Asianet Suvarna News Asianet Suvarna News

ಮಳೆ ಕೊರತೆಯಲ್ಲೇ ಬೀಜ, ಗೊಬ್ಬರಕ್ಕೆ ರೈತರು ದೌಡು!

ಜೂನ್‌ ತಿಂಗಳ ಮುಗಿಯುತ್ತ ಬಂದರು ತಾಲೂಕಿನಲ್ಲಿ ಬಿತ್ತನೆಗೆ ಹದವಾಗುವಷ್ಟುಮಳೆ ಬಾರದೆ ವಿಳಂಬವಾಗಿದ್ದು, ರೈತ ವರ್ಗದಲ್ಲಿ ಆತಂಕದ ಮನೆ ಮಾಡಿದೆ.

Raichur farmers sow seeds, collect manure but lack of rain rav
Author
First Published Jun 29, 2023, 2:20 PM IST

ಆಳಂದ (ಜೂ.29) : ಜೂನ್‌ ತಿಂಗಳ ಮುಗಿಯುತ್ತ ಬಂದರು ತಾಲೂಕಿನಲ್ಲಿ ಬಿತ್ತನೆಗೆ ಹದವಾಗುವಷ್ಟುಮಳೆ ಬಾರದೆ ವಿಳಂಬವಾಗಿದ್ದು, ರೈತ ವರ್ಗದಲ್ಲಿ ಆತಂಕದ ಮನೆ ಮಾಡಿದೆ.

ಮೂರ್ನಾಲ್ಕು ದಿನಗಳಿಂದ ಮೋಡ ಮುಸಕಿದ ವಾತಾವರಣ, ಅಲ್ಲಲ್ಲಿ ಮಳೆ ಹನಿ ಸುರಿದು ವಾತಾವರಣದಲ್ಲಿ ತಂಪೇರಿದ್ದರಿಂದ ಮಳೆಯಾಗುವ ನಿರೀಕ್ಷೆಯಲ್ಲಿ ರೈತ ಸಮುದಾಯ ರೈತ ಸಂಪರ್ಕ ಕೇಂದ್ರ ಮತ್ತು ಖಾಸಗಿ ಅಂಗಡಿಗಳಲ್ಲಿ ಬೀಜ ಗೊಬ್ಬರ ಖರೀದಿಗೆ ಮುಂದಾಗಿದ್ದಾರೆ.

Video viral: ರೈತನೊಂದಿಗೆ ಕೈಜೋಡಿಸಿ ಒಂದು ಎಕರೆ ಬಿತ್ತನೆ ಮಾಡಿದ ಶಾಸಕ ಶರಣು ಸಲಗರ!

ತಾಲೂಕಿನ ಐದು ರೈತ ಸಂಪರ್ಕ ಕೇಂದ್ರ ಸೇರಿ ಸರಸಂಬಾ, ಕಿಣ್ಣಿಸುಲ್ತಾನ ಮತ್ತು ಕಡಗಂಚಿ ವಿಎಸ್‌ಎಸ್‌ಎಸನ್‌ ಮೂಲಕ ಸಬ್ಸಿಡಿ ಬೀಜ ವಿತರಣೆ ಕಾರ್ಯ ಭರದಿಂದ ಸಾಗಿದೆ. ಆದರೆ ಮಳೆಯ ಹಿಂದೇಟಾಗಿದ್ದರಿಂದ ರೈತರು ಬೀಜ, ಗೊಬ್ಬರ ಪಡೆಯಲು ಮುಂದೆ ಮುಂದೆ ದಿನದೊಡುತ್ತಿದ್ದರಾದರು. ಸದ್ಯ ಎರಡ್ಮೂರು ದಿನಗಳಿಂದ ಮಳೆಯ ಬರುವ ವಾತಾವರಣ ಕಂಡು ಬೀಜ ಗೊಬ್ಬರ ಸಂಗ್ರಹಿಸಲು ತಂಡೋಪ ತಂಡವಾಗಿ ರೈತ ಸಮುದಾಯ ಧಾವಿಸತೊಡಗಿದ್ದಾರೆ.

