Asianet Suvarna News Asianet Suvarna News

ಸಿದ್ದರಾಮಯ್ಯ ಎಲ್ಲಿ ನಿಂತರೂ ಗೆಲ್ಲುತ್ತಾರೆ: ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ವರುಣ ಅಥವಾ ಕೋಲಾರದಲ್ಲಿ ಸ್ಪರ್ಧೆ ಮಾಡಿದರೂ ಜಯಗಳಿಸುತ್ತಾರೆ. ಅದರಲ್ಲಿ ಏನು ವಿಶೇಷವಿಲ್ಲ. ನಮ್ಮೂರಿನವರು ಸಿಕ್ಕಿದಾಗ ಚೆನ್ನಾಗಿದ್ದೀಯಾ ಅಂತ ಕೇಳದೆ ಚೆನ್ನಾಗಿಲ್ಲ ಎನ್ನಲು ಸಾಧ್ಯವೇ?

BJP MLC H Vishwanath Talks Over Siddaramaiah At Mysuru gvd
Author
First Published Nov 26, 2022, 11:56 PM IST

ಮೈಸೂರು (ನ.26): ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ವರುಣ ಅಥವಾ ಕೋಲಾರದಲ್ಲಿ ಸ್ಪರ್ಧೆ ಮಾಡಿದರೂ ಜಯಗಳಿಸುತ್ತಾರೆ. ಅದರಲ್ಲಿ ಏನು ವಿಶೇಷವಿಲ್ಲ. ನಮ್ಮೂರಿನವರು ಸಿಕ್ಕಿದಾಗ ಚೆನ್ನಾಗಿದ್ದೀಯಾ ಅಂತ ಕೇಳದೆ ಚೆನ್ನಾಗಿಲ್ಲ ಎನ್ನಲು ಸಾಧ್ಯವೇ? ಸಿದ್ದರಾಮಯ್ಯ ಗೆಲ್ಲುತ್ತಾರೆ ಅಂತ ಹೇಳಿದರೆ ಯಾವ ತಪ್ಪೇನೂ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರು. ಅದೇ ರೀತಿ ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ್‌ ಕೂಡ ಸ್ನೇಹಿತರೇ ಆಗಿದ್ದಾರೆ. ಹಾಗೆಂದ ಮಾತ್ರಕ್ಕೆ ಕಾಂಗ್ರೆಸ್‌ ಸೇರುತ್ತಾನೆಂದು ಹೇಳುವವರಿಗೆ ಏನಂಥ ಹೇಳಬೇಕು ಎಂದು ಪ್ರಶ್ನಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ಪಕ್ಷದ ತತ್ವಸಿದ್ಧಾಂತದ ಬಗ್ಗೆ ಮಾತನಾಡಲ್ಲ. 

ಎಲ್ಲಾ ಪಕ್ಷಗಳ ಸಿದ್ಧಾಂತಗಳು ಸರಿಯಾಗಿದೆ. ಆದರೆ, ಅದನ್ನು ನಡೆಸುವವರ ನಡವಳಿಕೆ ಮತ್ತು ಮನಸ್ಥಿತಿ ಸರಿಯಿಲ್ಲ ಎಂದು ಹೇಳಿದರು.ಶಾಸಕ ತನ್ವೀರ್‌ಸೇಠ್‌ ಮುಸ್ಲಿಂ, ವಿಶ್ವನಾಥ್‌ ಏನಾಗಿದ್ದಾರೆ ಎಂದು ಪ್ರಶ್ನಿಸಿರುವ ಸಂಸದ ಪ್ರತಾಪ ಸಿಂಹಗೆ ತೀಷ್ಣವಾಗಿ ತಿರುಗೇಟು ನೀಡಿದ ಅವರು, ನಿನಗೆ ಏನು ರೋಗ ಬಂದಿದೆ? ನನ್ನ ಆರೋಗ್ಯ ಚೆನ್ನಾಗಿದೆ. ನಿಮ್ಮ ಆರೋಗ್ಯ ಸರಿ ಇಲ್ಲದಿರಬಹುದು ಎಂದು ಹೇಳಿದರು. ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣವನ್ನು ಹರಣ ಮಾಡಲಾಗುತ್ತಿದೆ. ಎಸ್‌.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ತಂದಿದ್ದಾಗ ಇಡೀ ಅಧಿಕಾರಿಗಳು ಒಂದು ಊರಿನಲ್ಲಿ ವಾಸ್ತವ್ಯ ಹೂಡುತ್ತಿದ್ದರು. 

