Asianet Suvarna News Asianet Suvarna News

ಅಪ್ಪು ಅಂತ್ಯಕ್ರಿಯೆ ಮುಕ್ತಾಯ : ಮೂರು ದಿನ ಸಾರ್ವಜನಿಕರಿಗಿಲ್ಲ ಪ್ರವೇಶ

  • ಹೃದಯಾಘಾತದಿಂದ ನಿಧನರಾದ ಕರುನಾಡ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ಇಂದು ಮುಕ್ತಾಯ
  • ಮಂಗಳವಾರ ಕುಟುಂಬಸ್ಥರಿಗೆ ಮಾತ್ರ ಹಾಲು ತುಪ್ಪಕ್ಕೆ ಅವಕಾಶ 
Section 144   3 Days Restricted public to Enter Kanteerava studio snr
Author
Bengaluru, First Published Oct 31, 2021, 10:49 AM IST

 ಬೆಂಗಳೂರು (ಅ.31): ಹೃದಯಾಘಾತದಿಂದ ನಿಧನರಾದ ಕರುನಾಡ ಕಣ್ಮಣಿ ಪವರ್ ಸ್ಟಾರ್ (Power star) ಪುನೀತ್ ರಾಜ್ ಕುಮಾರ್ (Puneeth Rajkumar) ಅಂತ್ಯಕ್ರಿಯೆ ಇಂದು ಮುಕ್ತಾಯ ಹಿನ್ನೆಲೆ ಮಂಗಳವಾರ ಕುಟುಂಬಸ್ಥರಿಗೆ ಮಾತ್ರ ಹಾಲು ತುಪ್ಪಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ಸಾರ್ವಜನಿಕರಿಗೆ (Publics) ಅವಕಾಶ ನೀಡಲಾಗುತ್ತಿಲ್ಲ. 

"

ಕಂಠೀರವ ಸ್ಟುಡಿಯೋ (Kantirava Studeo) ಸುತ್ತಮುತ್ತ ನಿಷೇದಾಜ್ಞೆ ಜಾರಿಗೊಳಿಸಲಾಗುತ್ತಿದ್ದು,  ಇನ್ನು ಮೂರು ದಿನ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.  144 ಸೆಕ್ಷನ್ (Section 144) ಜಾರಿ ಮಾಡಲು ನಗರ ಪೊಲೀಸ್ (Police) ಆಯುಕ್ತರು ಸೂಚನೆ ನೀಡಿದ್ದಾರೆ.

ಪುಣ್ಯಲೋಕಕ್ಕೆ ಪುನೀತ್; ಕಂಠೀರವ ಎದುರು ಕಣ್ಣೀರಿಟ್ಟ ಅಭಿಮಾನಿಗಳು

ಸ್ಟುಡಿಯೋ ಸುತ್ತಮುತ್ತ ಸಾರ್ವಜನಿಕವಾಗಿ ಗುಂಪು ಸೇರುವಂತಿಲ್ಲ.ಮೂರು ದಿನ ಬಳಿಕವಷ್ಟೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಬೆಂಗಳೂರು (Bengaluru) ಜಿಲ್ಲಾಧಿಕಾರಿ ಮಂಜುನಾಥ್ (DC Manjunath) ಹೇಳಿದ್ದಾರೆ. 

ಇನ್ನೂ ಎರಡು ದಿನಗಳು ಸಾರ್ವಜನಿಕರಿಗೆ ಅವಕಾಶವಿಲ್ಲ. ಕುಟುಂಬಸ್ಥರು  ಅವರ ಸಂಪ್ರದಾಯವನ್ನು ಮುಂದುವರೆಸಬೇಕಿದೆ. ಕುಟುಂಬದವರು ಐದನೇ ದಿನ ಹಾಲು ತುಪ್ಪ ಬಿಡುತ್ತೇವೆ ಎಂದು ಹೇಳಿದ್ದಾರೆ.  ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸೂಚಿಸಿದ್ದಾರೆ.  

