Puneeth Rajkumar: ಪವರ್ ಸ್ಟಾರ್ ಅಪ್ಪು ಅನಘ್ರ್ಯ ರತ್ನ: ಬಾಲಚಂದ್ರ ಜಾರಕಿಹೊಳಿ

ಕೆಎಂಎಫ್‌ ನಂದಿನಿ ರಾಯಭಾರಿಯಾಗಿದ್ದ ನಟ ದಿವಂತ ಪುನೀತ್‌ ರಾಜಕುಮಾರ್‌ ಅವರು ಅಗಲಿದ್ದರೂ ಅವರ ನೆನಪು ಜನರ ಹೃದಯದಲ್ಲಿ ಶಾಶ್ವತವಾಗಿರುತ್ತದೆ. ಅವರು ಕರ್ನಾಟಕದ ಅನಘ್ರ್ಯ ರತ್ನ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Puneet Rajkumar is an Incomparable Gem Says KMF President Balachandra Jarakiholi gvd

ಬೆಂಗಳೂರು (ಮಾ.18): ಕೆಎಂಎಫ್‌ (KMF) ನಂದಿನಿ ರಾಯಭಾರಿಯಾಗಿದ್ದ ನಟ ದಿವಂತ ಪುನೀತ್‌ ರಾಜ್‌ಕುಮಾರ್‌ (Puneet Rajkumar) ಅವರು ಅಗಲಿದ್ದರೂ ಅವರ ನೆನಪು ಜನರ ಹೃದಯದಲ್ಲಿ ಶಾಶ್ವತವಾಗಿರುತ್ತದೆ. ಅವರು ಕರ್ನಾಟಕದ ಅನಘ್ರ್ಯ ರತ್ನ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarakiholi) ಹೇಳಿದ್ದಾರೆ. ಕೆಎಂಎಫ್‌ ಪ್ರಧಾನ ಕಚೇರಿಯಲ್ಲಿ ಗುರುವಾರ ದಿ. ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೆಎಂಎಫ್‌ ಬೆಳವಣಿಗೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಪಾತ್ರ ಹಿರಿದಾಗಿತ್ತು. 

ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಸ್ವಯಂ ಪ್ರೇರಿತವಾಗಿ ನಮ್ಮ ಸಂಸ್ಥೆಯ ನೌಕರರು ರಕ್ತದಾನ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಎಂಎಫ್‌ ರಾಜ್ಯದ ಎಲ್ಲ ವರ್ಗಗಳ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ರುಚಿ, ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಂದಿನಿ ಬ್ರ್ಯಾಂಡ್‌ ಅಡಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಒದಗಿಸುತ್ತಿದೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿಯೂ ನಮ್ಮ ನಂದಿನಿ ಬ್ರ್ಯಾಂಡ್‌ ಗ್ರಾಹಕರ ಆಯ್ಕೆಯಾಗಿದೆ ಎಂದು ಹೇಳಿದರು.

Shiva Rajkumar: ಫಿಲಂ ಸಿಟಿಗೆ ಅಪ್ಪು ಹೆಸರಿಟ್ಟರೆ ಸಂತೋಷ, ಒತ್ತಾಯ ಮಾಡಲ್ಲ

ಪುನೀತ್‌ ರಾಜ್‌ಕುಮಾರ್‌ ಅವರಿಗೆ ಶೀಘ್ರದಲ್ಲಿಯೇ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶಿಫಾರಸು ಮಾಡಿದ್ದಾರೆ ಎಂದರು. ಮೇರು ನಟ ಡಾ ರಾಜ್‌ಕುಮಾರ್‌ ಅವರ ಕುಟುಂಬದ ಪರವಾಗಿ ಹಿರಿಯ ನಟ ರಾಮಕುಮಾರ್‌ ಅವರ ಪುತ್ರಿ ಹಾಗೂ ಚಿತ್ರ ನಟಿ ಧನ್ಯಾ ರಾಮಕುಮಾರ್‌ ಅವರು ಆಗಮಿಸಿ ಕೆಎಂಎಫ್‌ ಹಮ್ಮಿಕೊಂಡಿರುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ದೇಶಗಳನ್ನು ಪ್ರಶಂಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಕಾ.ಪು. ದಿವಾಕರ ಶೆಟ್ಟಿ, ಶ್ರೀಶೈಲಗೌಡ ಪಾಟಿಲ, ನಂಜುಂಡಸ್ವಾಮಿ, ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ. ಸತೀಶ್‌ ಸೇರಿದಂತೆ ಹಲವರು ಹಾಜರಿದ್ದರು.

