗಳು. ಇದು ನಮ್ಮ ಅಜ್ಜಿಯ ಆಸ್ತಿ. ಇನ್ನು ತೋಡಿದ್ರೆ ಮತ್ತಷ್ಟು ಸಿಗಬಹುದೇನ? ನಮಗೆ ಇಷ್ಟು ಸಾಕು ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋಗೆ, 4.50 ಲಕ್ಷಕ್ಕೂ ಅಧಿಕ ವ್ಯೂವ್, 10 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ.

ವೈರಲ್ ವಿಡಿಯೋ ಬಗ್ಗೆ ಅನುಮಾನ?

ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ರಸ್ತೆಯಲ್ಲಿ ಒಂದು ರೂಪಾಯಿ ಸಿಕ್ಕರೂ, ಯಾರಿಗೂ ಹೇಳದೇ ಭದ್ರವಾಗಿ ಜೇಬಿನಲ್ಲಿ ಹಾಕಿಕೊಳ್ಳುತ್ತಾರೆ. ಇದು ಚಿನ್ನದ ನಾಣ್ಯಗಳಾ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಲೈಕ್ಸ್ ಮತ್ತು ವ್ಯೂವ್‌ಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಹೇಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ವಿಡಿಯೋಗೆ ತರೇಹವಾರಿ ಕಮೆಂಟ್‌ಗಳು

ಒಂದು ಡಜನ್ ಬಾಳೆಹಣ್ಣು ಒಂದು ಹೂವಿನ ಹಾರ ಒಂದು ಶಾಲು ತಗೊಂಡು ಬರುತ್ತಿದ್ದಾರೆ. ನಿಂಗೆ ಸನ್ಮಾನ ಮಾಡೋಕೆ ವೇಟ್ ಮಾಡು. ವಿಡಿಯೋ ವೈರಲ್ ಆದರೆ ಮಾತ್ರ ಈ ಎಲ್ಲಾ ಚಿನ್ನದ ನಾಣ್ಯಗಳನ್ನು ಸರ್ಕಾರಕ್ಕೆ ನೀಡಬೇಕು. ನೀನು ಎಷ್ಟು ಬುದ್ಧಿವಂತ ಅಂತ ಈ ವಿಡಿಯೋ ನೋಡಿ ಗೊತ್ತಾಯ್ತು. ಮೊದಲು ವಿಡಿಯೋ ಡಿಲೀಟ್ ಮಾಡೋ ಇಲ್ಲ ಅಂದ್ರೆ ಸರ್ಕಾರದವರು ಬಂದು ಒಂದು ಚಿಪ್ಪು ಬಾಳೆಹಣ್ಣು & ಶಾಲು ಕೊಟ್ಟು ಇದನೆಲ್ಲ ತಗೊಂಡು ಹೋಗ್ತಾರೆ ಎಂದಿದ್ದಾರೆ.

ಮನೆಯ ಗೋಡೆಗಳಲ್ಲಿ ಸಿಕ್ಕರೆ ಸರ್ಕಾರಕ್ಕೆ ಸಂಬಂಧವಿಲ್ಲ ಇದು ನಮ್ಮ ಪೂರ್ವಜರ ಅಸ್ತಿ . ಭೂಮಿಯನ್ನು ಅಗೆಯುವಾಗ ಸಿಕ್ಕರೆ ಅದು ಸರ್ಕಾರದ ನಿಧಿ ಎಂದು ಕೆಲವರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯ ಲಕ್ಕುಂಡಿಯ ಚಿನ್ನದ ನಿಧಿ ಘಟನೆ

ಈ ಹಿಂದೆ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಹಳೆ ಮನೆಯೊಂದನ್ನು ಕೆಡವಿದಾಗ ಚಿನ್ನದ ನಿಧಿ ಸಿಕ್ಕಿತ್ತು. ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮವಾಗಿದ್ದರಿಂದ ಇಲ್ಲಿಯ ಹಲವು ಭಾಗಗಳಲ್ಲಿ ಶೋಧ ಕಾರ್ಯ ನಡೆದಿತ್ತು. ಚಿನ್ನದ ನಿಧಿ, ಶಿವಲಿಂಗ ಸೇರಿದಂತೆ ಹಲವು ಪುರಾತನ ವಿಗ್ರಹಗಳಿಂದ ದೇಶದ ಗಮನವನ್ನು ಲಕ್ಕುಂಡಿ ಸೆಳೆದಿತ್ತು.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

View post on Instagram