ಈ ಕಂಠೀರವ ಸ್ಟುಡಿಯೋ ಜಾಗ ತುಂಜಾ ಚಿಕ್ಕದಿದೆ. ಎಲ್ಲಾ ವ್ಯವಸ್ಥೆಯನ್ನು ಅಭಿಮಾನಿಗಳಿಗೆ ಮಾಡುತ್ತೇವೆ.  ಇಷ್ಟು ದಿನದವರೆಗೂ ಎಲ್ಲರೂ ಸಹಕಾರ ನೀಡಿದ್ದೀರಿ ಮಾಧ್ಯಮಗಳು, ಸಾರ್ವಜನಿಕರು, ಅಭಿಮಾನಿಗಳು ಎಲ್ಲರಿಗೂ ಧನ್ಯವಾದಗಳು.  ಸಧ್ಯಕ್ಕೆ ಎಷ್ಟು ಲಕ್ಷ ಜನ ಬಂದಿದ್ದರಿ ಎನ್ನುವ ಸರಿಯಾದ ಮಾಹಿತಿ ಇಲ್ಲ. ಮುಂದೆ ತಿಳಿಸುತ್ತೇವೆ ಎಂದು  ಬೆಂಗಳೂರು (Bengaluru) ಜಿಲ್ಲಾಧಿಕಾರಿ  ಮಂಜುನಾಥ್ ಹೇಳಿದರು. 

ಗೃಹ ಸಚಿವರಿಂದ ಸಾರ್ವಜನಿಕರಿಗೆ ಧನ್ಯವಾದ

ಕನ್ನಡ ಚಿತ್ರರಂಗದ ಮುಕುಟ ಮಣಿ ಆಗಿದ್ದ  ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಹಾಗೂ ವಿಧಿ ವಿಧಾನಗಳು, ಅತ್ಯಂತ ಶಾಂತಿಯುತವಾಗಿ, ಸಕಲ ಸರಕಾರಿ ಗೌರವಳೊಂದಿಗೆ ನೆರವೇರಿದೆ. 

ನೆಚ್ಚಿನ ನಟನ ಅಕಾಲಿಕ ನಿಧನದ ಇಂಥಹ ಒಂದು ದುಃಖದ ಸಂಧರ್ಬದಲ್ಲಿ, ಸಾರ್ವಜನಿಕರು, ಅತ್ಯಂತ,  ಶಾಂತಿ ಹಾಗೂ ತಾಳ್ಮೆಯನ್ನು, ಪ್ರದರ್ಶಿಸಿ, ಅಗಲಿದ ಚೈತನ್ಯಕ್ಕೆ, ಲಕ್ಷಾಂತರ ಜನರು,  ಗೌರವ ಸಲ್ಲಿಸಿದ್ದಾರೆ.

ಅತ್ಯಂತ ಶಿಸ್ತು ಬದ್ಧವಾಗಿ, ಎಷ್ಟೇ ಕಷ್ಟ ಗಳಿದ್ದರೂ, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ನಿಭಾಯಿಸಿದ, ನಮ್ಮ ಪೊಲೀಸ್, ಬಿ ಬಿ ಎಂ ಪಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು, ಹಾಗೂ ಇತರರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ಎಂದು ಗೃಹ ಸಚಿವರು , ತಿಳಿಸಿದ್ದಾರೆ.

ಮಣ್ಣಲ್ಲಿ ಮಣ್ಣಾದ ಅಪ್ಪು

 

 ರಾಷ್ಟ್ರಪ್ರಶಸ್ತಿ ವಿಜೇತ ನಟ, ಪವರ್‌ ಸ್ಟಾರ್‌ (Puneeth Rajkumar) ಪುನೀತ್‌ರಾಜ್‌ಕುಮಾರ್‌ ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿನ (Kaneerava Studio) ತಂದೆ ಡಾ. ರಾಜ್‌ಕುಮಾರ್‌ (Dr Rajkumar) ಹಾಗೂ ತಾಯಿ ಪಾರ್ವತಮ್ಮ (Parvatamma Rajkumar) ಅವರ ಸಮಾಧಿಯ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಈಡಿಗ (Idiga) ಸಂಪ್ರದಾಯದಂತೆ ಭಾನುವಾರ ನಡೆದಿದೆ.

