Woman Harassment : ಠಾಣೆಯಲ್ಲಿಯೆ ಕಾರ್ಮಿಕ ಮಹಿಳೆ ಮೇಲೆ ಪಿಎಸ್‌ಐ ದೌರ್ಜನ್ಯ
- ಠಾಣೆಯಲ್ಲಿಯೆ ಕಾರ್ಮಿಕ ಮಹಿಳೆ ಮೇಲೆ ಪಿಎಸ್‌ಐ ದೌರ್ಜನ್ಯ
- ಜಾಲತಾಣಗಳಲ್ಲಿ ಹರಿದಾಡಿದ ಹಲ್ಲೆ ನಡೆಸುವ ದೃಶ್ಯದ ವಿಡಿಯೋ: ಕ್ರಮಕ್ಕೆ ಆಗ್ರಹ
ಚಿಕ್ಕಬಳ್ಳಾಪುರ (ಡಿ.25): ಒರಿಸ್ಸಾ ಮೂಲದ ಕೂಲಿ ಕಾರ್ಮಿಕ ಮಹಿಳೆ (Labour woman) ಮೇಲೆ ಠಾಣೆಯಲ್ಲಿ (police Station) ಪಿಎಸ್‌ಐ (PSI) ಒಬ್ಬರು ಲಾಠಿಯಿಂದ ಹೊಡೆದಿರುವ ದೃಶ್ಯಗಳು ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದ್ದು ಈ ಬಗ್ಗೆ ಪಿಎಸ್‌ಐ (PSI) ವಿರುದ್ಧ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿ ಬಂದಿದೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣೆ ಪಿಎಸ್‌ಐ (PSI) ಪಾಪಣ್ಣ, ಸ್ಥಳೀಯವಾಗಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕ ಮಹಿಳೆಯನ್ನು (Woman) ಮಾಲೀಕನ ದೂರಿನ ಸಂಬಂದ ಠಾಣೆಗೆ ಕರೆಸಿ ಬುದ್ಧಿವಾದ ಹೇಳುವ ನೆಪದಲ್ಲಿ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಮಹಿಳೆಯನ್ನು ನೆಲದ ಮೇಲೆ ಕೂರಿ ಆಕೆಯ ಎರಡು ಪಾದಗಳಿಗೆ ಪಿಎಸ್‌ಐ ಪಾಪಣ್ಣ ಲಾಠಿಯಿಂದ ಹೊಡೆದಿರುವ ದೃಶ್ಯಗಳು ವಿಡಿಯೋದಲ್ಲಿ ಕಂಡು ಬಂದಿದೆ. ಅಲ್ಲದೇ ಪೊಲೀಸ್ (Police) ಸಿಬ್ಬಂದಿ ಕೂಡ ಆಕೆಯ ಮೇಲೆ ದೈಹಿಕವಾಗಿ ದೌರ್ಜನ್ಯ ( Harassment) ನಡೆಸಿರುವುದು ಕಂಡು ಬಂದಿದ್ದು, ಇದೊಂದು ಮಾನವ ಹಕ್ಕುಗಳ ಉಲ್ಲಂಘನೆ ಜೊತೆಗೆ ಮಹಿಳೆ ಮೇಲೆ ಪೊಲೀಸ್ ಅಧಿಕಾರಿ ದರ್ಪ, ದೌರ್ಜನ್ಯ ನಡೆಸಿರುವುದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಕೂಡಲೇ ಪಾಪಣ್ಣರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಈ ಕುರಿತು ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ಸಾಮಾಜಿಕ ಹೋರಾಟಗಾರ ಶಿಡ್ಲಘಟ್ಟದ ಅರುಣ್ ಕುಮಾರ್ ಎಂಬಾದ ಸುದ್ದಿಗೋಷ್ಠಿ ನಡೆಸಿ ಕೂಡಲೇ ಎಸ್ಪಿ ಮಧ್ಯಪ್ರವೇಶಿಸಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ದೊರೆಕಿಸಿ ಕೊಟ್ಟು ಆಕೆಯ ಮೇಲೆ ದೌರ್ಜನ್ಯ ನಡೆಸಿರುವ ಪಿಎಸ್‌ಐ ವಿರುದ್ದ ಕ್ರಮ ಕೈಗೊಳ್ಳಬೇಕೆಂದರು.