ಕಾಂತರಾ ಕಂಬಳ ಗದ್ದೆಯಲ್ಲಿ ಮತ್ತೊಮ್ಮೆ ಕೋಣಗಳ ಕಲರವ!

ಈಗ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಕೇಸರಿಮಯಮಾಡಲು ಬಣ್ಣ ಬಳಿಯಲಾಗುತ್ತಿದೆ. ಪಕ್ಷದ ತತ್ವ, ಸಿದ್ಧಾಂತವನ್ನು ಮಕ್ಕಳ ಮನಸ್ಸಿನ ಮೇಲೆ ಹೇರುವಂತಹ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ವಿವೇಕ, ವಿವೇಚನೆ ಮತ್ತು ದೂರದೃಷ್ಟಿತ್ವದಿಂದ ಕೆಲಸ ಮಾಡುವ ಬದಲಿಗೆ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಲಾಗುತ್ತಿದೆ. ಮೊದಲು ಇದಕ್ಕೆ ಕಡಿವಾಣ ಹಾಕಬೇಕು. ವಿವಿಗಳನ್ನು ವಿಭಜನೆ ಮಾಡಿ ಮತ್ತೆ ಒಂಬತ್ತು ವಿವಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಒಬ್ಬರ ಪಿಎಚ್‌ಡಿ ಪದವಿ ಪ್ರಮಾಣ ಪತ್ರ ನಕಲು ಎಂದು ತಿರಸ್ಕರಿಸಿದ್ದರೂ ಕುಲಪತಿಯನ್ನಾಗಿ ನೇಮಿಸಲಾಗಿದೆ. ಐದು ಕೋಟಿ ರೂ.ಕೊಟ್ಟವರಿಗೆ ಕುಲಪತಿಯನ್ನಾಗಿ ನೇಮಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. 

ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳ ಮಾರಾಟ: ಕಣ್ಮುಚ್ಚಿ ಕುಳಿತಿರುವ ಸರ್ಕಾರಿ ಅಧಿಕಾರಿಗಳು

ವಿವಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಅಧಿಕಾರವನ್ನು ಕುಲಪತಿಗಳಿಂದ ಹಿಂದಕ್ಕೆ ಪಡೆದು ಪ್ರತ್ಯೇಕ ಮಂಡಳಿ ರಚಿಸಬೇಕು. ಐದಾರು ಕೋಟಿ ಕೊಟ್ಟು ಕುಲಪತಿಯಾಗಿ ಬರುವವರು ಜನರನ್ನು ತುಂಬಿ ಹಣ ವಸೂಲಿ ಮಾಡುವಂತಾಗಿದೆ ಎಂದು ಅವರು ಟೀಕಿಸಿದರು. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆಂದು ಅಂಕಿ ಸಂಖ್ಯೆಗಳನ್ನು ಹೇಳುತ್ತಿರುವ ಮುಖಂಡರು ಮೊದಲು ಮತದಾರರನ್ನು ನೆನಪಿಸಿಕೊಳ್ಳಿ. ಬಿಜೆಪಿಯವರು ಮಿಷನ್‌ 150 ಅಂದರೆ, ಕಾಂಗ್ರೆಸ್‌ ನಾಯಕರು 140ಪ್ಲಸ್‌ ಎನ್ನುತ್ತಿದ್ದಾರೆ. ಜೆಡಿಎಸ್‌ನವರು 123 ಸ್ಥಾನಗಳನ್ನು ಗೆಲ್ಲುತ್ತೇವೆ ಅಂತಿದ್ದಾರೆ. ಆದರೆ, ಮತದಾರರಿಂದ ನಮಗೆ ಇಷ್ಟುಸ್ಥಾನಗಳು ಬರಲಿವೆ ಎನ್ನುವ ಮಾತನ್ನಾಡುತ್ತಿಲ್ಲ ಎಂದು ಟೀಕಿಸಿದರು.

Follow Us:
Download App:
  • android
  • ios