"

 ಕಂಠೀರವ ಕ್ರೀಡಾಂಗಣದಿಂದ ಭಾನುವಾರ ಬೆಳಗ್ಗೆ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ಅಂತಿಮಯಾತ್ರೆ ಮೂಲಕ ಕರೆತಂದಿದ್ದು, ಬಳಿಕ ವೀರ ಕನ್ನಡಿಗರ ಗಣ್ಯರು ಹಾಗೂ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar) ಪುತ್ರ ವಿನಯ್‌ ರಾಜ್‌ಕುಮಾರ್‌ (Vinay Rajkumar) ಅವರು ಅಂತಿಮ ವಿಧಿ ವಿಧಾನಗಳನ್ನು (last Rites) ನೆರವೇರಿಸಿದ್ದಾರೆ.

"

ಮೂರು ವರ್ಷದ ಹಿಂದೆಯಷ್ಟೇ ಗೋವಿಂದ ನಾಮ ಸ್ಮರಣೆಯೊಂದಿಗೆ ದಾಸಯ್ಯನ ಪದ್ಧತಿಯಂತೆ ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ತಾಯಿಯ ಅಂತ್ಯ ಸಂಸ್ಕಾರ ನಡೆಸಿದ್ದರು. ಹಠಾತ್‌ ಹೃದಯ ಸ್ತಂಭನದಿಂದ ಅಕಾಲಿಕ ನಿಧನ ಹೊಂದಿರುವ ಪುನೀತ್‌ ಅವರು ತಂದೆ, ತಾಯಿ ಪಕ್ಕದಲ್ಲೇ ಚಿರಸ್ಥಾಯಿಯಾಗಲಿದ್ದಾರೆ. ಪುನೀತ್‌ ಅವರ ಅಂತ್ಯ ಸಂಸ್ಕಾರವು ಹಿಂದೂ ಸಂಪ್ರದಾಯದಂತೆ ನೆರವೇರಲಿದ್ದು, ಗೋವಿಂದ ನಾಮಸ್ಮರಣೆಯಲ್ಲಿ ಕರುನಾಡಿನ ಯುವರತ್ನ ಭೂ-ತಾಯಿ ಮಡಿಲು ಸೇರಿದ್ದಾರೆ.'

"

ಈ ಮೊದಲು ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿಯ ಪುನೀತ್‌ ಫಾಮ್‌ರ್‍ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಡಾ. ರಾಜ್‌ಕುಮಾರ್‌ ಅವರ ಕಿರಿಯ ಪುತ್ರ ತಂದೆ ಹಾಗೂ ತಾಯಿ ಪಕ್ಕದಲ್ಲೇ ಇರಲಿ ಎಂದು ಕುಟುಂಬಸ್ಥರು ಎಂದು ಅಭಿಪ್ರಾಯಪಟ್ಟಿದ್ದರು. ಅವರ ಅಭಿಪ್ರಾಯಕ್ಕೆ ಗೌರವ ನೀಡಿರುವ ಸರ್ಕಾರ ಕಂಠೀರವ ಸ್ಟುಡಿಯೋದಲ್ಲೇ ಅಂತ್ಯಕ್ರಿಯೆ ನಡೆಸಲು ಒಪ್ಪಿಕೊಂಡಿದ್ದು, ಸರ್ಕಾರದಿಂದ ಅಧಿಕೃತ ಆದೇಶವನ್ನೂ ಹೊರಡಿಸಿತ್ತು.

"

ಪುನೀತ್‌ ಕಣ್ಣಿಂದ 4 ಮಂದಿಗೆ ದೃಷ್ಟಿನೀಡಲು ಸಿದ್ಧತೆ

ಭಾನುವಾರ ಮಣ್ಣಲ್ಲಿ ಮಣ್ಣಾಗಲಿರುವ ಪವರ್‌ ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಅವರು ಭಕ್ತ ಕಣ್ಣಪ್ಪನಾಗಿ ಮೂರ್ನಾಲ್ಕು ಮಂದಿ ಅಂಧರಿಗೆ ಸುಂದರ ಪ್ರಪಂಚ ನೋಡುವ ‘ಪ್ರೇಮದ ಕಾಣಿಕೆ’ ನೀಡಲಿದ್ದಾರೆ.