ಅಂಕಲ್ ಎಂದಿದ್ದೆ ತಪ್ಪಾಯ್ತು : ಯುವತಿ ಮೇಲೆ ಅಂಗಡಿ ಮಾಲೀಕ ಮಾರಣಾಂತಿಕ ಹಲ್ಲೆ(Attack) ಮಾಡಿದ್ದಾನೆ. ಹಲ್ಲೆಗೆ ಕಾರಣ ಮಾತ್ರ ವಿಚಿತ್ರವಾಗಿದೆ. ಉತ್ತರಾಖಂಡ್‌ನ (Uttarakhand) ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್‌ಗಂಜ್ ಪಟ್ಟಣದಿಂದ ಘಟನೆ ವರದಿಯಾಗಿದೆ. 35 ವರ್ಷದ ಅಂಗಡಿಯ 18 ವರ್ಷದ ಯುವತಿ ಮೇಲೆ ಹಲ್ಲೆ ಮಾಡಿದ್ದು ಯುವತಿಯ ತಲೆಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಗಡಿ ಮಾಡಲೀಕನನ್ನು ಯುವತಿ 'ಅಂಕಲ್' (Uncle)ಎಂದು ಕರೆದಿದ್ದಕ್ಕೆ ಎರಗಿದ್ದಾನೆ. ಗಾಯಗೊಂಡ ಯುವತಿಗೆ ಆಕ್ಸಿಜನ್ ಸಪೋರ್ಟ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. , ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 354 (ಮಹಿಳೆಯೊಬ್ಬಳು ತನ್ನ ನಮ್ರತೆಗೆ ಆಕ್ರೋಶ ವ್ಯಕ್ತಪಡಿಸಲು ಹಲ್ಲೆ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಅಂಗಡಿಯವನ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಡಿಸೆಂಬರ್ 19 ರಂದು ಹದಿಹರೆಯದ ಹುಡುಗಿ ಬ್ಯಾಡ್ಮಿಂಟನ್ ರಾಕೆಟ್ ಖರೀದಿಸಿದ್ದಳು. ಮಂಗಳವಾರ ಅದನ್ನು ಬದಲಾಯಿಸಿಕೊಳ್ಳಲು ಹೋಗಿದ್ದಳು. ರಾಕೆಟ್ ನ ಕೆಲವು ತಂತಿಗಳು ಮುರಿದು ಹೋಗಿದ್ದವು.
ಈ ವೇಳೆ ಅಂಗಡಿ ಮಾಲೀಕ ಮೋಹಿತ್ ಕುಮಾರ್ ನನ್ನು ಅಂಕಲ್ ಎಂದು ಕರೆದಿದ್ದಾಳೆ. ಏಕಾಏಕಿ ಸಿಟ್ಟಿಗೆದ್ದ ಮೋಹಿತ್ ಹಲ್ಲೆ ಮಾಡಿದ್ದಾನೆ. ಪೊಲೀಸರಿಗೆ ಘಟನೆಯ ಮಾಹಿತಿ ಹೋಗಿದ್ದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಅತ್ತಿಗೆ ಮೇಲೆಯೇ ರೇಪ್ : ಆಕೆಯ ಸಹೋದರಿ ತನ್ನ ಮಗುವಿನ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಮಹಿಳೆಯ ಕುಟುಂಬವು ದರ್ಭಾಂಗಾಕ್ಕೆ ತೆರಳಿತ್ತು. ಕೃತ್ಯ ಎಸಗಿರುವುದನ್ನು ಪಾಪಿ ಒಪ್ಪಿಕೊಂಡಿದ್ದಾನೆ. .ತನಗೆ ಅವಮಾನ ಮಾಡಿದ್ದಕ್ಕಾಗಿ ಸೇಡಿ ತೀರಿಸಿಕೊಳ್ಳಲು ಇಂಥ ಕೃತ್ಯ ಮಾಡಿದೆ ಎಂದು ಹೇಳಿದ್ದಾನೆ. ಪ್ರಕರಣವೊಂದರಲ್ಲಿ ಸಂತ್ರಸ್ತೆ ಕುಟುಂಬಸ್ಥರ ಎದುರಿನಲ್ಲಿ ಈತನ ಕೆನ್ನೆಗೆ ಬಾರಿಸಿದ್ದರು. ಆರೋಫಿ ಮತ್ತು ಆತನ ಹೆಂಡತಿಯ ನಡುವೆ ವಿವಾದ ಎದ್ದು ಪಂಚಾಯಿತಿ ಮೆಟ್ಟಿಲು ಏರಿತ್ತು. ಆರೋಪಿಯನ್ನು ವಶಕ್ಕೆ ಪಡೆದಿದ್ದು ಆತನ ಮೊಬೈಲ್ ಮತ್ತು ದೋಚಿದ್ದ ಕೆಲ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಜಯಂತ್ ಕುಮಾರ್ ತಿಳಿಸಿದ್ದಾರೆ.