Asianet Suvarna News Asianet Suvarna News

Karnataka politics : ಬಿಜೆಪಿ, ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ಗೆ ಸೇರ್ಪಡೆ

ತಾಲೂಕಿನ ಹಲವಾರು ಗ್ರಾಮಗಳ ಬಿಜೆಪಿ ಮತ್ತು ಕಾಂಗ್ರೆಸ್‌ನ ಕಾರ್ಯಕರ್ತರು ತಮ್ಮ ಪಕ್ಷಗಳನ್ನು ತ್ಯಜಿಸಿ ಮಾಜಿ ಶಾಸಕ ಹಾಗೂ ಜೆಡಿಎಸ್‌ನ ಮುಖಂಡ ಎಂ.ಟಿ.ಕೃಷ್ಣಪ್ಪರ ಸಮ್ಮುಖ ಜೆಡಿಎಸ್‌ಗೆ ಸೇರ್ಪಡೆಯಾದರು.

Quit BJP and Congress and join JDS snr
Author
First Published Dec 17, 2022, 5:33 AM IST

 ತುರುವೇಕೆರೆ (ಡಿ.17):  ತಾಲೂಕಿನ ಹಲವಾರು ಗ್ರಾಮಗಳ ಬಿಜೆಪಿ ಮತ್ತು ಕಾಂಗ್ರೆಸ್‌ನ ಕಾರ್ಯಕರ್ತರು ತಮ್ಮ ಪಕ್ಷಗಳನ್ನು ತ್ಯಜಿಸಿ ಮಾಜಿ ಶಾಸಕ ಹಾಗೂ ಜೆಡಿಎಸ್‌ನ ಮುಖಂಡ ಎಂ.ಟಿ.ಕೃಷ್ಣಪ್ಪರ ಸಮ್ಮುಖ ಜೆಡಿಎಸ್‌ಗೆ ಸೇರ್ಪಡೆಯಾದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು  ರಾಜ್ಯದ ಜನರ ನಾಡಿಮಿಡಿತ ಅರಿತು ಮಾಡಿದ ಆಡಳಿತ, ರೈತರ ಪರ ಸಾಲ ಮನ್ನಾ ಮಾಡಿದ ಕ್ರಮ ಹಾಗೂ ಹಲವಾರು ಕಾರ್ಯಕ್ರಮಗಳನ್ನು ಮೆಚ್ಚಿ ತಾಲೂಕಿನ ಸಾವಿರಾರು ಯುವಕರು ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ತಾಲೂಕಿನಲ್ಲಿ ಬಸ್‌ ನಿಲ್ದಾಣ, ಕೋರ್ಚ್‌, ವಾಣಿಜ್ಯ ಸಂಕೀರ್ಣ, ಹಲವಾರು ವಿದ್ಯಾ ಕೇಂದ್ರಗಳನ್ನು ಪ್ರಾರಂಭಿಸಿದುದು ಜನಮಾನಸದಲ್ಲಿ ಉಳಿದಿದೆ ಎಂದು ಎಂ.ಟಿ.ಕೃಷ್ಣಪ್ಪ ಹೇಳಿದರು.

ಬಿಜೆಪಿ ತ್ಯಜಿಸಿದ ಯುವ ಮುಖಂಡ ಸಂಪತ್‌ ಮಾತನಾಡಿ, ಹಾಲಿ ಶಾಸಕರು ತಮ್ಮ ಗ್ರಾಮಗಳ ಅಭಿವೃದ್ಧಿಯ ಕಡೆ ಚಿಂತನೆ ಮಾಡದಿರುವುದು ಬೇಸರ ತರಿಸಿದೆ. ತಾವು ಬಿಜೆಪಿಗಾಗಿ ಸಾಕಷ್ಟುದುಡಿದಿದ್ದರೂ ಸಹ ನಮ್ಮನ್ನು ಸೌಜನ್ಯಕ್ಕೂ ಮಾತನಾಡಿಸುವ ಗೋಜಿಗೇ ಹೋಗದಿರುವುದು ಪಕ್ಷ ತ್ಯಜಿಸಲು ಕಾರಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಯುವ ಜೆಡಿಎಸ್‌ನ ಅಧ್ಯಕ್ಷ ಬಾಣಸಂದ್ರ ರಮೇಶ್‌, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಬಿ.ಎಸ್‌.ದೇವರಾಜು, ಪರಮೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ರೇಣುಕಯ್ಯ, ಪಟ್ಟಣ ಪಂಚಾಯ್ತಿ ಸದಸ್ಯ ಎನ್‌.ಆರ್‌.ಸುರೇಶ್‌, ಬಡಾವಣೆ ಶಿವು, ಮಿಲ್‌ ಸುರೇಶ್‌, ತಂಡಗ ನಂಜುಂಡೇಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

