ಮಂಡ್ಯ(ಫೆ.15): ಪ್ರೇಮಿಗಳ ದಿನದಂದೇ ಅಪ್ರಾಪ್ತ ಯುವಕನ ಮರ್ಮಾಂಗ ಕತ್ತರಿಸಿರುವ ಪೈಶಾಚಿವ ಘಟನೆ ಮಂಡ್ಯದಲ್ಲಿ ನಡೆದಿದೆ. ಕಿಡ್ನಾಪ್‌ ಮಾಡಿ ಅಪ್ರಾಪ್ತ ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಲಾಗಿದೆ.

ಪ್ರೇಮಿಗಳ ದಿನದಂದೇ ಕಿಡಿಗೇಡಿಗಳಿಂದ ಪೈಶಾಚಿಕ ಕೃತ್ಯ ನಡೆದಿದ್ದು, ಕಿಡ್ನಾಪ್‌ ಮಾಡಿ ಅಪ್ರಾಪ್ತ ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಲಾಗಿದೆ. ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಬಳಿ ನಿನ್ನೆ ಘಟನೆ ನಡೆದಿದ್ದು, ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಕಾಲೇಜು ಯುವಕನ್ನು‌ ಕಾರಿನಲ್ಲಿ ಅಪಹರಿಸಲಾಗಿದೆ.

ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿದ ಪ್ರೇಮಿಗಳು...!

ಡ್ರಾಪ್ ಕೊಡುವ ನೆಪದಲ್ಲಿ ದುಷ್ಕೃತ್ಯ ನಡೆಸಲಾಗಿದ್ದು, ಅಪ್ರಾಪ್ತ ಬಾಲಕ ಬಸ್ಸಿಗಾಗಿ ಒಬ್ಬನೇ ಕಾಯುತ್ತಿದ್ದ. ಡ್ರಾಪ್ ಕೊಡುವುದಾಗಿ ಕಾರಿಗೆ ಹತ್ತಿಸಿಕೊಂಡು ತೆರಳಿದ್ದಾರೆ. 3-4 ಕಿ.ಮೀ ಕರೆದೋಯ್ದು ಮರ್ಮಾಂಗ ಕತ್ತರಿಸಿ ರಸ್ತೆ ಬದಿಗೆ ಬಿಸಾಡಿ ಪರಾರಿಯಾಗಿದ್ದಾರೆ.

ಅಕ್ರಮ ಸಂಬಂಧ: ಪತ್ನಿಯ ಗುಪ್ತಾಂಗಕ್ಕೆ ಗಮ್ ಹಾಕಿದ ಪತಿ..!

ಕೆ.ಆರ್.ಪೇಟೆ ಪಟ್ಟಣದ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದ ಯುವಕನನ್ನು ಅಪಹರಿಸಿ ಮರ್ಮಾಂಗ ಕತ್ತರಿಸಿ ಯುವಕನನ್ನು ಮಾರ್ಗ ಮಧ್ಯೆ ಬಿಟ್ಟು ಹೋಗಲಾಗಿದೆ. ತೀವ್ರವಾಗಿ ಗಾಯಗೊಂಡ ಅಪ್ರಾಪ್ತ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ. ಅಪ್ರಾಪ್ತ ಯುವಕನ ಪೋಷಕರು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಳ್ಳತನಕ್ಕೋ, ಮಂಗಳಮುಖಿಯರ ಕೃತ್ಯವೋ..?

ಘಟನೆ ಹಲವು ಅನುಮಾನಕ್ಕೆ ಕಾರಣವಾಗಿದೆ. ಬಾಲಕ ರೋಲ್ ಗೋಲ್ಡ್ ಸರ ಧರಿಸಿದ್ದ. ಸರ ಕಳ್ಳತನ ಮಾಡಲು ಅಪಹರಿಸಿ, ರೋಲ್ ಗೋಲ್ಡ್ ಎಂದು ತಿಳಿದ ಬಳಿಕ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದ್ದು, ಅಥವಾ ಮರ್ಮಾಂಗ ಕತ್ತರಿಸಿ ಮಂಗಳ ಮುಖಿಯನ್ನಾಗಿ ಮಾಡುವ ಉದ್ದೇಶ ಎಂಬ ಶಂಕೆಯೂ ಕೇಳಿ ಬಂದಿದೆ. ಹಲವು ಆಯಾಮಗಳಲ್ಲಿ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ.

#NewsIn100Seconds ಈ ಕ್ಷಣದ ಪ್ರಮುಖ ಸುದ್ದಿಗಳು

"

ಫೆಬ್ರವರಿ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