ಕೋಲಾರ(ಜ.08): ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಕೋಲಾರದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಮುಂದೆ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರದ ಟೋಲ್ ಗೇಟ್ ಬಳಿಯಿರುವ ಕೆಎಸ್‌ಆರ್‌ಟಿಸಿ ಬಸ್‌ ಡಿಪೋದಲ್ಲಿ ಬಂದ್ ಹಿನ್ನೆಲೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರು.

"

KSRTC ಡಿಪೋ ಮುಂದೆ ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಕಾರ್ಮಿಕ ಸಂಘಟನೆಗಳು ಬೆಳಗ್ಗೆ 5 ಗಂಟೆಯಿಂದಲೂ ಪ್ರತಿಭಟನೆ ನಡೆಸುತ್ತಿತ್ತು. ಬಸ್ ಹೊರಹೋಗದಂತೆ ತಡೆದು ಪ್ರತಿಭಟಿಸುತ್ತಿದ್ದವರನ್ನು ಬಂಧಿಸಲಾಗಿದೆ.

ಬಲವಂತ ಬಂದ್‌ ಮಾಡಿಸಿದರೆ ಕ್ರಮ: ಭಾಸ್ಕರ್ ರಾವ್ ಎಚ್ಚರಿಕೆ

ಡಿಪೋ ಮುಂಭಾಗ 1 KSRP,1 DR ತುಕ್ಕಡಿ ಸೇರಿದಂತ್ತೆ 70 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ರಾಜ್ಯ ಹಲವು ಕಡೆ ಬಂದ್ ಬಿಸಿ ಅಷ್ಟಾಗಿ ತಟ್ಟಿಲ್ಲ. ಎಂದಿನಂತೆ ಬಸ್‌ಗಳೂ ಓಡಾಡುತ್ತಿವೆ.

2020ರ ಮೊದಲ ಭಾರತ್ ಬಂದ್ ಬುಧವಾರ ನಡೆಯುತ್ತಿದ್ದು, ಜನವರಿ 08 ಬುಧವಾರ 10ಕ್ಕೂ ಹೆಚ್ಚು ಟ್ರೇಡ್ ಯೂನಿಯನ್‌ಗಳು ಬಂದ್‌ಗೆ ಕರೆ ನೀಡಿವೆ.