15 ಟಿವಿಕೆ 5 - ತುರುವೇಕೆರೆಯಲ್ಲಿ ಹಲವಾರು ಯುವಕರು ಜೆಡಿಎಸ್‌ಗೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪರ ಸಮ್ಮುಖ ಸೇರ್ಪಡೆಯಾದರು.

ನಾವು ಭಯಸಿದ ಕೆಲಸಗಳು ಬಿಜೆಪಿಯಲ್ಲಿ ಆಗಲಿಲ್ಲ

ಚನ್ನಪಟ್ಟಣ : ನಾವು ಬಯಸಿದ ಕಾರ‍್ಯಕ್ರಮಗಳು ಬಿಜೆಪಿಯಲ್ಲಿ ಆಗಲಿಲ್ಲ. ಸರ್ಕಾರ ಜನರ ಸರ್ಕಾರವಾಗಿ ಉಳಿಯಲಿಲ್ಲ. ಯಾರು ಎಲ್ಲಿಗೆ ಹೋಗುತ್ತಾರೋ ಗೊತ್ತಿಲ್ಲ. ನಾನು ಯಾವುದೇ ನಿರ್ಧಾರ ಮಾಡಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಸ್ಪಷ್ಟನೆ ನೀಡಿದರು. ಇತ್ತೀಚಿನ ನಿಧನರಾದ ಕನ್ನಡ ಹೋರಾಟಗಾರ ಸಿಂ.ಲಿಂ.ನಾಗರಾಜು ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಾಲಿಟಿಕ್ಸ್‌ ಕಮಾಂಡ್ಸ್‌ ದಿ ರೆಸ್ಪೆಕ್ಟ್ ನಾಟ್‌ ಡಿಮ್ಯಾಂಡ್‌. ಯಾವುದೇ ಪಕ್ಷ ಇರಲಿ ನಾನು ಗೌರವ ಬಯಸುತ್ತೇನೆಂದು ಮಾರ್ಮಿಕವಾಗಿ ನುಡಿದರು.

ನಮ್ಮದು ಧರ್ಮಾತೀತ, ಜಾತ್ಯತೀತ ದೇಶ. ಯಾವುದೋ ಮಸೀದಿಗೆ ನುಗ್ಗುವುದು, ದೇವಸ್ಥಾನಕ್ಕೆ ಮುಸ್ಲಿಂರು ಬರಬಾರದು ಅನ್ನೋದು ಎಷ್ಟುಸರಿ. ಹಾಗಾದರೆ ದೇಶದಲ್ಲಿ 30 ಕೋಟಿ ಮುಸ್ಲಿಂರಿದ್ದಾರೆ. ಆಚೆ ಕಳುಹಿಸುತ್ತೀರಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯಾವುದನ್ನ ಮಾಡಬೇಕು ಅದನ್ನ ಮಾಡೋಣ. ಟಿಪ್ಪು ವಿಚಾರವಾಗಿ ಒಂದು ನಡೆಯಿತು. ಅದರಿಂದ ಬಡವರಿಗೆ ಅನುಕೂಲ ಆಯ್ತಾ? ಏನು ಮಾಡಬೇಕೋ ಅದನ್ನ ಮಾಡಲಿ, ಇದರಿಂದ ಮನಸ್ಸಿಗೆ ಬೇಜಾರಾಗಿದೆ. 

