ವಿತ್ತ ಸಚಿವೆ ಮಂಡಿಸಿದ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್ ವೈ)ಯಡಿ ರಾಜ್ಯದ ಎರಡು ಜಿಲ್ಲೆಗಳ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸುಧಾರಣೆಗೆ ಮುಂದಾಗಿದ್ದರು ಅದರಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ಕಲ್ಪಿಸಿಲ್ಲ, ರಿಮ್ಸ್ ಜೊತೆಗೆ ಒಪೆಕ್ ಸುಧಾರಣೆಗೂ ಕ್ರಮ ವಹಿಸಬೇಕಿತ್ತು ಎನ್ನುವುದು ಜಿಲ್ಲೆಯ ಜನರ ಅಭಿಮತವಾಗಿದ್ದರು ಅದಕ್ಕೆ ಬಜೆಟ್‌ನಲ್ಲಿ ಆಸ್ಪದೆ ಕೊಟ್ಟಿಲ್ಲ.
ರಾಮಕೃಷ್ಣ ದಾಸರಿ
ರಾಯಚೂರು(ಫೆ.02): ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಎರಡನೇ ಬಜೆಟ್ ನಲ್ಲಿ ರಾಯಚೂರು ಜಿಲ್ಲೆಗೆ ಏಮ್ಸ್ ಘೋಷಣೆ ಮಾಡುವ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮುಂದುವರೆದ ಮಲತಾಯಿ ಧೋರಣೆ, ನಿರ್ಲಕ್ಷ್ಯ, ತೀರಾ ಕಡಗಣೆಯ ಮನಸ್ಥಿತಿಯಿಂದಾಗಿ ಅವರ ಪಾಲಿಗೆ ನಾವು (ರಾಯಚೂರು ಜಿಲ್ಲೆಯವರು) ಇದು ಇಲ್ಲದಂತಾಗಿದ್ದೇವೆ ಎನ್ನುವ ಬೇಜಾರು ಇಲ್ಲಿನ ಜನರಲ್ಲಿ ಜೋರು ಪಡೆದುಕೊಂಡಿದೆ.
ಸತತ ಮೂರು ವರ್ಷಗಳ ಹೋರಾಟಕ್ಕೆ ಫಲ ಸಿಕುತ್ತದೆ ಎಂದು ನಿರೀಕ್ಷೆಯಟ್ಟುಕೊಂಡವರಿಗೆ ಮತ್ತೊಮ್ಮೆ ನಿರಾಸೆ ಮೂಡಿದ್ದು ಇದರೊಂದಿಗೆ ಜಿಲ್ಲೆ ಆರೋಗ್ಯ ಕ್ಷೇತ್ರದವೃದ್ಧಿ, ಕೃಷಿಯಲ್ಲಿ ಅದರಲ್ಲಿಯೂ ಉದ್ದೇಶಿಸಿ ಸಿರಿಧಾನ್ಯಗಳ ಹಬ್ ಪ್ರದೇಶದ ಅಭಿವೃದ್ಧಿಗೆ ಸಿಗದ ಪ್ರಾಶಸ್ತ್ರ, ವಿಮಾನ ನಿಲ್ದಾಣ ಕೆಲಸ ಹಾಗೂ ದಶಕಗಳಿಂದ ಕೊಳೆಯುತ್ತಿರುವ ರೈಲ್ವೆ ಯೋಜನೆಗಳಿಗೆ ಮೀಸಲಿಡದ ಅನುದಾನ ಹೀಗೆ ಹತ್ತು ಹಲವು ಇಲ್ಲಗಳಿಂದಾಗಿ ಬಜೆಟ್ ಮೇಲೆ ಜಿಲ್ಲೆ ಜನರು ಇಟ್ಟುಕೊಂಡಿದ್ದ ನಿರೀಕ್ಷೆಗಳಿಗೆ ಕೇಂದ್ರ ಸರ್ಕಾರ ತಣ್ಣೀರು ಎರಚಿದ್ದರಿಂದ, ನಿರಾಸೆಯೇ ಎಲ್ಲ ಎನ್ನುವಂತನ ಮನೋಭಾವನೆ ಮೂಡುವಂತೆ ಮಾಡಿದೆ.
ಕೇಂದ್ರ ಬಜೆಟ್ 2025: ಕಲ್ಯಾಣ ಕರ್ನಾಟಕ ಭಾಗಕ್ಕೆ ಖಾಲಿ ಚೊಂಬು!
ವಿತ್ತ ಸಚಿವೆ ಮಂಡಿಸಿದ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್ ವೈ)ಯಡಿ ರಾಜ್ಯದ ಎರಡು ಜಿಲ್ಲೆಗಳ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸುಧಾರಣೆಗೆ ಮುಂದಾಗಿದ್ದರು ಅದರಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ಕಲ್ಪಿಸಿಲ್ಲ, ರಿಮ್ಸ್ ಜೊತೆಗೆ ಒಪೆಕ್ ಸುಧಾರಣೆಗೂ ಕ್ರಮ ವಹಿಸಬೇಕಿತ್ತು ಎನ್ನುವುದು ಜಿಲ್ಲೆಯ ಜನರ ಅಭಿಮತವಾಗಿದ್ದರು ಅದಕ್ಕೆ ಬಜೆಟ್‌ನಲ್ಲಿ ಆಸ್ಪದೆ ಕೊಟ್ಟಿಲ್ಲ. ಇನ್ನು ಕೃಷಿ ವಲಯಕ್ಕೆ ಭರ್ಜರಿ ಕೊಡುಗೆ ಕೊಟ್ಟ ಕೇಂದ್ರವು ಈ ಭಾಗದ ಕೃಷಿ ಅದರಲ್ಲಿಯೂ ಉದ್ದೇಶಿಸಿ ಸಿರಿಧಾನ್ಯಗಳ ಹಬ್ ನಿರ್ಮಾಣಕ್ಕೆ ಅಗತ್ಯವಾದ ಯೋಜನೆಗಳು, ಅನುದಾನವನ್ನು ನೀಡಿಲ್ಲ.
ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ರೂ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಮರೀಚಿಕೆ...!
ಇನ್ನು ರಾಯಚೂರು ನಗರದಲ್ಲಿ ಹೊಸದಾಗಿ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಂಡಿರುವ ವಿಮಾನ ನಿಲ್ದಾಣ ಕಾಮಗಾರಿ ಆರಂಭಕ್ಕೂ ಅನುಮೋದನೆ, ಹೆಚ್ಚುವರಿ ಹಣ ನೀಡುವುದು, ಇನ್ನು ಜಿಲ್ಲೆಯ ರೈಲ್ವೆ ಯೋಜನೆಗಳಾದ ಮುನಿರಾಬಾದ -ಮೆಹಬೂಬ್ಬಗರ ಹಾಗೂ ಗದಗ ಮತ್ತು ವಾಡಿಯ ರೈಲ್ವೆ ಯೋಜನೆಗಳು ಅನುದಾನ, ಭೂ ಸ್ವಾಧೀನ ಪ್ರಕ್ರಿಯೇ, ಪರಿಷ್ಕೃತ ಯೋಜನೆ ರೂಪಿಸುವಂತಹ ಕೆಲಸವಾಗಿಲ್ಲ ಎನ್ನುವ ಕೊರಗು ಜಿಲ್ಲೆ ಜನರನ್ನು ಕಾಡಲಾರಂಭಿಸಿದೆ. ಕೇಂದ್ರದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಯೋಜನೆಗೆ ಆಯ್ಕೆಗೊಂಡಿರುವ ರಾಜ್ಯದ ಎರಡು ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದಿದ್ದು, ಸಂಪನ್ಮೂಲದ ಕೊರತೆಯಿಂದಾಗಿ ಅವುಗಳ ಸುಧಾರಣೆಗೆ ಪ್ರಯಾಣಿಕ ಪ್ರಯತ್ನಗಳು ಸಾಗಿಲ್ಲ ಇದರಿಂದಾಗಿ ತ್ವರಿತ ಪ್ರಗತಿಯು ಸಾಧಿಸಲಾಗದ ಕಾರಣಕ್ಕೆ ಕೇಂದ್ರ ಬಜೆಟ್ನಲ್ಲಿ ಈ ಎರಡೂ ಜಿಲ್ಲೆಗಳ ಶೈಕ್ಷಣಿಕ ಮೂಲ ಸೌಕರ್ಯ ಗಳು, ವೈದ್ಯಕೀಯ ಮೂಲಸೌಕರ್ಯಗಳು ಹಾಗೂ ಸುಧಾರಿತ ಜೀವನೋಪಾಯದಂತಹ ಕಾರ್ಯಕ್ರಮಗಳಿಗೆ ಯಥೇಚ್ಛವಾಗಿ ಹಣ ನೀಡಬೇಕು ಎನ್ನುವ ಬೇಡಿಕೆಗೂ ಬಜೆಟ್‌ನಲ್ಲಿ ಕ್ರಮಕೈಗೊಂಡಿಲ್ಲ.
1000 ದಿನದತ್ತ ಹೋರಾಟ; ತಲೆಕೆಳಗಾದ ಲೆಕ್ಕಾಚಾರ!
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಕೈ ತಪ್ಪಿದ ಜಿಲ್ಲೆಯಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಯನ್ನು ಮಂಜೂರು ಮಾಡಬೇಕು ಎನ್ನುವ ಒಂದೇ ಬೇಡಿಕೆಯಡಿ ಹುಟ್ಟಿಕೊಂಡ ಹೋರಾಟವು ಸತತ 996ನೇ ದಿನ ದಾಟಿ 1,000 ದತ್ತ ಸಾಗಿರುವ ಈ ತರುಣದಲ್ಲಿ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಾದರೂ ಕರ್ನಾಟಕ ರಾಜ್ಯಕ್ಕೆ ಏಮ್ಸ್ ಘೋಷಣೆಯಾಗಲಿದ್ದು ತದನಂತರ ರಾಜ್ಯ ಸರ್ಕಾರವು ರಾಯಚೂರು ಜಿಲ್ಲೆಗೆ ಅದನ್ನು ದಯಪಾಲಿಸಲಿದೆ ಎನ್ನುವ ಲೆಕ್ಕಾಚಾರವು ಇದೀಗ ತಲೆಕೆಳಗಾಗಿ ಕಣ್ಣೀರಿಡುವಂತಾಗಿದೆ.