ನಾರಾಯಣ ನೇತ್ರಾಲಯವು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪುನೀತ್‌ ಅವರ ಕಣ್ಣುಗಳಿಂದ ಮೂರ್ನಾಲ್ಕು ಮಂದಿಗೆ ದೃಷ್ಟಿನೀಡಲು ಪ್ರಯತ್ನ ಶುರು ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪುನೀತ್‌ ಮಣ್ಣಲ್ಲಿ ಮಣ್ಣಾಗುವ ವೇಳೆಗೆ ಅವರ ಕಣ್ಣುಗಳು ಮೂರ್ನಾಲ್ಕು ಮಂದಿಗೆ ಸುಂದರ ಪ್ರಪಂಚ ತೋರುವ ಸಾಧ್ಯತೆ ಇದೆ.

"

ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ.ಭುಜಂಗಶೆಟ್ಟಿ, ಪುನೀತ್‌ ಅವರ ದಾನ ಮಾಡಿದ ಕಣ್ಣುಗಳನ್ನು ಅಳವಡಿಸಲು ಮೂರ್ನಾಲ್ಕು ಮಂದಿಗೆ ಬರಲು ಸೂಚಿಸಿದ್ದೇವೆ. ಕಣ್ಣುಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ಒಂದೇ ಕಣ್ಣನ್ನು ಇಬ್ಬರಿಗೆ ಅಳವಡಿಕೆ ಮಾಡಬಹುದಾದ ಅತ್ಯಾಧುನಿಕ ತಂತ್ರಜ್ಞಾನ ಬಂದಿದೆ. ಇದರ ಸಹಕಾರದಿಂದ ಕಣ್ಣಿನ ಮುಂಭಾಗ ಹಾನಿಗೊಳಗಾದವರಿಗೆ ಮುಂಭಾಗ ಹಾಗೂ ಹಿಂಭಾಗ ಹಾನಿಗೊಳಗಾದವರಿಗೆ ಹಿಂಭಾಗ ಅಳವಡಿಕೆ ಮಾಡಲು ಚಿಂತನೆ ನಡೆಸಿದ್ದೇವೆ. ಈ ಮೂಲಕ ಮೂರ್ನಾಲ್ಕು ಮಂದಿಗೆ ದೃಷ್ಟಿನೀಡಲು ಯೋಚಿಸಿದ್ದೇವೆ. ಭಾನುವಾರ ಈ ಸಂಬಂಧ ಅಂತಿಮ ಪ್ರಕ್ರಿಯೆ ನಡೆಯಲಿದೆ. ಭಾನುವಾರ ಪುನೀತ್‌ ಅವರ ಅಂತ್ಯಸಂಸ್ಕಾರ ಮುಗಿದ ಬಳಿಕ ನಾವೇ ಖುದ್ದು ಎಲ್ಲಾ ಮಾಹಿತಿಯನ್ನೂ ಒದಗಿಸುತ್ತೇವೆ ಎಂದು ಹೇಳಿದ್ದಾರೆ.

ಪುನೀತ್‌ ಸಾವಿನ ಆಘಾತದಿಂದ ಐವರು ಬಲಿ

"

ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ನಿಧನದ ಸುದ್ದಿ ತಿಳಿದು ರಾಜ್ಯದ ವಿವಿಧೆಡೆ ಶನಿವಾರ ಮೂವರು ಅಭಿಮಾನಿಗಳು ಹೃದಯಾಘಾತದಿಂದ ಮೃತಪಟ್ಟಿದ್ದು, ಒಬ್ಬ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಸಾವಿಗೀಡಾದವರ ಒಟ್ಟು ಸಂಖ್ಯೆ 5ಕ್ಕೇರಿದೆ.

ಶುಕ್ರವಾರವಷ್ಟೇ ಚಾಮರಾಜನಗರ ಜಿಲ್ಲೆಯ ಹನೂರು ವ್ಯಾಪ್ತಿಯ ಪೊನ್ನಾಚಿ ಗ್ರಾಮದ ನಿವಾಸಿ ಮುನಿಯಪ್ಪ(28) ಅವರು ಪುನೀತ್‌ ನಿಧನದ ಸುದ್ದಿ ತಿಳಿದು ಹೃದಯಾಘಾತದಿಂದ ಮೃತಪಟ್ಟಿದ್ದರು. ರಾಯಚೂರು ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಯುವಕರು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ರಕ್ಷಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

 

Follow Us:
Download App:
  • android
  • ios