ಚಾಮರಾಜನಗರ : ಕೆಸ್ತೂರು ಗ್ರಾಮದಲ್ಲಿ ಬಾಲ್ಯ ಕಳೆದಿದ್ದ ಅಪ್ಪು
- ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತನ್ನ ಬಾಲ್ಯದ ದಿನಗಳನ್ನು ಕೆಸ್ತೂರು ಗ್ರಾಮದಲ್ಲಿ ಕಳೆದಿದ್ದರು
- ಇನ್ನು ಕೆಸ್ತೂರು ಗ್ರಾಮದ ಜನರಿಗೆ ಪವರ್ ಸ್ಟಾರ್ ನೆನಪು ಮಾತ್ರ.
ಯಳಂದೂರು (ಅ.30): ಪವರ್ ಸ್ಟಾರ್ (Power Star) ಪುನೀತ್ ರಾಜ್‌ಕುಮಾರ್ (Puneeth Rajkumar) ತನ್ನ ಬಾಲ್ಯದ ದಿನಗಳನ್ನು ಕೆಸ್ತೂರು ಗ್ರಾಮದಲ್ಲಿ ಕಳೆದಿದ್ದರು. ಇನ್ನು ಕೆಸ್ತೂರು ಗ್ರಾಮದ ಜನರಿಗೆ ನೆನಪು ಮಾತ್ರ.
ಪುನೀತ್ ರಾಜ್‌ಕುಮಾರ್ ತಾಯಿ ಡಾ. ಪಾರ್ವತಮ್ಮ ರಾಜ್‌ಕುಮಾರ್ (Dr Parvathamma Rajkumar) ಅವರ ಸಹೋದರಿ ನಾಗಮ್ಮ ಕೆಸ್ತೂರು ಬಸವೇಗೌಡರನ್ನು ವಿವಾಹವಾಗಿದ್ದರಿಂದ ಪುನೀತ್ ರಾಜ್‌ಕುಮಾರ್ ತಮ್ಮ ಬಾಲ್ಯದ (Child hood days ) ದಿನಗಳನ್ನು ಕೆಸ್ತೂರು ಗ್ರಾಮದ ಚಿಕ್ಕಮ್ಮನ ಮನೆಯಲ್ಲಿ ಕಳೆದಿದ್ದರು.
ತಂದೆ ತಾಯಿಗೆ ತಕ್ಕ ಮಗ ಪುನೀತ್: ಸಾ.ರಾ ಗೋವಿಂದ್
ಕೆಸ್ತೂರು ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ಇಲ್ಲಿನ ಬಾವಿ ಕೆರೆಗಳಲ್ಲಿ ನೀರಿನಲ್ಲಿ ಅಟವಾಡಿ ಈಜು ಹೊಡೆದು ಸಂಭ್ರಮಿಸುತ್ತಿದ್ದರು. ಬಾಲ್ಯದಲ್ಲಿ ಅವರ ಗೆಳೆಯರಾದ ಮುರಳಿ ಜತೆ ತಮ್ಮ ಚಿಕ್ಕಮ್ಮನ ಮಕ್ಕಳ ಜತೆಯಲ್ಲಿ ತಮ್ಮ ಬಾಲ್ಯದ ಜೀವನ ಕಳೆದಿದ್ದರು. ಈಗ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ಅವರ ಚಿಕ್ಕಮ್ಮನ ಮಗ ಕುಮಾರ್ ಕಣ್ಣೀರು ಹಾಕಿದರು.
ತುಂಬಾ ಬಿಡುವಿನ ವೇಳೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಸಂಬಂಧಿಕರ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಅಲ್ಲಿ ಕೆಲ ಸಮಯ ಕಾಲ ಕಳೆಯುತ್ತಿದ್ದರು.
ಪೇರ್ ಸಿಂಗ್ ಮಠಕ್ಕೆ ಭೇಟಿ : ಪುನೀತ್ ರಾಜ್‌ಕುಮಾರ್ ಅವರು ಬಾಲ್ಯದಲ್ಲಿ ಯಳಂದೂರು ತಾಲುಕಿನ ಗುಮಬಳ್ಲಿ ಗ್ರಾಮದಲ್ಲಿರುವ ಪೇರ್‌ಸಿಂಗ್ ಮಠಕ್ಕೆ ಭೇಟಿ ನೀಡಿ ಪೂಜೆ ಮಾಡಿ ಅಶೀರ್ವಾದ ಪಡೆಯುತ್ತಿದ್ದರು. ಈಗಲೂ ನಾಗಮ್ಮ ಅವರು ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.