ದಾವಣಗೆರೆಯಲ್ಲಿ 25,000 ಎಕ್ರೇಲಿ ಕಾರ್ಗಿಲ್‌ನಿಂದ ರೈತರಿಗೆ ತರಬೇತಿ

ಆತಂಕದ ಅಗತ್ಯವಿಲ್ಲ:

ಖಜೂರಿ ವಲಯದಲ್ಲಿ 30 ಮಿ.ಮೀ. ಮಳೆಯಾಗಿದೆ. ಹೆಸರು ಬಿತ್ತನೆಗೆ ಕಾಲಾವಕಾಶ ವಿಳಂಬವಾಗಿದೆ. ಉದ್ದು, ತೊಗರಿ, ಸೋಯಾಬಿನ್‌, ಸಜ್ಜೆ, ಸೂರ್ಯಕಾಂತಿಗೆ ಕಾಲಾವಕಾಶವಿದೆ. ಕನಿಷ್ಠ ಹೆಸರು, ತೊಗರಿ, ಉದ್ದು ಬಿತ್ತವ ಪ್ರದೇಶದಲ್ಲಿ ಕನಿಷ್ಠ ಅರ್ಧ ಅಡಿಯಾದರು ಮಣ್ಣು ತೇವಾಂಶದಿಂದ ಕೂಡಿರಬೇಕು. (15 ಸೆ.ಮೀ.) ಆದರೆ ಸೋಯಾಬಿನ್‌ ಬಿತ್ತನೆಗೆ ಕನಿಷ್ಠ (45 ಸೆ.ಮೀ) ತೇವಾಂಶದಿಂದ ಕೂಡಿರಬೇಕು. ಸೋಯಾ ಬಿತ್ತುವ ಮೊದಲು ಮಣ್ಣಿನ ತೇವಾಂಶ ಖಾತ್ರಿ ಪಡಿಸಿಕೊಂಡೇ ಬಿತ್ತನೆ ಮಾಡುವುದು ಸೂಕ್ತವಾಗಿದೆ. ವಾರದಲ್ಲಿ ಉತ್ತಮವಾದ ಮಳೆ ಬರುವ ಸಾಧ್ಯತೆ ಇದೆ. ಯಾರು ಆತಂಕಪಡುವ ಅವಶಕತೆಯಿಲ್ಲ.

- ಪಿ.ಎಂ. ಮಲ್ಲಿಕಾರ್ಜುನ, ಸಹಾಯಕ ಕೃಷಿ ನಿರ್ದೇಶಕ ಆಳಂದ.

ಬೀಜದ ಕೊರತೆಯಿಲ್ಲ:

ಖಜೂರಿ ಮತ್ತು ಮಾದನಹಿಪ್ಪರಗಾ ವಲಯದ ರೈತರಿಗೆ ಬಿತ್ತನೆ ಬೀಜದ ಕೊರತೆಯಿಲ್ಲ. ಈಗಾಗಲೇ ಶೇ.50ರಷ್ಟುಬಿತ್ತನೆ ಬೀಜ ವಿತರಣೆ ನಡೆದಿದೆ. ಇನೂಳಿದ ಕಾರ್ಯ ಪ್ರಗತಿಯಲ್ಲಿದೆ. ರೈತರು ಅಗತ್ಯ ದಾಖಲೆ ಒದಗಿಸಿ ಸರಣಿಯಂತೆ ತಾಳ್ಮೆಯಿಂದ ಸಿಬ್ಬಂದಿಗೆ ಸಹಕರಿಸಿ ಬೀಜವನ್ನು ಪಡೆಯಬೇಕು.

- ವಿಲಾಸ ಹರಸೂರ, ಹಿರಿಯ ಕೃಷಿ ಅಧಿಕಾರಿ  

 

Follow Us:
Download App:
  • android
  • ios