Pragya Singh: ಪ್ರಚೋದನಕಾರಿ ಭಾಷಣ: ಸಾಧ್ವಿ ಪ್ರಜ್ಞಾ ಸಿಂಗ್ ವಿರುದ್ಧ ಕಾಂಗ್ರೆಸ್ ದೂರು
ಭಾನುವಾರ ನಗರದಲ್ಲಿ ನಡೆದ ದಕ್ಷಿಣ ಪ್ರಾಂತ ಹಿಂದೂ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧ ಕಾಂಗ್ರೆಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಶಿವಮೊಗ್ಗ (ಡಿ.28) : ಭಾನುವಾರ ನಗರದಲ್ಲಿ ನಡೆದ ದಕ್ಷಿಣ ಪ್ರಾಂತ ಹಿಂದೂ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧ ಕಾಂಗ್ರೆಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ತೆಹಸೀನ ಪೂನಾವಾಲ(Tehseen Poonawalla) ಅವರ ಪರವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ದೂರು ನೀಡಿದ್ದಾರೆ. ತೆಹಸೀನ ಪೂನಾವಾಲ ಉದ್ಯಮಿ ಆಗಿದ್ದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡರಾಗಿದ್ದಾರೆ.
ಡಿ. 25 ರಂದು ಶಿವಮೊಗ್ಗ(Shivamogga)ದಲ್ಲಿ ಹಿಂದೂ ಜಾಗರಣ ವೇದಿಕೆ(Hindu jagaran Vedike)ಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 3 ನೇ ತ್ರೈ ವಾರ್ಷಿಕ ಪ್ರಾಂತ ಸಮ್ಮೇಳನದ ಸಾರ್ವಜನಿಕ ಭಾಷಣದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂಬ ಕಾರಣಕ್ಕೆ ಆನ್ ಲೈನ್(Online)ನಲ್ಲಿ ಶಿವಮೊಗ್ಗದ ಎಸ್ಪಿಗೆ ಪೂನಾವಾಲ ದೂರು ಸಲ್ಲಿಸಿದ್ದರು.
ಭಾರತದ ಶಿರ ಕಾಶ್ಮೀರ ಕತ್ತರಿಸಲು ಬಿಡಲ್ಲ: ಸಾಧ್ವಿ ಪ್ರಜ್ಞಾ ಸಿಂಗ್
ಆನ್ ಲೈನ್ ನಲ್ಲಿ ತಮಗೆ ಬಂದ ದೂರನ್ನ ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೆ ರವಾನಿಸಿದ್ದರು. ಕೋಟೆ ಪೊಲೀಸರು ತೆಹಸೀನ್ ಪೂನಾವಾಲರಿಗೆ ಇಂದು ಬೆಳಗ್ಗೆ ಖುದ್ದು ಹಾಜರಾಗಿ ದೂರು ಸಲ್ಲಿಸಲು ಸೂಚಿಸಿದ್ದರು. ಸಮಯದ ಅಭಾವದಿಂದಾಗಿ ಪೂನಾವಾಲ ಶಿವಮೊಗ್ಗಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನುವ ಕಾರಣಕ್ಕೆ ಅವರ ಪರವಾಗಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್(HS Sundaresh)ನೇತೃತ್ವದಲ್ಲಿ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್(Sadhvi Pragnya Singh Thakur) ಪ್ರಚೋದನ ಭಾಷಣದ ವಿರುದ್ಧ ಕಾಂಗ್ರೆಸ್(Congress) ದೂರು ದಾಖಲಿಸಿದೆ. ಇದಕ್ಕೂ ಮೊದಲು ಟಿಎಂಸಿ ಸಂಸದ ಸಾಕೇತ್ ಗೋಖಲೆ ಅವರು ಶಿವಮೊಗ್ಗದಲ್ಲಿ ಪ್ರಚೋದನ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸಾದ್ವಿ ಪ್ರಜ್ಞಾಸಿಂಗ್ ವಿರುದ್ಧ ಶಿವಮೊಗ್ಗ ಎಸ್ಪಿಗೆ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅವರಿಗೂ ಸಹ ಡಿ.30 ರಂದು ಶಿವಮೊಗ್ಗದ ಕೋಟೆ ಠಾಣೆಗೆ ಖುದ್ದಾಗಿ ಹಾಜರಾಗಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
Malegaon Blast: ಸ್ಪೋಟಕವಿದ್ದ ಸ್ಕೂಟರ್ ಹಾಗೂ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ನಡುವೆ ಲಿಂಕ್!