Malegaon Blast: ಸ್ಪೋಟಕವಿದ್ದ ಸ್ಕೂಟರ್ ಹಾಗೂ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ನಡುವೆ ಲಿಂಕ್!
2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಧಿವಿಜ್ಞಾನ ತಜ್ಞರು ಸ್ಫೋಟ ಸ್ಥಳದಿಂದ ಪತ್ತೆಯಾದ ಎಲ್‌ಎಂಎಲ್ ವೆಸ್ಪಾ ಸ್ಕೂಟರ್‌ನಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು. ಈ ಸ್ಕೂಟರ್ ಹಾಗೂ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ನಡುವೆ ಲಿಂಕ್ ಇದೆ ಎಂದು ಅವರು ಹೇಳಿದ್ದಾರೆ.
ಮುಂಬೈ (ಆ. 3): 2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ 261 ನೇ ಸಾಕ್ಷಿ ಎನಿಸಿಕೊಂಡ ವಿಧಿವಿಜ್ಞಾನ ತಜ್ಞರೊಬ್ಬರು ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಮಹತ್ವವಾದ ವಿಚಾರ ತಿಳಿಸಿದ್ದಾರೆ, ಸ್ಫೋಟದ ಸ್ಥಳದಿಂದ ವಶಪಡಿಸಿಕೊಂಡ ಎಲ್‌ಎಂಎಲ್ ವೆಸ್ಪಾ ಸ್ಕೂಟರ್ ಸೇರಿದಂತೆ ಹಲವಾರು ವಸ್ತುಗಳಲ್ಲಿ ಸ್ಫೋಟಕಗಳ ಕುರುಹುಗಳು ಕಂಡುಬಂದಿವೆ. ದ್ವಿಚಕ್ರ ವಾಹನವನ್ನು ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದಿದ್ದಾರೆ. 2008ರ ಸೆಪ್ಟೆಂಬರ್ 29 ರಂದು, ನಾಸಿಕ್ ಜಿಲ್ಲೆಯ ಮಾಲೆಗಾಂವ್ ಪಟ್ಟಣದ ಮಸೀದಿಯ ಬಳಿ ಮೋಟಾರ್ ಸೈಕಲ್‌ಗೆ ಕಟ್ಟಲಾಗಿದ್ದ ಬಾಂಬ್ ಸ್ಫೋಟಗೊಂಡಾಗ ಆರು ಜನರು ಸಾವನ್ನಪ್ಪಿದರು ಮತ್ತು 100 ಜನರು ಗಾಯಗೊಂಡಿದ್ದರು. 2008 ರಲ್ಲಿ ಸಹಾಯಕ ರಾಸಾಯನಿಕ ವಿಶ್ಲೇಷಕರಾಗಿ ಕೆಲಸ ಮಾಡಿದ ವಿಧಿವಿಜ್ಞಾನ ತಜ್ಞರು, ಸ್ಫೋಟದ ಸ್ಥಳದಿಂದ ವಶಪಡಿಸಿಕೊಂಡ ಸ್ಕೂಟರ್‌ನಲ್ಲಿ ಅಮೋನಿಯಂ ನೈಟ್ರೇಟ್ ಕುರುಹುಗಳು ಕಂಡುಬಂದಿವೆ ಎಂದು ಹೇಳಿದರು. ಅಮೋನಿಯಂ ನೈಟ್ರೇಟ್ ಅನ್ನು ಸ್ಫೋಟಕವಾಗಿ ಬಳಸಲಾಗುತ್ತದೆ ಎಂದು ಸಾಕ್ಷಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಸಾಕ್ಷಿಯ ವಿಚಾರಣೆ ಇನ್ನೂ ಕೆಲವು ದಿನಗಳ ಕಾಲ ನಡೆಯಲಿದೆ.
ಅವಿನಾಶ್ ರಸಲ್ ವಿಚಾರಣೆ: 2008 ರಲ್ಲಿ ಸ್ಫೋಟದ ಸ್ಥಳಕ್ಕೆ ಹೋಗಿದ್ದಾಗ ಎಲ್‌ಎಂಎಲ್ ವೆಸ್ಪಾ ಸ್ಕೂಟರ್ ಗಂಭೀರವಾಗಿ ಹಾನಿಗೊಳಗಾದ ಸ್ಥಿತಿಯಲ್ಲಿ ನೋಡಿದೆ ಎಂದು ವಿಧಿವಿಜ್ಞಾನ ತಜ್ಞರು ನ್ಯಾಯಾಲಯಕ್ಕೆ ತಿಳಿಸಿದರು. ಹೋಂಡಾ ಯುನಿಕಾರ್ನ್, ಬೈಸಿಕಲ್ ಸೇರಿದಂತೆ ಇತರೆ ವಾಹನಗಳಿಗೂ ಭಾಗಶಃ ಹಾನಿಯಾಗಿದ್ದವು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವಿನಾಶ್ ರಸಲ್ ಅವರ ವಿಚಾರಣೆಯ ವೇಳೆ ಈಗ ನಿವೃತ್ತರಾಗಿರುವ ವಿಧಿವಿಜ್ಞಾನ ತಜ್ಞರು ತಮ್ಮ ಕೆಲಸವನ್ನು ವಿವರವಾಗಿ ವಿವರಿಸಿದ್ದಾರೆ.
