ರಾಯಚೂರು(ಜು.26): ಪ್ರೀತಿಗಾಗಿ ರಾಯಚೂರಿನ ಪಾಗಲ್ ಪ್ರೇಮಿಯೊಬ್ಬನ ಹುಚ್ಚು ವರ್ತನೆಗಳಿಂದ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಟವರ್ ಹತ್ತಿ ಕುಳಿತು ನನ್ನ ಪತ್ನಿಯನ್ನು ಕೊಡಿಸಿ ಎಂದು ಕಿರಿಕ್ ಮಾಡಿದ್ದ ರಾಯಚೂರಿನ ಶಾಂತಕುಮಾರ ಇದೀಗ ಆತ್ಮಹತ್ಯೆ ಮಾಡ್ಕೊಳ್ಳೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

ಹೆಂಡ್ತಿನ ಕೊಡ್ಸಿ ಅಂತ ಟವರ್ ಹತ್ತಿದ ಪಾಗಲ್ ಪ್ರೇಮಿ

ಪ್ರೀತಿಸಿದ ಹುಡುಗಿಗಾಗಿ ನಗರದ ಶಾಂತಕುಮಾರ್ ಎಂಬ ಯುವಕ ಚಾಕು ಇರಿದುಕೊಂಡಿದ್ದಾನೆ. ಇದೇ ತಿಂಗಳ 9 ರಂದು ಶಾಂತಕುಮಾರ ಪ್ರೇಯಸಿ ಕವಿತಾಗಾಗಿ ಪಿ & ಟಿ ಕ್ವಾಟ್ರಸ್‌ನಲ್ಲಿ ಮೊಬೈಲ್ ಟವರ್ ಹತ್ತಿ ಕುಳಿತಿದ್ದ. ಆ ಸಂದರ್ಭದಲ್ಲಿ ಶಾಂತಕುಮಾರನ ಮನವೊಲಿಸಿ ಕೆಳಗಿಳಿಸಲು ಪೊಲೀಸರು ಇನ್ನಿಲ್ಲದ ಸಾಹಸ ಪಟ್ಟಿದ್ದರು. ಕೊನೆಗೂ ಶಾಂತಕುಮಾರನನ್ನು ಕೆಳಗಿಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕವಿತಾಳನ್ನು ಸಬ್ ರಿಜಿಸ್ಟರ್‌ನಲ್ಲಿ ಮದುವೆ ಆಗಿದ್ದಾಗಿ ಹೇಳಿದ್ದ ಶಾಂತಕುಮಾರ್, ಕವಿತಾ ತಂದೆ- ತಾಯಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ನನ್ನಿಂದ ಪ್ರೇಯಸಿಯನ್ನು ದೂರ ಮಾಡಿದ್ದಾರೆಂದು ಆರೋಪಿಸಿದ್ದ.

ಚಾಕು ಇರಿದುಕೊಂಡು ಆತ್ಮಹತ್ಯೆ ಯತ್ನ:

ಇದೀಗ ಮತ್ತೊಮ್ಮೆ ವೈಲೆಂಟ್ ಆಗಿರುವ ಶಾಂತ ಕುಮಾರ ತಾನೇ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ನಿರ್ಜನ ಪ್ರದೇಶದಲ್ಲಿ ತಾನೇ ವಿಡಿಯೋ ಮಾಡಿಕೊಂಡ ಶಾಂತಕುಮಾರ ಚಾಕು ಇರಿದುಕೊಂಡ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಶಾಂತಕುಮಾರ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.