* ಹೆಲ್ಮೆಟ್ ಬಗ್ಗೆ ಜಾಗೃತಿ* ಬೆಂಗಳೂರು ನಗರದ ಪೊಲೀಸರಿಂದ ಅಭಿಯಾನ* ಪುನೀತ್ ಪತ್ನಿ ಅಶ್ವಿನಿ ಚಾಲನೆ
ಬೆಂಗಳೂರು(ಮಾ.17): ದ್ವಿಚಕ್ರ ವಾಹನಗಳ ಅಪಘಾತದಲ್ಲಿ(Accidents) ಸಾವಿನ ಪ್ರಮಾಣದ ಹೆಚ್ಚಿದ ಹಿನ್ನಲೆಯಲ್ಲಿ ‘ಹೆಲ್ಮೆಟ್’ ಕುರಿತು ಸಂಚಾರ ಪೊಲೀಸರು(Traffic Police) ಹಮ್ಮಿಕೊಂಡಿರುವ ‘ಗುಣಮಟ್ಟದ ಹೆಲ್ಮೆಟ್ ಧರಿಸೋಣ, ಪ್ರಾಣ ಉಳಿಸೋಣ’ ಜನ ಜಾಗೃತಿ ಅಭಿಯಾನಕ್ಕೆ ನಟ ಪುನೀತ್ ರಾಜ್‌ಕುಮಾರ್(Puneeth Rajkumar) ಪತ್ನಿ ಅಶ್ವಿನಿ ಬುಧವಾರ ಚಾಲನೆ ನೀಡಿದರು.
ನಗರದ ಇನ್ಫೆಂಟ್ರಿ ರಸ್ತೆಯಲ್ಲಿ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಸಾಂಕೇತಿಕವಾಗಿ ಕಾನ್‌ಸ್ಟೇಬಲ್ ಹಾಗೂ ಕೆಲ ಸಾರ್ವಜನಿಕರಿಗೆ ಹೆಲ್ಮೆಟ್ ವಿತರಿಸಿದ ಅಶ್ವಿನಿ(Ashwini Puneeth Rajkumar) ಅವರು, ಹೆಲ್ಮೆಟ್ ಧರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಅಭಿಯಾನದ ವಿಡಿಯೋದಲ್ಲಿ ನಟ ಶಿವರಾಜ್ ಕುಮಾರ್(Shivarj Kumar) ಹಾಗೂ ಪುನೀತ್ ರಾಜ್ ಕುಮಾರ್ ಅವರ ಸಂದೇಶವಿದೆ.
Puneeth Rajkumar Memory: ಸುರಿಯುವ ಹಿಮದಲ್ಲೂ ಅಪ್ಪು ನೆನೆಯುತ್ತಿರುವ ಕೊಪ್ಪಳದ ಯೋಧರು..!
ಹೆಲ್ಮೆಟ್ ಧರಿಸುವಂತೆ ಅಪ್ಪು ಸಂದೇಶ:
ಹೆಲ್ಮೆಟ್ ಕುರಿತು ಅಭಿಯಾನ(Helmet Campaign) ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಟ ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರು ನೀಡಿರುವ 1.2 ನಿಮಿಷಗಳ ವಿಡಿಯೋ ಸಂದೇಶವನ್ನು ಆಯುಕ್ತ ಕಮಲ್ ಪಂತ್(Kamal Pant) ಬಿಡುಗಡೆಗೊಳಿಸಿದರು. ಈ ವಿಡಿಯೋ ನೋಡಿ ಪುನೀತ್ ಪತ್ನಿ ಅಶ್ವಿನಿ ಸೇರಿದಂತೆ ಕಾರ್ಯಕ್ರಮದಲ್ಲಿ ನೆರೆದವರ ಕಣ್ಣಾಲಿಗಳು ತುಂಬಿದವು.
ದಯವಿಟ್ಟು ಟೂ ವ್ಹೀಲರ್ಸ್ಗಳನ್ನು ಹೆಲ್ಮೆಟ್ ಇಲ್ಲದೆ ಓಡಿಸಬೇಡಿ. ಟ್ರಾಫಿಕ್ ರೂಲ್ಸ್‌ಗಳನ್ನು ಫಾಲೋ ಮಾಡಿ. ಟೂವ್ಹೀಲರ್‌ಗಳಲ್ಲಿ ಹೆಲ್ಮೆಟ್ ಬಳಸೋದನ್ನು ದಯವಿಟ್ಟು ಮರೆಯಬೇಡಿ. ನಿಮ್ಮ ಹಿಂದೆ ಕುಳಿತವರಿಗೆ ಸಹ ಹೆಲ್ಮೆಟ್ ಹಾಕಿಸಿ. ಒಳ್ಳೆಯದಾಗಲಿ ಟೇಕ್ ಕೇರ್’ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಂದೇಶ ನೀಡಿದ್ದಾರೆ.
