Asianet Suvarna News Asianet Suvarna News

ಮಂಡ್ಯದಲ್ಲಿ ಮತ್ತೋರ್ವ ಅಪ್ಪು ಅಭಿಮಾನಿ ಸಾವು : 7ಕ್ಕೇರಿದ ಮೃತರ ಸಂಖ್ಯೆ

  •  ಪುನೀತ್ ಹಠಾತ್ ನಿಧನದಿಂದ ಆಘಾತಕ್ಕೆ ಮತ್ತೋರ್ವ ಅಭಿಮಾನಿ ಸಾವನ್ನಪ್ಪಿದ್ದಾರೆ. 
  • ಪುನೀತ್ ನಿಧನದಿಂದ ಸಾವಿಗೀಡಾದವರ ಸಂಖ್ಯೆ 7ಕ್ಕೆ ಏರಿಕೆ
Puneeth Rajkumar Fan Died From shock in mandya snr
Author
Bengaluru, First Published Oct 31, 2021, 12:06 PM IST
  • Facebook
  • Twitter
  • Whatsapp

ಮಂಡ್ಯ (ಅ.31):  ಪುನೀತ್ ಹಠಾತ್ ನಿಧನದಿಂದ ಆಘಾತಕ್ಕೆ ಮತ್ತೋರ್ವ ಅಭಿಮಾನಿ ಸಾವನ್ನಪ್ಪಿದ್ದಾರೆ.  ಇದರಿಂದ ಪವರ್ ಸ್ಟಾರ್ ಪುನೀತ್ ನಿಧನದ ನೋವು ತಡೆಯಲಾಗದೆ ಸಾವಿಗೀಡಾದವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. 

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ಕೆ.ಎಂ.ರಾಜೇಶ್ (50) ಮೃತಪಟ್ಟ ಮತ್ತೊಬ್ಬ ಅಭಿಮಾನಿಯಾಗಿದ್ದಾರೆ.  ಪುನೀತ್ ನಿಧನದ ಬಳಿಕ ಸರಿಯಾಗಿ ಊಟ ಸೇವಿಸದೇ ಅಸ್ವಸ್ಥರಾಗಿದ್ದರು. 

ನಿನ್ನೆ ಅಂತಿಮ ದರ್ಶನಕ್ಕೆ ಹೋಗುವುದಾಗಿ ಮನೆ ಬಿಟ್ಟಿದ್ದ ರಾಜೇಶ್ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಸುಸ್ತಾಗಿ ಬಿದ್ದಿದ್ದರು.  ಸಂಜೆ ಪರಿಚಯಸ್ಥರು ನೋಡಿ ಮನೆಗೆ ಕರೆದುಕೊಂಡು ಹೋಗಿ ವೈದ್ಯರಿಂದ ಚಿಕಿತ್ಸೆಯನ್ನೂ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯ ರಾತ್ರಿ 12 ಗಂಟೆಯಲ್ಲಿ ಮೃತಪಟ್ಟಿದ್ದಾರೆ. 

ಅಪ್ಪು ಅಂತ್ಯಕ್ರಿಯೆ ಮುಕ್ತಾಯ : ಮೂರು ದಿನ ಸಾರ್ವಜನಿಕರಿಗಿಲ್ಲ ಪ್ರವೇಶ

ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿದ್ದ ರಾಜೇಶ್ ಡಾ. ರಾಜ್ ಕುಮಾರ್ ಎಂದು ಹೆಸರಿಟ್ಟು ಹೋಟೆಲ್ ನಡೆಸುತ್ತಿದ್ದರು. ಆದರೆ ಪುನೀತ್ ನಿಧನದಿಂದ ಆಘಾತಕ್ಕೆ ಒಳಗಾಗಿ ತೀವ್ರ ಅಸ್ವಸ್ಥರಾಗಿದ್ದರು. 

ಆ ಮೂಲಕ ಮಂಡ್ಯದಲ್ಲಿ ಪುನೀತ್ ನಿಧನದಿಂದ ಅಭಿಮಾನಿಗಳ ಸಾವಿನ ಸಂಖ್ಯೆ ಎರಡಕ್ಕೇರಿದೆ. ನಿನ್ನೆ ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದ ವೈ.ಎಸ್.ಸುರೇಶ್ ಹೃದಯಾಘಾತದಿಂದ ಮೃತಪಟ್ಟಿದ್ದರು.

ವಿವಿಧ ಜಿಲ್ಲೆಗಳಲ್ಲಿ ಅಭಿಮಾನಿಗಳ ಸಾವು

 ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​  (Pneeth Rajkumar)ಅವರ ಸಾವಿನಿಂದ  ರಾಜದ ವಿವಿಧ ಜಿಲ್ಲೆಗಳಲ್ಲಿ ವಿದ್ರಾವಕ ಘಟನೆಗಳು ಹೆಚ್ಚುತ್ತಲೇ ಇವೆ. ಹೌದು... ಪುನೀತ್ ​ ಸಾವಿನಿಂದ (Puneeth Death) ಆಘಾತಕ್ಕೆ ಒಳಗಾಗಿ ಕೊಪ್ಪಳ(Koppal), ಬೆಳಗಾವಿಯಲ್ಲಿ (Belagavi) ಅಭಿಮಾನಿಗಳಿಗೆ ಹೃದಯ ಒಡೆದು ಹೋಗಿದೆ. ಮತ್ತೊಂದೆಡೆ ರಾಯಚೂರು ಜಿಲ್ಲೆಯಲ್ಲಿ ಪುನೀತ್ ಅಭಿಮಾನಿಗಳು (fans) ಆತ್ಮಹತ್ಯೆ (suicide)ಯತ್ನಿಸಿರುವ ಘಟನೆ ನಡೆದಿದೆ. ಇಂದು ಮಂಡ್ಯದ ಅಭಿಮಾನಿ ಸೇರಿ ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಪುತ್ರಿಯಿಂದಲ್ಲ ಅಭಿಮಾನಿಗಳಿಗೋಸ್ಕರ ನಾಳೆ ಅಂತ್ಯಕ್ರಿಯೆ ಮಾಡುತ್ತೇವೆ: ರಾಕ್‌ಲೈನ್‌ ವೆಂಕಟೇಶ್