ಫಸ್ಟ್‌ ಶೋ ನೋಡಿದ ರಾಘಣ್ಣ: ವೀರೇಶ್‌ ಥಿಯೇಟರ್‌ನಲ್ಲಿ ಫಸ್ಟ್‌ ಡೇ ಫಸ್ಟ್‌ ಶೋವನ್ನು ಅಭಿಮಾನಿಗಳೊಂದಿಗೆ ನೋಡಿದ ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar), ‘ಇಷ್ಟೊಂದು ಜನ ಎದೆಯೊಳಗೆ ಅಪ್ಪುವನ್ನು ಇಟ್ಟುಕೊಂಡು ಬಂದಿದ್ದಾರೆ, ಹೀಗಿರುವಾಗ ಅಪ್ಪು ಇಲ್ಲ ಅಂತ ನಾನು ಹೇಗೆ ಹೇಳಲಿ, ಈ ವೀರೇಶ್‌ ಚಿತ್ರಮಂದಿರದಲ್ಲಿ ನಮ್ಮ ತಂದೆ ರಾಜ್‌ಕುಮಾರ್‌ ಅವರು ನಾವು ಮೂರೂ ಜನ ಮಕ್ಕಳ ಮೊದಲ ಸಿನಿಮಾದ ಶೋಗಳನ್ನ ನೋಡುತ್ತಿದ್ದರು. ಇವತ್ತೂ ಇಲ್ಲಿ ಅಪ್ಪ ಹಾಗೂ ಅಪ್ಪು ನಮ್ಮ ಜೊತೆಗೆ ಕೂತು ಸಿನಿಮಾ ನೋಡುತ್ತಿದ್ದಾರೆ ಅಂತಲೇ ಭಾವನೆ. ಇದು ಕೇವಲ ಸಿನಿಮಾ ಅಲ್ಲ’ ಎಂದು ಹೇಳಿದರು.

Record Break ಮಾಡಿದ ಜೇಮ್ಸ್: ಮೊದಲ ದಿನವೇ 20 ಕೋಟಿ ಕಲೆಕ್ಷನ್‌..!

ರಾಜ್ಯಾದ್ಯಂತ ಪುನೀತ್‌ ಹವಾ: ಸುಮಾರು 5 ತಿಂಗಳ ಹಿಂದೆ ಅಕಾಲಿಕವಾಗಿ ನಿಧನ ಹೊಂದಿದ ಖ್ಯಾತ ನಟ ಪುನೀತ್‌ ರಾಜ್‌ಕುಮಾರ್‌ ನಟನೆಯ ಕಡೆಯ ಚಿತ್ರ ‘ಜೇಮ್ಸ್‌’ (James) ಗುರುವಾರ ರಾಜ್ಯಾದ್ಯಂತ ತೆರೆ ಕಂಡಿದೆ. ತಮ್ಮ ನೆಚ್ಚಿನ ನಟನ ಅಗಲಿಕೆಯಿಂದ ಆಘಾತಕ್ಕೊಳಗಾಗಿದ್ದ ಪುನೀತ್‌ ಅಭಿಮಾನಿಗಳು ಚಿತ್ರವನ್ನು ಭಾವುಕರಾಗಿ ಬರಮಾಡಿಕೊಂಡಿದ್ದಾರೆ. ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಆಗಿದೆ. ಇದೇ ವೇಳೆ, ರಾಜ್ಯಾದ್ಯಂತ ಅಭಿಮಾನಿಗಳು ಪುನೀತ್‌ ಅವರ 47ನೇ ಜನ್ಮದಿನವನ್ನೂ ಅದ್ಧೂರಿಯಾಗಿ ಆಚರಿಸಿದ್ದಾರೆ.

Latest Videos
Follow Us:
Download App:
  • android
  • ios