ರಾಯಚೂರು: ನನ್ ಹೆಂಡ್ತೀನಾ ಕೊಡ್ಸಿ ಅಂತ ಪಾಗಲ್ ಪ್ರೇಮಿಯೊಬ್ಬ ಟವರ್ ಹತ್ತಿ ಕುಳಿತಿದ್ದಾನೆ. ಮೊಬೈಲ್‌ ಟವರ್ ಹತ್ತಿಕುಳಿತುಕೊಂಡಿರೋ ಈತ ಕೆಳಗಿಳಿದು ಬರ್ಬೇಕಂದ್ರೆ ಪತ್ನಿ ಸಿಗ್ಬೇಕಂತೆ. ಪತ್ನಿ ಬೇಕು ಅಂತ ಹಟಮಾಡಿ ಯುವಕ ಟವರ್‌ ಹತ್ತಿಕುಳಿತಿರೋ ಈ ಘಟನೆ ನಡೆದಿರೋದು ರಾಯಚೂರಿನಲ್ಲಿ.ಈ  ಪಾಗಲ್‌ ಪ್ರೇಮಿಯ ಹೆಸರು ಶಾಂತಕುಮಾರ.

ಅಂದ ಹಾಗೆ ಶಾಂತಕುಮಾರ ಸಡನ್ ವೈಲೆಂಟ್ ಆಗಿದ್ಯಾಕೆ ಅನ್ನೋ ಪ್ರಶ್ನೆ ಮೂಡಬಹುದು. ಅದಕ್ಕೆ ಕಾರಣ ಪತ್ನಿ ಮೇಲಿನ ಪ್ರೀತಿ. ರಾಯಚೂರಿನ ನಿಜಲಿಂಗಪ್ಪ ಕಾಲೋನಿಯ ಕೆಇಬಿ ಶಾಲೆಯ ಹತ್ತಿರದ ಯುವಕ ಶಾಂತಕುಮಾರ ಆಸ್ತಿಹಾಳ ಗ್ರಾಮದ ಯುವತಿ ಕವಿತಾ ಅವ್ರನ್ನು ಪ್ರೀತಿಸಿ ಮದುವೆಯಾಗಿದ್ರು. ಈ ಮದುವೆಗೆ ಹುಡುಗಿ ಮನೆಯವರ ಒಪ್ಪಿಗೆ ಇರಲಿಲ್ಲ. ಮಗಳಿಗೆ ಕರೆ ಮಾಡಿದ ಕವಿತಾ ಪೋಷಕರು ಆಕೆ ಮರಳಿ ಮನೆಗೆ ಬರದಿದ್ದರೆ ಸಾಯುವುದಾಗಿ ಹೆದರಿಸಿ ಕರೆಸಿಕೊಂಡಿದ್ದಾರೆ. ಪೋಷಕರ ಮೇಲಿನ ಪ್ರೀತಿಯಿಂದ ಕವಿತಾ ಹೋಗಿದ್ದಾಳೆ. ಆದರೆ ಮರಳಿ ಗಂಡನ ಮನೆಗೆ ಬಂದಿಲ್ಲ. ಇದೇ ಸಿಟ್ಟಿನಲ್ಲಿ ಪತಿ ಶಾಂತಕುಮಾರ ಟವರ್ ಹತ್ತಿ ಕುಳಿತು ಪತ್ನಿ ಸಿಕ್ಕಿದ್ರೆ ಮಾತ್ರ ಕೆಳಗಿಳಿಯೋದು ಅಂತ ಹೇಳಿದ್ದಾನೆ.

'ಸಾಯೋದಾಗಿ ಬೆದರಿಸಿ ಆಕೆಯನ್ನು ಕರೆಸಿಕೊಂಡಿದ್ದಾರೆ. ಈಗ ಎಲ್ಲಿ ಬಚ್ಚಿಟ್ಟಿದ್ದಾರೋ ಗೊತ್ತಿಲ್ಲ. ನಾನು ಕಾಲ್‌ ಮಾಡಿದ್ರೆ ಪ್ರತಿಕ್ರಿಯೆ ನೀಡ್ತಿಲ್ಲ. ನನಗೆ ನನ್ನ ಹೆಂಡತಿಯನ್ನು ಕೊಡಿಸಿ' ಅಂತ ಶಾಂತಕುಮಾರ್ ಕೇಳಿಕೊಂಡಿದ್ದಾನೆ.