ಕೊಪ್ಪಳದ ಅಭಿಮಾನಿ
ಜ್ಞಾನಮುರ್ತಿ ತಿಮ್ಮಣ್ಣ, ಮೃತ ದುರ್ದೈವಿ. ಕೊಪ್ಪಳದ ಚಿಕ್ಕ ಬಗನಾಳ ಗ್ರಾಮದಲ್ಲಿ  ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಜ್ಞಾನಮೂರ್ತಿ ಪುನೀತ್ರ ಅಪ್ಪಟ ಅಭಿಮಾನಿಯಾಗಿದ್ದರು. ನಿನ್ನೆ(ಅ.29) ನೆಚ್ಚಿನ ನಟನ ಅಗಲಿಕೆಯ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದರು. 

ಅದೇ ದುಃಖದಲ್ಲೇ ಮಲಗಿದ್ದ ಅಭಿಮಾನಿ ಇಂದು (ಅ.30) ಬೆಳಗಿನ ಜಾವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.  ಕಿರಾಣಿ ಅಂಗಡಿಯಲ್ಲಿ ಸದಾ ಪುನೀತ್ ರಾಜ್‍ಕುಮಾರ್ ಹಾಡುಗಳನ್ನು ಕೇಳುತ್ತಿದ್ದರು. ಪುನೀತ್ ರಾಜ್‍ಕುಮಾರ್ ರ ಬಹುತೇಕ ಸಿನಿಮಾಗಳನ್ನು‌ ಫಸ್ಟ್ ಶೋ ನೋಡುತ್ತಿದ್ದರು. ನಮ್ಮ ನೆಚ್ಚಿನ ನಟ ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಿದ್ದಂತೆ ಹೃದಯ ಬಡಿತವೇ ನಿಂತು ಹೋಗಿದೆ. 

ರಾಯಚೂರಿನಲ್ಲಿ ಆತ್ಮಹತ್ಯೆಗೆ ಯತ್ನ
ನಮ್ಮ ನೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅಗಲಿಕೆಯಿಂದ ನೊಂದ ಅಭಿಮಾನಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಂಧನೂರು ತಾಲೂಕಿನ ಅರಾಪುರದ ಬಸನಗೌಡ (22) ಹಾಗೂ ಯಾಪಲಪರ್ವಿಯ ಮೊಹಮ್ಮದ್ ರಫಿ (25) ಶುಕ್ರವಾರ ರಾತ್ರಿ ವಿಷ ಸೇವಿಸಿ ಆತ್ನಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಇಬ್ಬರನ್ನು ಸಿಂಧನೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಮರಾಜನಗರದ ಅಭಿಮಾನಿ ಸಾವು
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾವಿನ ಸುದ್ದಿ ನಿಜಕ್ಕೂ ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಅಕ್ಟೋಬರ್ 29 ಅವರ ದಿಢೀರ್ ಸಾವಿನ ಸುದ್ದಿ ಕೇಳಿ ಚಾಮರಾಜನಗರದಲ್ಲಿ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದರು.

ಬೆಳಗಾವಿಯಲ್ಲಿ ಇಬ್ಬರು ಸಾವು
ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಅಭಿಮಾನಿಗಳು ತಮ್ಮ ಜೀವ ಕಳೆದುಕೊಂಡಿದ್ದಾರೆ.   ಅಥಣಿ ಪಟ್ಟಣದ ರಾಹುಲ್ ಗಾಡಿವಡ್ಡರ (26), ಪುನೀತ್ ರಾಜ್‌ಕುಮಾರ್ ಅವರ ನಿಧನದಿಂದ ಉಂಟಾದ ತೀವ್ರ ದುಃಖದಿಂದ ಶುಕ್ರವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುಂಚೆ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದ ರಾಹುಲ್, ಅವರ ಸಾವಿನಿಂದ ಮನನೊಂದಿದ್ದರು ಎನ್ನಲಾಗಿದೆ.

ಬೆಳಗಾವಿಯ ಪರಶುರಾಮ್
ಬೆಳಗಾವಿಯ ಶಿಂದೋಳ್ಳಿ ಗ್ರಾಮದಲ್ಲಿ ಪುನೀತ್ ಅವರ ಮತ್ತೊಬ್ಬ ಅಭಿಮಾನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪರಶುರಾಮ್ ದೇಮಣ್ಣನವರ್ ಅವರು ಪುನೀತ್ರ ಕಟ್ಟಾ ಅಭಿಮಾನಿಯಾಗಿದ್ದು, ಪುನೀತ್ರ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡಿ ಅಳುತ್ತಿದ್ದರು. ಈ ವೇಳೆ ತೀವ್ರ ಹೃದಯಾಘಾತಕ್ಕೊಳಗಾಗಿ ಅಕ್ಟೋಬರ್ 29ರ ಶುಕ್ರವಾರ ರಾತ್ರಿ 11 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.

Follow Us:
Download App:
  • android
  • ios