ಕಲಬುರಗಿ ಅಂದರೆ ಪಂಚಪ್ರಾಣ
ಕಲಬುರಗಿ(Kalaburagi) ಅಂದ್ರೆ ನನಗೆ ಪಂಚಪ್ರಾಣ, ಕಲಬುರಗಿಗೆ ಮತ್ತೆ ಮತ್ತೆ ಬರುವೆ, ಮುಂದಿನ ಸಿನಿಮಾದ ಚಿತ್ರೀಕರಣಕ್ಕೆ(Shooting) ಇದೇ ಊರನ್ನೇ ಆಯ್ದುಕೊಳ್ಳುವೆ, ಆಗ ಬಂದಾಗ ಗಾಣಗಾಪುರಕ್ಕೆ ಹೋಗಿ ದತ್ತ ಮಹಾರಾಜಾರ ನಿರ್ಗುಣ ಪಾದುಕೆ ಪೂಜಿಸುವೆ ಎಂದು ಹೇಳಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ವಿಧಿಯಾಟದಲ್ಲಿ ಬಾರದ ಊರಿಗೆ ತೆರಳಿದ್ದಾರೆ. ಈ ಬೆಳವಣಿಗೆ ಕಲಬುರಗಿಯಲ್ಲಿರೋ ಪುನೀತ್ ಅಭಿಮಾನಿಗಳನ್ನು ಕಣ್ಣೀರಾಗಿಸಿದೆ.
"
ಇಲ್ಲಿಗೆ ಬಂದು ಶೇಂಗಾ ಹೋಳಿಗೆ, ಜೋಳದ ರೊಟ್ಟಿ ಸವಿದು ಊಟದ(Food) ಬಗ್ಗೆ ಮೆಚ್ಚುಗೆ ಹೇಳಿದ್ದ ಪವರ್ ಸ್ಟಾರ್(Power Star) ಇಷ್ಟು ಬೇಗ ಬಾರದ ಊರಿಗೆ ಪಯಣ ಬೆಳೆಸುತ್ತಾರೆಂದು ಕನಸಲ್ಲೂ ಯೋಚಿಸಿರಲಿಲ್ಲ ಎಂದು ಕಲಬುರಗಿ ಮಂದಿ ಕಣ್ಣೀರು ಹಾಕುತ್ತಿದ್ದಾರೆ.
ದೊಡ್ಮನೆ ಹುಡುಗನ ಕಲಬುರಗಿ ನಂಟು:
ದೊಡ್ಮನೆ ಹುಡುಗ, ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ಗೂ ಕಲಬುರಗಿಗೂ ತುಂಬ ಹತ್ತಿರದ ನಂಟಿತ್ತು. ಇಲ್ಲಿನ ಅಫಜಲ್ಪೂರ ತಾಲೂಕಿನ ಸ್ಟೇಷನ್ ಗಾಣಗಾಪುರ ಗುತ್ತೇದಾರ್ ಕುಟುಂಬಕ್ಕೂ ದೊಡ್ಮನೆಗೂ(Dodmane) ನಂಟು. ಆ ನಂಟಿನಿಂದಲೇ ಪುನೀತ್ ಅವಕಾಶ ಸಿಕ್ಕಾಗೆಲ್ಲಾ ಕಲಬುರಗಿಗೆ ಬಂದು ಹೋಗುತ್ತಿದ್ದರು.
ಪುನೀತ್‌ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಜಗ್ಗೇಶ್ ಆಗ್ರಹ
ಕಳೆದ ಮಾರ್ಚ್ 21 ರಂದು ಪುನೀತ್ ರಾಜಕುಮಾರ್ ಕಲಬುರಗಿಗೆ ಆಗಮಿಸಿ ಅಭಿಮಾನಿಗಳನ್ನೆಲ್ಲ(Fans) ಭೇಟಿ ಮಾಡಿ ಕೈ ಕುಲುಕಿದ್ದರು. ತಾವು ನಟಿಸಿದ ಯುವರತ್ನ ಚಿತ್ರದ ಪ್ರಚಾರಕ್ಕಾಗಿ ಕಲಬುರಗಿಗೆ ಆಗಮಿಸಿದ್ದಾಗ ಸಾವಿರಾರು ಸಂಖ್ಯೆಯಲ್ಲಿ ಜನ ಇವರನ್ನು ಕಾಣಲು, ಮಾತನಾಡಿಸಲು ಇಲ್ಲಿ ಸೇರಿದ್ದರು.