Malegaon Blast: ಪ್ರಕರಣದಲ್ಲಿ ಭಾರಿ ಟ್ವಿಸ್ಟ್: ಉಲ್ಟಾ ಹೊಡೆದ ಸಾಕ್ಷಿ
ಇಂಜಿನ್ ಸಂಖ್ಯೆಯನ್ನು ಅಳಿಸಿಹಾಕಲಾಗಿತ್ತು: ಪೊಲೀಸರು ಕಳುಹಿಸಿದ್ದ ವಸ್ತು ಸಾಕ್ಷ್ಯಗಳ ರಾಸಾಯನಿಕ ವಿಶ್ಲೇಷಣೆ ಮತ್ತು ರಾಸಾಯನಿಕ ವಿಶ್ಲೇಷಣೆ ವರದಿಯನ್ನು ಒದಗಿಸುವುದು ಮತ್ತು ಸ್ಫೋಟದ ಸ್ಥಳಕ್ಕೆ ಭೇಟಿ ನೀಡುವುದು ಅವರ ಕೆಲಸದಲ್ಲಿ ಭಾಗವಾಗಿತ್ತು ಎಂದು ತಜ್ಞರು (forensic expert) ಹೇಳಿದ್ದಾರೆ. ಸ್ಕೂಟರ್‌ನ ಎಂಜಿನ್ ಸಂಖ್ಯೆಯನ್ನು ಸ್ಕ್ರಾಚ್ ಮಾಡಲಾಗಿತ್ತು. ಆದರೆ, ನಮ್ಮ ಕಾರ್ಯವಿಧಾನದ ಮೂಲಕ ಬೈಕ್‌ನಿಂದ ಮೂರು ಸಂಭವನೀಯ ಎಂಜಿನ್ ಸಂಖ್ಯೆಗಳನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದರು ಎಂದು ಸಾಕ್ಷಿ ಹೇಳಿದ್ದಾರೆ. ನಾವು ನಂಬರ್‌ಗಳನ್ನು ರಿಕವರಿ ಮಾಡುವವರೆಗೂ ಪ್ಲೇಟ್‌ನಲ್ಲಿ ಯಾವುದೇ ನಂಬರ್‌ಗಳು ಇದ್ದಿರಲಿಲ್ಲ ಎಂದು ನಾವು ಕಂಡುಕೊಂಡಿದ್ದೆವು ಎಂದಿದ್ದಾರೆ.ಈ ಸಾಕ್ಷಿಯ ವಿಚಾರಣೆ ಇನ್ನೂ ಕೆಲವು ದಿನಗಳ ಕಾಲ ನಡೆಯಲಿದೆ.
ರಕ್ಷಣಾ ಸಚಿವಾಲಯದ ಸಮಿತಿಗೆ ಸಾಧ್ವಿ: ವಿಪಕ್ಷಗಳ ಪ್ರಶ್ನೆ ಇದ್ಹೇಗೆ ಸಾಧ್ಯ?
ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದ ಮಹಾರಾಷ್ಟ್ರದ ಎಟಿಎಸ್: ಸ್ಪೋಟದ ಬಳಿಕ ವಶಪಡಿಸಿಕೊಂಡಿದ್ದ ಎರಡು ದ್ವಿಚಕ್ರವಾಹನಗಳು ಮತ್ತು ಐದು ಸೈಕಲ್‌ಗಳನ್ನು ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಕಚೇರಿಯಿಂದ ನ್ಯಾಯಾಲಯಕ್ಕೆ ತರಲಾಯಿತು. ವಿಶೇಷ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಸಿಬ್ಬಂದಿ, ಸಾಕ್ಷಿ ಮತ್ತು ಆರೋಪಿಗಳು ನ್ಯಾಯಾಲಯದಿಂದ ವಾಹನಗಳನ್ನು ನಿಲ್ಲಿಸಿದ ಸ್ಥಳಕ್ಕೆ ಆಗಮಿಸಿದ್ದರು. ಎಲ್ಲರೂ ವಾಹನಗಳನ್ನು ಪರಿಶೀಲಿಸಿದರಾದರೂ, ಫೋಟೋ ತೆಗೆಯಲು ಅವಕಾಶ ನೀಡಲಿಲ್ಲ. 2019 ರಲ್ಲಿ ಪಂಚ ಸಾಕ್ಷಿಯಾಗಿ ಕೆಲಸ ಮಾಡಿದ ಇನ್ನೊಬ್ಬ ಸಾಕ್ಷಿ ಸ್ಫೋಟದ ಸ್ಥಳದಲ್ಲಿದ್ದ ಈ ಬೈಕ್ ಅನ್ನು ಗುರುತಿಸಿದ್ದರು. 2008ರ ಸೆಪ್ಟೆಂಬರ್ 29 ರಂದು ಮಾಲೆಗಾಂವ್‌ನ ಭಿಕು ಚೌಕ್‌ನಲ್ಲಿ ಸ್ಕೂಟರ್‌ನಲ್ಲಿ ಬಾಂಬ್ ಇರಿಸಲಾಗಿದ್ದು ಆರು ಮಂದಿ ಸಾವನ್ನಪ್ಪಿದರು ಮತ್ತು ನೂರಕ್ಕೂ ಹೆಚ್ಚು ಜನರು ಗಾಯಗೊಂಡರು ಎಂದು ಪ್ರಾಸಿಕ್ಯೂಷನ್ ಹೇಳಿದೆ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸುವ ಮೊದಲು ಮಹಾರಾಷ್ಟ್ರ ಎಟಿಎಸ್ (ATS) ಆರಂಭದಲ್ಲಿ ತನಿಖೆ ನಡೆಸಿತ್ತು.