ಜೀವ ಅಮೂಲ್ಯ. ಬೈಕ್ ಚಲಾಯಿಸುವಾಗ ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್ ಬಳಸಿ ಜೀವ ಉಳಿಸಿ. ನಮ್ಮೆಲ್ಲರ ಪ್ರೀತಿಯ ಅಪ್ಪು ಇದನ್ನೇ ಹೇಳ್ತಾ ಇದ್ರು. ಅವರ ಮಾತನ್ನು ಗೌರವಿಸೋಣ. ಹೆಲ್ಮೆಟ್ ಜೀವ ರಕ್ಷಕ ಅಂತ ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್.ರವಿಕಾಂತೇಗೌಡ, ಸಂಚಾರ ಸುರಕ್ಷತೆ ಬಗ್ಗೆ ಪುನೀತ್ ಕಾಳಜಿ ಹೊಂದಿದ್ದರು. ಹೀಗಾಗಿ ಈ ಅಭಿಯಾನಕ್ಕೆ ಅವರನ್ನೇ ರಾಯಭಾರಿಯಾಗಿ ಆಯ್ಕೆ ಮಾಡಲು ಇಚ್ಛೆ ಇತ್ತು. ಆದರೆ ಸಾಧ್ಯವಾಗಲಿಲ್ಲ. ಹೆಲ್ಮಟ್ ಕುರಿತ ಅಭಿಯಾನವನ್ನು ಪುನೀತ್ ಅವರಿಗೆ ಅರ್ಪಿಸುತ್ತಿದ್ದೇವೆ ಎಂದು ಹೇಳಿದರು.
Viral News: ನಂದಿನಿ ಹಾಲಿನ ಪ್ಯಾಕೆಟ್‌ಗಳ ಮೇಲೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರ.?
ನನ್ನ ಜೀವನದಲ್ಲಿ ಬಹಳಷ್ಟುದೊಡ್ಡ ವ್ಯಕ್ತಿಗಳನ್ನು ಕಂಡಿದ್ದೇನೆ. ಕರ್ನಾಟದ ಜನಮಾನಸದಲ್ಲಿ ಪುನೀತ್ ಅವರಿಗೆ ವಿಶಿಷ್ಟಸ್ಥಾನವಿದೆ. ಸದಾ ಸಮಾಜದ ಒಳಿತಿಗೆ ಚಿಂತಿಸುತ್ತಿದ್ದ ಪುನೀತ್ ಅವರು, ಅಪಾರ ಜನಪರ ಕಾಳಜಿ ಹೊಂದಿದ್ದರು. ರಸ್ತೆ ಸುರಕ್ಷತೆ ಕುರಿತು ಅವರ ಸಂದೇಶವನ್ನು ಪಾಲಿಸುವ ಮೂಲಕ ಗೌರವ ಸಲ್ಲಿಸೋಣ ಅಂತ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಅಪ್ಪು ನೆನಪಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆ!
ಬೆಂಗಳೂರು: ಸಾವಿರಾರು ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡುವ ಮೂಲಕ ಪುನೀತ್ ರಾಜ್‌ಕುಮಾರ್ ಅವರ ಆದರ್ಶಗಳನ್ನು ಜೀವಂತವಿರಿಸಿದ್ದಾರೆ ಎಂದು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ (V Somanna) ತಿಳಿಸಿದ್ದರು
ಜ.30 ರಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ಬಿಬಿಎಂಪಿ ಕಚೇರಿಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸವಿನೆನಪಿಗಾಗಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣವನ್ನು ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಟ ಪುನೀತ್ ತಮ್ಮ ಸಾವಿನ ಬಳಿಕವೂ ಸಾಕಷ್ಟು ಜನರಿಗೆ ಪ್ರೇರಣೆಯಾಗಿದ್ದಾರೆ. ಅವರ ಅಕಾಲಿಕ ನಿಧನದ ಬಳಿಕ ಅವರ ಸಾವಿರಾರು ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡುವ ಮೂಲಕ ನಟನೊಬ್ಬನ ಆದರ್ಶಗಳನ್ನು ಜೀವಂತವಿರಿಸಿದ್ದಾರೆ ಎಂದು ತಿಳಿಸಿದ್ದರು.
