ಎಟಿಎಂನಲ್ಲಿನ ಹಣ ಕದಿಯಲು ಯತ್ನಿಸಿದ್ದ ದರೋಡೆಕೋರರ ತಂಡವೊಂದು ಮಷಿನ್ ಎತ್ತಿಕೊಂಡು ಹೋಗುವಾಗ ಅದು ಭಾರ ಇದೆ ಎನ್ನುವ ಕಾರಣ ಅದನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಗ್ರಾಮದಲ್ಲಿ ನಡೆದಿದೆ.

ತುಮಕೂರು: ಎಟಿಎಂನಲ್ಲಿನ ಹಣ ಕದಿಯಲು ಯತ್ನಿಸಿದ್ದ ದರೋಡೆಕೋರರ ತಂಡವೊಂದು ಮಷಿನ್ ಎತ್ತಿಕೊಂಡು ಹೋಗುವಾಗ ಅದು ಭಾರ ಇದೆ ಎನ್ನುವ ಕಾರಣ ಅದನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಗ್ರಾಮದಲ್ಲಿ ನಡೆದಿದೆ.

ಗುರುವಾರ ತಡರಾತ್ರಿ ಇಂಡಿಯನ್ -1ರ ಎಟಿಎಂನಲ್ಲಿ ತುಂಬಿದ್ದ ಹಣ ಕದಿಯಲು ಯತ್ನಿಸಿದ ಕಳ್ಳರು ಹಣ ದೋಚಲು ಸಾಧ್ಯವಾಗದ ಕಾರಣ ಎಟಿಎಂ ಯಂತ್ರವನ್ನೇ ಕಳವು ಮಾಡಲು ಯತ್ನಿಸಿದ್ದಾರೆ. ಆದರೆ ಮಷಿನ್ ತುಂಬಾ ಭಾರವಾಗಿದ್ದರಿಂದ ಎತ್ತಿಕೊಂಡು ಹೋಗಲಾರದೇ ಬೀದಿಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಎಟಿಎಂ ಕೇಂದ್ರದಲ್ಲಿದ್ದ ಸಿಸಿಟೀವಿ ಕ್ಯಾಮೆರಾಗಳನ್ನು ದರೋಡೆಕೋರರು ಕಿತ್ತು ಹಾಕಿದ್ದಾರೆ. ಇನ್ನು ಎಟಿಎಂ ಘಟಕಕ್ಕೆ ಭದ್ರತೆ ಒದಗಿಸದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಎಟಿಎಂ ಕೇಂದ್ರವನ್ನು ಪರಿಶೀಲಿಸಿದಾಗ ಆರ್‌ಬಿಐ ಭದ್ರತಾ ನಿಯಮಗಳನ್ನು ಪಾಲಿಸದಿರುವುದು ಕಂಡು ಬಂದಿದೆ. ಹಾಗೂ ಘಟನೆಯ ನಂತರ ತಕ್ಷಣವೇ ಈ ಎಟಿಎಂ ಚಟುವಟಿಕಗಳನ್ನು ನಿಲ್ಲಿಸಲಾಗಿದೆ.

ಇದನ್ನೂ ಓದಿ: ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ

ಇದನ್ನೂ ಓದಿ: ಬಿಜೆಪಿಗರ ಬಳಿ 1 ಕೋಟಿ 2 ಕೋಟಿ ಮೊತ್ತದ ದುಬಾರಿ ವಾಚ್‌ಗಳಿವೆ ಚೆಕ್ ಮಾಡಿ: ಕಾಂಗ್ರೆಸ್ ಶಾಸಕ