ಹಳ್ಳಿ ಹಕ್ಕಿ ಮತ್ತೆ ಕಾಂಗ್ರೆಸ್‌ನತ್ತ?: ಖರ್ಗೆ ಬಳಿಕ ಸಿದ್ದು ಭೇಟಿ

ಮೀಸಲಾತಿ ವಿಚಾರವಾಗಿ ಸರ್ಕಾರ ಸರಿಯಾದ ಹೆಜ್ಜೆ ಹಾಕಲಿಲ್ಲ. ಚುನಾವಣೆ ಸಮೀಪಿಸುತ್ತಿದೆ ಎಂದು ಬನ್ನಿ ಕೊಡುತ್ತೇವೆ ಅಂದರೆ ಹೇಗೆಂದು ಪ್ರಶ್ನಿಸಿದ ಅವರು, ಅಂಬೇಡ್ಕರ್‌ ಹೇಳಿದ್ದಾರೆ ಯಾರಿಗೆ ಮೀಸಲಾತಿ ಕೊಡಬೇಕೆಂದು. ಈಗ ಎಸ್‌ಟಿ-ಎಸ್ಸಿಗೆ ನೀಡಿದ ಮೀಸಲಾತಿ ಏನಾಯ್ತು? ಪಾರ್ಲಿಮೆಂಟ್‌ನಲ್ಲಿ ಏನೆಂದು ಉತ್ತರ ಬಂತು? ಹಾಗಾಗಿ ಜನರನ್ನ ಸುಖಾಸುಮ್ಮನೆ ನಂಬಿಸುವುದ, ಸುಳ್ಳು ಹೇಳಬೇಡಿ ಎಂದು ಬಿಜೆಪಿ ವಿರುದ್ಧ ಕಿಡಕಾರಿದರು.

ಯಾರ ಜತೆಯೂ ಮಾತನಾಡಿಲ್ಲ: ರೆಬೆಲ್‌ ಶಾಸಕರು ಮತ್ತೆ ಕಾಂಗ್ರೆಸ್‌ಗೆ ಮರಳುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ವಿಚಾರ ನನಗೆ ಗೊತ್ತಿಲ್ಲ. ನಾನು ಯಾರ ಜೊತೆಯೂ ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೆ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

ವಿಶೇಷ ಅರ್ಥವೇನಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದರಲ್ಲಿ ಯಾವುದೇ ವಿಶೇಷ ಇಲ್ಲ. ನಾನು ಶಿವಕುಮಾರ್‌ 40 ವರ್ಷದ ಸ್ನೇಹಿತರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಾನು ಒಟ್ಟಿಗೆ ಲಾ ಮಾಡಿದವರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಜೊತೆಗೆ ನಾನು ಕೆಲಸ ಮಾಡಿದ್ದೇನೆ. ಹಾಗಾಗಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು. ಕಾಂಗ್ರೆಸ್‌ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಯಾವುದೇ ನಿರ್ಧಾರವನ್ನು ಮಾಡಿಲ್ಲ. ಮುಂದೆ ನೋಡೋಣ, ಈ ಅಸೆಂಬ್ಲಿ ಮುಗಿಯಲಿ ಎಂದರು.

ಸಿದ್ದರಾಮಯ್ಯ ಎಲ್ಲಿ ನಿಂತರೂ ಗೆಲ್ಲುತ್ತಾರೆ: ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌

ಈಗ ಸಚಿವ ಸ್ಥಾನ ನೀಡಿದರೂ ಅದು ನನಗೆ ಬೇಡ. ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ. ನಾವೆಲ್ಲ ಸೇರಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದೆವು. ನಾವು ಹೊರಗೆ ಬರದಿದ್ದರೆ ಸರ್ಕಾರ ಎಲ್ಲಿ ಬರುತ್ತಿತ್ತು. ಸರ್ಕಾರಿಂದ ಒಳ್ಳೆಯ ಕಾರ್ಯಕ್ರಮಗಳನ್ನ ನಿರೀಕ್ಷೆ ಮಾಡಿದ್ದೆವು. ಅದೆಲ್ಲವೂ ಸುಳ್ಳಾಯಿತು.
-ಎಚ್‌. ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯರು

Follow Us:
Download App:
  • android
  • ios