ಇಲ್ಲಿರುವ ಶರಣಬಸವೇಶ್ವರ ಮಂದಿರದಲ್ಲಿ(Sharanabasaveshwara Temple) ಜನಜಾತ್ರೆಯೇ ಅಪ್ಪುವಿಗಾಗಿ ಸೇರಿತ್ತು. ಇಲ್ಲಿ ಅಭಿಮಾನಿಗಳೆಲ್ಲರೂ ಸೇರಿಕೊಂಡು ಗುಲಾಬಿ ಹೂವಿನ ಸುರಿಮಳೆ ಮಾಡಿದ್ದಲ್ಲದೆ ಅವರಿಗೆ ಶುಭ ಕೋರಿದ್ದರು. ಇದಕ್ಕೂ ಮುಂಚೆ ತಮ್ಮ ತಂದೆ ಡಾ. ರಾಜಕುಮಾರ್ ಜೊತೆಗೂ ಪುನೀತ್ ಕಲಬುರಗಿಗೆ ಆಗಮಿಸಿದ್ದರು. ಮಾಲೀಕಯ್ಯಾ ಗುತ್ತೇದಾರ್ ನೇತೃತ್ವದಲ್ಲಿ ಚಂದ್ರಸೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಡಾ. ರಾಜಕುಮಾರ್ ಜೊತೆಗೆ ಪುನೀತ್ ಭಾಗವಹಿಸಿದ್ದರು.
ಬಳ್ಳಾರಿ ಜೊತೆಗೂ ನಂಟು
ನಟ ಪುನೀತ್ ರಾಜಕುಮಾರ್(Puneeth Rajkumar) ಬಳ್ಳಾರಿ(Ballari) ಜತೆ ನಿರಂತರ ಒಡನಾಟ ಇಟ್ಟುಕೊಂಡಿದ್ದರು. ಹೀಗಾಗಿ ಬಳ್ಳಾರಿಗೆ ಹತ್ತಾರು ಬಾರಿ ಪುನೀತ್ ಭೇಟಿ ನೀಡಿದ್ದರು. ತಂದೆ ಡಾ. ರಾಜಕುಮಾರ್(Dr Rajkumar) ಅವರ ಜತೆ ಮಂತ್ರಾಲಯಕ್ಕೆ ತೆರಳುವಾಗ ಬಳ್ಳಾರಿಯಲ್ಲಿಳಿದು ತೆರಳುತ್ತಿದ್ದ ಪುನೀತ್ ಅವರು ತಂದೆ ನಿಧನ ನಂತರವೂ ಬಳ್ಳಾರಿ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದರು.
ಇನ್ನು ಸಿನಿಮಾ ಚಿತ್ರೀಕರಣ(Film Shooting), ಆಡಿಯೋ ರಿಲೀಸ್‌ಗೆ(Audio Release) ಸಾಕಷ್ಟು ಬಾರಿ ಪುನೀತ್ ಬಳ್ಳಾರಿಗೆ ಭೇಟಿ ನೀಡಿದ್ದನ್ನು ಇಲ್ಲಿನ ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಾರೆ. ಕಳೆದ ಮಾ. 23ರಂದು ‘ಯುವರತ್ನ’ ಸಿನಿಮಾ ಪ್ರಮೋಷನ್‌ಗೆ ಆಗಮಿಸಿದ್ದ ಪುನೀತ್ ರಾಜಕುಮಾರ್ ಬಳ್ಳಾರಿಯ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನಕ್ಕೆ(Temple) ತೆರಳಿ ಪೂಜೆ ಸಲ್ಲಿಸಿ, ಬಳಿಕ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಮನೆಗೆ ತೆರಳಿ ಊಟ ಮಾಡಿಕೊಂಡು ಚಿತ್ರದುರ್ಗಕ್ಕೆ ತೆರಳಿದ್ದರು. ಪುನೀತ್ ಬಳ್ಳಾರಿಗೆ ಭೇಟಿ ನೀಡಿದ್ದು ಇದೇ ಕೊನೆ ಎಂದು ಪುನೀತ್ ಅಭಿಮಾನಿ ಚಂದ್ರಶೇಖರ್ ಆಚಾರ್ ಕಪ್ಪಗಲ್ ಸ್ಮರಿಸಿಕೊಳ್ಳುತ್ತಾರೆ.