ಹೆಂಡ್ತಿ ಇಲ್ಲ, ಎರಡು ಕಿಡ್ನಿಯೂ ವೈಫಲ್ಯ: ದಾನಿಗಳ ನೆರವಿಗಾಗಿ ಕಾಯುತ್ತಿರುವ ಉಪನ್ಯಾಸಕ

ಅದೆಷ್ಟೋ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ನಿಂತಿರುವ, ಮಕ್ಕಳ ಜೀವನದ ಮಾರ್ಗಕ್ಕೆ ಬೆಳಕಾಗಿರುವ ಉಪನ್ಯಾಸಕ ಕಳೆದ ಮೂರು ವರ್ಷಗಳಿಂದ ಎರಡು ಕಿಡ್ನಿ ಕಳೆದುಕೊಂಡು ನೆರವಿಗಾಗಿ ಎದುರು ನೋಡುತ್ತಿದ್ದಾರೆ. 

Raichur guest lecture suffering from kidney failure

ರಾಯಚೂರು, (ಜೂನ್.19): ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಅಮರೇಶ್ ಮೂರು ವರ್ಷಗಳಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ದಾನಿಗಳ ನೆರವಿಗಾಗಿ ಎದುರು ನೋಡುತ್ತಿದ್ದಾರೆ

ತನ್ನ ಎರಡು ಕಿಡ್ನಿಯೂ ಇಲ್ಲ, ತನ್ನನ್ನು ಆರೈಕೆ ಮಾಡ್ತಿದ್ದ ಮಡದಿಯೂ ಇಲ್ಲ, ಚಿಕಿತ್ಸೆಗಾಗಿ ಮಾಡಿದ್ದ 15-20 ಲಕ್ಷ ರೂ. ಸಾಲ, ಮಕ್ಕಳ ಪಾಲನೆಗೆ ಸರ್ಕಾರ ನೆರವಾಗಬೇಕೆಂದು ವಿಡಿಯೋ ಮಾಡುವ ಮೂಲಕ ಸಿ‌‌.ಎಂ ಹಾಗೂ ಡಿ.ಸಿ.ಎಂ ಗಳಿಗೆ ಮನವಿ ಮಾಡಿದ್ದಾರೆ.

ಚೀನಿ ವಸ್ತು ನಿರ್ಬಂಧಕ್ಕೆ ಮುಂದಾದ ಇಂಡಿಯಾ, ಬಾಲಿವುಡ್‌ನಲ್ಲಿ ಮ್ಯೂಸಿಕ್ ಮಾಫಿಯಾ;ಜೂ.19ರ ಟಾಪ್ 10 ಸುದ್ದಿ!

ಕಳೆದ ಆರು ವರ್ಷಗಳಿಂದ ಜಿಲ್ಲೆಯ ಲಿಂಗಸುಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದ ಡಾ.ಅಮರೇಶ್, ಮೂಲತಃ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದವರಾಗಿದ್ದು,  ಕಳೆದ ಮೂರು ವರ್ಷಗಳಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ.

ಅವರು ವಾರಕ್ಕೆ ಎರಡು ಸಾರಿ ಡಯಾಲಿಸಸ್ ಮಾಡಿಸಿಕೊಳ್ಳುತ್ತಿದ್ದು, ಡಯಾಲಿಸಸ್ ಮತ್ತು ಕಿಡ್ನಿಗಳ ಚಿಕಿತ್ಸೆಯ ಸಲುವಾಗಿ ಇದುವರೆಗೂ ಸುಮಾರು 15-20 ಲಕ್ಷ ರೂ.ಗಳನ್ನು ಈಗಾಗಲೇ ಸಾಲಸೂಲ ಖರ್ಚು ಮಾಡಿಕೊಂಡಿದ್ದಾರೆ. ಅಲ್ಲದೇ ಕಳೆದ ತಿಂಗಳಷ್ಟೇ ಹೃದಯಾಘಾತದಿಂದ ಇವರ ಪತ್ನಿ ಕೂಡ ಮೃತಪಟ್ಟಿದ್ದಾರೆ. ಮನೆಯಲ್ಲಿ ಉಂಟಾದ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಂಡತಿಗೆ ಚಿಕಿತ್ಸೆ ಕೊಡಿಸಲಾಗದೆ ಡಾ.ಅಮರೇಶ್  ಹೆಂಡತಿಯನ್ನು ಕಳೆದುಕೊಂಡಿದ್ದಾರೆ. 

ಇನ್ನೂ ತನ್ನ ಮಕ್ಕಳ ಪಾಲನೆಗಾಗಿ ಮತ್ತು ತನ್ನ ಮುಂದಿನ ಜೀವನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿಡಿಯೋವೊಂದನ್ನು ಮಾಡಿರುವ ಇವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ವತ್ ನಾರಾಯಣರವರಿಗೆ ವಿಡಿಯೋ ಮೂಲಕ ತನ್ನ ಕುಟುಂಬದ ನೋವನ್ನು ತಿಳಿಸಿದ್ದಾರೆ.

 ಅಲ್ಲದೇ ನೆರವು ನೀಡುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇವರ ಆರೋಗ್ಯ ದೃಷ್ಟಿಯಿಂದ ಹಾಗೂ ಇವರ  ಮಕ್ಕಳ ಭವಿಷ್ಯದ ಸಲುವಾಗಿ ಆದರೂ ಸರ್ಕಾರ ಇವರ ನೆರವಿಗೆ ಮುಂದಾಗಬೇಕಾಗಿದೆ.

ಡಾ.ಅಮರೇಶ್ ಆಲ್ಕೋಡ್ ರವರ ನೋವಿಗೆ ಸ್ಪಂದಿಸುವ ಮನಸ್ಸುಗಳು, ಇವರ ಕುಟುಂಬಕ್ಕೆ ನೆರವಾಗುವ ಹೃದಯವಂತರು ಇವರ ದೂರವಾಣಿ ಸಂಖ್ಯೆ: 6364056438‌ & 8105559685 ಗೆ ಕರೆಮಾಡಿ ಧೈರ್ಯ ಹೇಳಿ.

ಬ್ಯಾಂಕ್ ಖಾತೆಯ ವಿವರ:
 ಡಾ. ಅಮರೇಶ್ ಆಲ್ಕೋಡ್, ಎಸ್.ಬಿ.ಐ ಬ್ಯಾಂಕ್, ಸಿರವಾರ ಶಾಖೆ, ಖಾತೆ ಸಂಖ್ಯೆ 31090846274 ಐ.ಎಫ್.ಎಸ್.ಸಿ ಕೋಡ್: SBIN0011137 ಮೂಲಕ ಕೈಲಾದ ಸಹಾಯ ಮಾಡಬಹುದಾಗಿದೆ.

Latest Videos
Follow Us:
Download App:
  • android
  • ios