'ತನ್ನ ಅವನತಿಯ ಪುಟಗಳನ್ನು ಬಿಜೆಪಿ ತಾನೇ ಬರೆಯುತ್ತಿದೆ'..!
ಡಿ. ಕೆ. ಶಿವಕುಮಾರ್ ಬಂಧನವನ್ನು ವಿರೋಧಿಸಿ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯುತ್ತಿದ್ದು, ಕೊಪ್ಪದಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಕಾಂಗ್ರೆಸ್ ಮುಕ್ತವಾಗಿಸುವ ಗುಂಗಿನಲ್ಲಿರುವ ಬಿಜೆಪಿ ತನ್ನ ಅವನತಿಯ ಪುಟಗಳನ್ನು ತಾನೇ ಬರೆದುಕೊಳ್ಳತೊಡಗಿದೆ ಎಂದು ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಸುಧೀರ್‌ಕುಮಾರ್ ಮುರೊಳ್ಳಿ ಅಭಿಪ್ರಾಯಿಸಿದರು.
ಚಿಕ್ಕಮಗಳೂರು(ಸೆ.06): ಕಾಂಗ್ರೆಸ್ ಮುಕ್ತವಾಗಿಸುವ ಗುಂಗಿನಲ್ಲಿರುವ ಬಿಜೆಪಿ ತನ್ನ ಅವನತಿಯ ಪುಟಗಳನ್ನು ತಾನೇ ಬರೆದುಕೊಳ್ಳತೊಡಗಿದೆ ಎಂದು ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಸುಧೀರ್‌ಕುಮಾರ್ ಮುರೊಳ್ಳಿ ಅಭಿಪ್ರಾಯಿಸಿದರು.
ಮಾಜಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇ.ಡಿ. ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸಿ ಬುಧವಾರ ಪಟ್ಟಣದಲ್ಲಿ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗೌರವಾನ್ವಿತ ಐ.ಟಿ., ಇ.ಡಿ.ಗಳಂತಹ ಸಂಸ್ಥೆಗಳನ್ನು ತಮ್ಮ ಸ್ವಹಿತಾರಕ್ಷಣೆಯ ಅಸ್ತ್ರಗಳನ್ನಾಗಿಸಿಕೊಂಡು ತಮ್ಮ ವಿರುದ್ಧದ ಧ್ವನಿಗಳನ್ನು ಅಡಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡನೀಯ ಮತ್ತು ಸಂವಿಧಾನ ವಿರೋಧಿಯಾಗಿದೆ ಎಂದರು.
ಚಿಕ್ಕಮಗಳೂರಲ್ಲಿ ಮತ್ತೆ ಮಳೆ : ಭೂಮಿಯೊಳಗೆ ಭಾರೀ ಶಬ್ದ
ಕ್ರಿಮಿನಲ್ ಹಿನ್ನೆಲೆಯುಳ್ಳ ಅಮಿತ್ ಷಾ ಅವರಂಥವರಿಂದ ಮಾತ್ರ ಇಂತಹ ದ್ವೇಷ ರಾಜಕರಣ ಸಾಧ್ಯ ಎನ್ನುವುದು ಕೆ.ಚಿದಂಬರ್ ಮತ್ತು ಡಿ.ಕೆ.ಶಿವಕುಮಾಋು ಪ್ರಕರಣಗಳಿಂದ ಸಾಬೀತಾಗಿದೆ. ರಾಜಕೀಯ ಗಾಜಿನ ಮನೆ ಯಾರಿಗೂ ಶಾಶ್ವತವಲ್ಲ ಎನ್ನುವುದನ್ನು ಬಿಜೆಪಿ ಮರೆತಂತಿದೆ ಎಂದರು.
4 ದಿನಗಳ ಕಾಲ ವಿಚಾರಣೆಯ ನೆಪದಲ್ಲಿ ಡಿ.ಕೆ.ಶಿವಕುಮಾರ್ ಅವರಿಂದ ಶರಣಾಗತಿಯ ಮಾತುಗಳನ್ನಾಡಿಸಲು ಪ್ರಯತ್ನಿಸಿದ ಇ.ಡಿ. ಅಧಿಕಾರಿಗಳು ಅದು ಸಾಧ್ಯವಾಗದೇ ಹೋದಾಗ ಅವರನ್ನು ಬಂಧಿಸಿದೆ ಎಂದು ಆರೋಪಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾಂಗ್ರೆಸ್ ಕಿಸಾನ್ ಸೆಲ್ ರಾಜ್ಯಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ಬಿಜೆಪಿ ಅತ್ಯಾಚಾರಿ, ಭ್ರಷ್ಟಾಚಾರಿಗಳನ್ನು ತನ್ನ ಪಕ್ಷದಲ್ಲಿಟ್ಟುಕೊಂಡು ಅವರ ಮೇಲೆ ಕ್ರಮ ಜರುಗಿಸದೆ ವಿರೋಧ ಪಕ್ಷಗಳ ದಮನಕ್ಕೆ ಮುಂದಾಗಿ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿದರು.
ಮುಖಂಡರಾದ ಬಾಳೆಮನೆ ನಟರಾಜ್, ಅಸಗೋಡು ನಾಗೇಶ್, ಬಿ.ಎಂ. ಸುದೇವ್, ಕೆ.ಎಸ್. ರವೀಂದ್ರ, ಡಿ.ಬಿ. ರಾಜೇಂದ್ರ, ನುಗ್ಗಿ ಮಂಜು ಮುಂತಾದವರಿದ್ದರು.